Liver problem: ಈ ಲಕ್ಷಣಗಳು ಕಂಡುಬಂದರೆ ಪಕ್ಕಾ ನಿಮ್ಮ ಲಿವರ್ ಹಾನಿಗೊಳಗಾಗಿದೆ ಎಂದರ್ಥ !!

Liver problem: ನಾವು ತಿನ್ನುವಂತಹ ಆಧುನಿಕ ಫುಡ್ ಗಳಿಂದ, ಧೂಮಪಾನ, ಮದ್ಯಪಾನದಂತಹ ಕೆಲವೊಂದು ಅನಾರೋಗ್ಯಕರ ಆಹಾರ ಕ್ರಮದಿಂದಾಗಿ ನಮ್ಮ ದೇಹದ ಒಳಗಿನ ಅಂಗಾಂಗಗಳಿಗೆ ಹಾನಿ ಆಗಿರುವುದು ತಿಳಿಯುವುದೇ ಇಲ್ಲ. ಆದರೆ ಮುಖ್ಯವಾಗಿ ಲಿವರ್ ಗೆ ಹಾನಿಯಾದರೆ(Liver problem)ಅದು ಕೆಲವೊಂದು ಲಕ್ಷಣಗಳು ತೋರಿಸಿಕೊಡುತ್ತದೆ. ಅದು ಯಾವುವು ಗೊತ್ತ?

 

ಚರ್ಮದಲ್ಲಿ ತುರಿಕೆ

ಯಾವುದೇ ದದ್ದು ಇಲ್ಲದೆ ಇದ್ದರೆ ಆಗ ಚರ್ಮದ ತುರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕೆಂದಿಲ್ಲ. ಯಕೃತ್ ಗೆ ಹಾನಿಯಾದ ವೇಳೆ ರಕ್ತನಾಳಗಳಲ್ಲಿ ಪಿತ್ತರಸವು ಸೇರಿಕೊಂಡಾಗ ಚರ್ಮದಲ್ಲಿ ತುರಿಕೆ ಕಾಣಿಸುವುದು. ಪಿತ್ತರಸದ ನಾಳವನ್ನು ನಿರ್ಬಂಧಿಸಲ್ಪಟ್ಟಾಗ ಅದು ಹೋಗಿ ರಕ್ತನಾಳವನ್ನು ಸೇರಿಕೊಳ್ಳುವುದು. ಇದು ಚರ್ಮದ ಕೆಳಭಾಗದಲ್ಲಿಜಮೆಯಾಗುವುದು ಮತ್ತು ತುರಿಕೆ ಉಂಟು ಮಾಡುವುದು.

ಕೂದಲು ಉದುರುವಿಕೆ

ಯಕೃತ್ತು ದುರ್ಬಲವಾಗಿದ್ದರೆ, ನಿಮ್ಮ ಚರ್ಮದ ಜೀವಕೋಶಗಳು ಹಾನಿಗೊಳಗಾಗಬಹುದು. ಹೆಚ್ಚುವರಿಯಾಗಿ, ಕೂದಲು ಉದುರಲು ಪ್ರಾರಂಭಿಸಬಹುದು.

ಕೆಟ್ಟ ಉಸಿರು

ಬಾಯಿಯ ದುರ್ವಾಸನೆಯು ಹಲವಾರು ಅನಾರೋಗ್ಯವನ್ನು ಸೂಚಿಸಬಹುದು. ಇದರಲ್ಲಿ ಮುಖ್ಯವಾಗಿ ಸೈನಸಿಟಿಸ್ ಅಥವಾ ಒಸಡಿನ ಸಮಸ್ಯೆ ಇರಬಹುದು. ಇದು ಯಕೃತ್ ಗೆ ಹಾನಿ ಆಗಿರುವ ಸೂಚನೆ ಕೂಡ ಆಗಿರಲೂಬಹುದು. ಯಕೃತ್ ಗೆ ಹಾನಿಯಾದ ವೇಳೆ ಕಾಣಿಸಿಕೊಳ್ಳುವ ಬಾಯಿಯ ವಾಸನೆಯನ್ನು ಯಕೃತ್ ನ ದುರ್ನಾತ ಎಂದು ಕರೆಯುವರು. ಹಣ್ಣಿನ ಅಥವಾ ಕೆಟ್ಟ

ವಾಸನೆ ಬರುವುದು ಡೈಮಿಥೈಲ್ ಸಲ್ಫೈಡ್ ನ ಮಟ್ಟವು ಅತಿಯಾಗಿ ಇರುವ ಕಾರಣದಿಂದಾಗಿ. ಲಿವರ್ ಸಿರೋಸಿಸ್ ಉಂಟಾದ ವೇಳೆ ಹೀಗೆ ಆಗುವುದು.

ಹೊಟ್ಟೆಯ ಗಾತ್ರದಲ್ಲಿ ಬದಲಾವಣೆ 

ಯಕೃತ್ತಿನಲ್ಲಿ ಊತದಿಂದಾಗಿ, ಹೊಟ್ಟೆಯ ಗಾತ್ರವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಹೆಚ್ಚಿನ ಜನರು ಹೊಟ್ಟೆ ಹಿಗ್ಗುವಿಕೆಯ ಸಮಸ್ಯೆಯನ್ನು ಬೊಜ್ಜು ಎಂದು ಪರಿಗಣಿಸುತ್ತಾರೆ ಮತ್ತು ಅದನ್ನು ನಿರ್ಲಕ್ಷಿಸುತ್ತಾರೆ. ನೀವೂ ಈ ರೀತಿಯ ತಪ್ಪು ಮಾಡಬೇಡಿ. ಏಕೆಂದರೆ ಪಿತ್ತಜನಕಾಂಗದಲ್ಲಿ ಉರಿಯೂತಕ್ಕೆ ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ, ಅದು ಸಂಪೂರ್ಣವಾಗಿ ಹಾನಿಗೊಳಗಾಗಬಹುದು. ಆದ್ದರಿಂದ, ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ.

ಅಂಗೈ ಕೆಂಪಾಗುವುದು

ಕೆಂಪು, ಸುಡುವಂತೆ ತುರಿಕೆಯು ಅಂಗೈಯಲ್ಲಿ ಕಾಣಿಸಿಕೊಳ್ಳುವುದನ್ನು ಪಾಮರ್ ಎರಿಥೆಮಾ ಎಂದು ಕರೆಯಲಾಗುತ್ತದೆ. ಇದು ಯಕೃತ್ ಹಾನಿಗೀಡಾಗಿರುವ ಲಕ್ಷಣವಾಗಿದೆ. ರಕ್ತದಲ್ಲಿನ ಹಾರ್ಮೋನ್ ಮಟ್ಟದ ಅಸಮಾನ್ಯವಾಗಿದ್ದರೆ ಆಗ ಇಂತಹ ಸಮಸ್ಯೆಯು ಕಾಣಿಸುವುದು.

ಮೂತ್ರದ ಬಣ್ಣ ಬದಲಾವಣೆ

ಯಕೃತ್ತಿನ ಹಾನಿಯ ಸಂದರ್ಭದಲ್ಲಿ, ಮೂತ್ರದ ಬಣ್ಣದಲ್ಲಿ ಬದಲಾವಣೆಯನ್ನು ಸಹ ಕಾಣಬಹುದು. ವಿಶೇಷವಾಗಿ ನಿಮ್ಮ ಮೂತ್ರದ ಬಣ್ಣವು ತುಂಬಾ ಹಳದಿಯಾಗಿ ಕಂಡುಬಂದರೆ ಅಥವಾ ಕಣ್ಣುಗಳ ಸುತ್ತಲೂ ಹಳದಿ ಇದ್ದರೆ, ಇವುಗಳು ಯಕೃತ್ತಿನ ಹಾನಿಯ ಲಕ್ಷಣಗಳಾಗಿರಬಹುದು. ಈ ಪರಿಸ್ಥಿತಿಯಲ್ಲಿ, ತಕ್ಷಣ ವೈದ್ಯಕೀಯ ಸಲಹೆ ಪಡೆಯಿರಿ.

Leave A Reply

Your email address will not be published.