Soujanya Delhi Protest: ಧರ್ಮಸ್ಥಳ ನಿರ್ಭಯಾ: ದೆಹಲಿಯಲ್ಲಿ ಇದೆಲ್ಲ ನಡೆದಿದ್ದರೆ ಕಾಮಾಂಧರನ್ನು ಎನ್ಕೌಂಟರ್ ಮಾಡಿ ಬಿಡುತ್ತಿದ್ದೆವು – ವ್ಯಗ್ರ ದೆಹಲಿ ಪೊಲೀಸರ ಹೇಳಿಕೆ !

Soujanya Protest: ದೆಹಲಿಯಲ್ಲಿ ಸೌಜನ್ಯಾಪರ ಹೋರಾಟಗಾರರು ಹಮ್ಮಿಕೊಂಡ ಹೋರಾಟಕ್ಕೆ ಬಹುದೊಡ್ಡ ಯಶಸ್ಸು ಮತ್ತು ಪ್ರಚಾರ ಸಿಕ್ಕಿದೆ. ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದಲ್ಲಿ ನಡೆದ ನಿರಂತರ ನರಮೇಧ ಕಂಡು ದೆಹಲಿ ಪೊಲೀಸರು ವ್ಯಗ್ರಗೊಂಡಿದ್ದಾರೆ. ನಿರ್ಭಯ ಥರ ಒಂದೇ ಪ್ರಕರಣ ದೆಹಲಿಯಲ್ಲಿ ನಡೆದಿದ್ದರೆ ಕಾಮಾಂಧರನ್ನು ಎನ್ಕೌಂಟರ್ ಮಾಡಿ ಬಿಸಾಕಿರುತ್ತಿದ್ದೆವು ಎಂಬುದಾಗಿ ದೆಹಲಿ ಪೊಲೀಸರು ಹೇಳಿದ್ದಾರೆ. ದೆಹಲಿಯಲ್ಲಿ ಗಮನ ಸೆಳೆದ ಸೌಜನ್ಯಪರ ಹೋರಾಟ ಇನ್ನು ಪ್ರಧಾನಿ ಮೋದಿಯ ಮನಸ್ಸು ತಟ್ಟಲು ಕೇವಲ ಒಂದು ಹಂತ ಮಾತ್ರ ಬಾಕಿ ಇದೆ. ಅಷ್ಟರ ಮಟ್ಟಿಗೆ ದೆಹಲಿಯಲ್ಲಿ ನಡೆದ ಸೌಜನ್ಯ ಹೋರಾಟ ಅದ್ಭುತ ಪೂರ್ವ ಯಶಸ್ಸು ಕಂಡಿದೆ.

Parliment Election: ಟಿಕೆಟ್ ಮಿಸ್ ಆಗಿದ್ದಕ್ಕೆ ತಮಿಳುನಾಡು ಸಂಸದ ವಿಷ ಕುಡಿದು ಆತ್ಮಹತ್ಯೆಗೆ ಯತ್ನ!!

ಧರ್ಮಸ್ಥಳದಲ್ಲಿ ನಡೆದಂತಹ ನಿರಂತರ ಅತ್ಯಾಚಾರಗಳು, ಮತ್ತು 482 ಕ್ಕೂ ಅಧಿಕ ನರಮೇಧಗಳ ಕುರಿತು ಸಂಪೂರ್ಣ ಮಾಹಿತಿಯನ್ನು ನಾವು ಅಲ್ಲಿನ ಪೊಲೀಸರಿಗೆ ನೀಡಿದ್ದೇವೆ. ಅದನ್ನೆಲ್ಲ ಕೇಳಿ ಅವರು ಬಹಳಷ್ಟು ಆಶ್ಚರ್ಯಗೊಂಡಿದ್ದು, ದೆಹಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಕೊಲೆ ಪ್ರಕರಣ ನಡೆದಿರುವುದೇ ಅಷ್ಟೊಂದು ದೊಡ್ಡ ಘಟನೆಯಾಗಿತ್ತು. ನಿಮ್ಮಲ್ಲಿ ಯಾಕೆ ಅಷ್ಟೊಂದು ಕೊಲೆ, ಅತ್ಯಾಚಾರ ಪ್ರಕರಣ ನಡೆದರೂ ಎಲ್ಲರೂ ಯಾಕೆ ಸುಮ್ಮನೆ ಕುಂತಿದ್ದಾರೆ ಎಂದು ಅವರು ಕೇಳುತ್ತಿದ್ದಾರೆ ಎಂದು ಗಿರೀಶ್ ಮಟ್ಟಣ್ಣನವರು ವಿವರಿಸಿದ್ದಾರೆ.

ಆವಾಗ ನಾವು ಎಲ್ಲಾ ವಿವರಗಳನ್ನು ಮತ್ತು ‘ಪೂಜ್ಯ’ರ ಪವಾಡಗಳನ್ನು ಎಲ್ಲವನ್ನೂ ಸವಿವರವಾಗಿ ಹೇಳಿದೆವು.’ ನಾವೇನಾದರೂ ಈ ಪ್ರಕರಣವನ್ನು ದೆಹಲಿ ಪೊಲೀಸರಿಗೆ ಕೊಟ್ಟಿದ್ದರೆ, ಆ ಕಾಮಾಂಧರನ್ನು ಎನ್‌ಕೌಂಟರ್‌ ಮಾಡ್ತಿದ್ದೆವು’ ಎಂದು ಹೇಳಿದರು. ನಮಗೆಲ್ಲರಿಗೂ ಒಳ್ಳೆಯ ಆತಿಥ್ಯವನ್ನು ಕೂಡಾ ಕೊಟ್ಟರು. ಕರ್ನಾಟಕದವರೇ ಆದ ಚಿಕ್ಕಮಗಳೂರಿನ ಅಧಿಕಾರಿಗಳು ಕೂಡಾ ಅಲ್ಲಿದ್ದರು. ನಂತರ ನಮಗೆ ವೆಹಿಕಲ್‌ ಕೂಡಾ ಕೊಟ್ಟು, ನಮಗೆ ಊಟ ಕೂಡಾ ಕೊಟ್ಟು ನಮ್ಮನ್ನು ಕಳುಹಿಸಿದ್ದಾರೆ’ ಎಂಬುದಾಗಿ ದೆಹಲಿಯ ಸೌಜನ್ಯ ಹೋರಾಟದ ಬಗ್ಗೆ ಗಿರೀಶ್ ಮಟ್ಟಣ್ಣನವರ್ ಹೇಳಿಕೆ ನೀಡಿದ್ದಾರೆ.

Ananth Kumar Hegde: ಟಿಕೆಟ್‌ ಮಿಸ್‌!!! ಅನಂತ್‌ ಕುಮಾರ್‌ ಹೆಗ್ಡೆ ಬರೆದ ಪತ್ರ ಸಖತ್‌ ವೈರಲ್ ‌

ಬೆಳ್ತಂಗಡಿಯಂತಹ ಗ್ರಾಮದಲ್ಲಿ ನಡೆದ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ದೆಹಲಿ ಪೊಲೀಸರು ಆಕ್ರೋಶ ಕಂಡ ನಮಗೆ, ಈಗಿರುವ ಬೇಸರವೇನೆಂದರೆ ಕರ್ನಾಟಕದ ಬೆಳ್ತಂಗಡಿಯ ಪೊಲೀಸರಿಗೆ ಓರ್ವ ಹೆಣ್ಮಗಳ ಅತ್ಯಾಚಾರ ಕೊಲೆಗೆ ನ್ಯಾಯ ಕೊಡಿಸಬೇಕೆಂಬ ಮನಸ್ಸು ಕರಗಲಿಲ್ಲ ಎನ್ನುವುದು ನೋವಿನ ವಿಚಾರ. ಇಲ್ಲಿನ ಹೋರಾಟದ ಬಗ್ಗೆ, ಆ ಹುಡುಗಿಯ ನ್ಯಾಯಕ್ಕೋಸ್ಕರ ಇಲ್ಲಿನ ವ್ಯವಸ್ತೆಯ ಮನಸ್ಸು ಕರಗಲಿಲ್ಲ. ಆದರೆ ದೆಹಲಿ ಪೊಲೀಸರ ಮನಸ್ಸನ್ನು ನಮ್ಮ ಹೋರಾಟ ಕರಗಿಸಿದೆ. ಹಾಗಾಗಿ ನಮಗೆ ಇಷ್ಟೊಂದು ಸಹಕಾರವನ್ನು ಕೊಟ್ರು. ಎಂದು ಗಿರೀಶ್ ಮಟ್ಟಣ್ಣನವರ್ ವಿವರಿಸಿದ್ದಾರೆ.

ಪಾರ್ಲಿಮೆಂಟ್‌ ಹೌಸ್‌ನಲ್ಲಿ ಹೋಗಿ ಅಲ್ಲಿ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿಸಿ, ನಂತರ ಪ್ರಧಾನಿ ಮೋದಿ ಅವರಿಗೂ ಕೂಡಾ ಈ ವಿಷಯವನ್ನು ತಲುಪಿಸುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ. ಈ ಮೂಲಕ ಈ ಹೋರಾಟವೊಂದು ದೊಡ್ಡ ಯಶಸ್ವಿಯಾಗಿದೆ ಎಂದು ಹೇಳಬಹುದು. ಎಲ್ಲರ ಪ್ರಾರ್ಥನೆ, ಆಶೀರ್ವಾದ ಈ ಹೋರಾಟಕ್ಕೆ ಇರಲಿ ಎಂದು ಶ್ರೀಯುತ ಗಿರೀಶ್ ಮಟ್ಟಣ್ಣನವರ್ ಆಶಯ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.