North Delhi : ಶಾಲೆಯ ಆವರಣದಲ್ಲಿ ಪತ್ತೆಯಾಯ್ತು ಯುವ ಬಿಜೆಪಿ ಕಾರ್ಯಕರ್ತೆಯ ಶವ – 4 ದಿನದ ಬಳಿಕ ಬಯಲಾಯ್ತು ರೋಚಕ ವಿಷ್ಯ !!

North Delhiಯ ನರೇಲಾ ಪ್ರದೇಶದ ಶಾಲೆಯ ಆವರಣದಲ್ಲಿ 28 ವರ್ಷದ ಬಿಜೆಪಿ ಕಾರ್ಯಕರ್ತೆಯೋರ್ವರ ಶವ ಪತ್ತೆಯಾಗಿದೆ. ಸಂತ್ರಸ್ತೆಯನ್ನು ವರ್ಷಾ ಪವಾರ್(Varsha pawar) ಎಂದು ಗುರುತಿಸಲಾಗಿದೆ,

 

ಇದನ್ನೂ ಓದಿ: Liver problem: ಈ ಲಕ್ಷಣಗಳು ಕಂಡುಬಂದರೆ ಪಕ್ಕಾ ನಿಮ್ಮ ಲಿವರ್ ಹಾನಿಗೊಳಗಾಗಿದೆ ಎಂದರ್ಥ !!

ಹೌದು, ಫೆಬ್ರವರಿ 24ರಿಂದ ಭಾರತೀಯ ಜನತಾ ಪಕ್ಷದ(BJP) (ಬಿಜೆಪಿ) ಕಾರ್ಯಕರ್ತೆ ವರ್ಷಾ ಅವರು ಕಳೆದ ಕೆಲವು ದಿನಗಳಿಂದ ಕಾಣೆಯಾಗಿದ್ದು ಪೊಲೀಸರು ತನಿಖೆ ಶುರುಮಾಡಿದ್ದರು. ಆದರೀಗ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದ್ದು ವರ್ಷಾಳ ಸಾವಿಗೆ ಶಾಲೆಯ ಓನರ್ ಒಬ್ಬ ಪ್ರಮುಖ ಕಾರಣನಾಗಿದ್ದಾನೆ. ವಿಚಿತ್ರ ಎಂದರೆ ಓನರ್ ಸೋಹನ್‌ಲಾಲ್ ಕೂಡ ಸೋನಿಪತ್‌ನಲ್ಲಿ ರೈಲಿನ ಮುಂದೆ ಜಿಗಿದು ಸಾವಿಗೆ ಶರಣಾಗಿದ್ದಾನೆ.

ಅಂದಹಾಗೆ ಮೂಲಗಳ ಪ್ರಕಾರ ಮೃತ ವರ್ಷಾ, ನರೇಲಾದ ಸ್ವತಂತ್ರ ನಗರದಲ್ಲಿರುವ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಅಲ್ಲದೆ, ಆ ಶಾಲೆಗೆ ಆಕೆಯು ಸಹ ಓನರ್ ಆಗಿದ್ದಳು. ಆಕೆಯ ಬಿಸಿನೆಸ್ ಪಾಲುದಾರ ಸೋಹನ್‌ಲಾಲ್, ವರ್ಷಾಳ ಸಾವಿಗೆ ಪ್ರಮುಖ ಕಾರಣ ಎಂದು ಶಂಕಿಸಲಾಗಿದೆ.

ಇನ್ನು ಸೋಹನ್‌ಲಾಲ್ ಮತ್ತು ವರ್ಷಾ ನಡುವಿನ ಸಂಬಂಧದಲ್ಲಿದ್ದ ಕಲಹವೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ. ವರ್ಷಾ ಕೆಲಸ ಮಾಡುತ್ತಿದ್ದ ಶಾಲೆಯ ಆವರಣದಲ್ಲಿರುವ ಸ್ಟೇಷನರಿ ಶಾಪ್ ಕಳೆದ ನಾಲ್ಕು ದಿನಗಳಿಂದ ಮುಚ್ಚಿತ್ತು. ಅನುಮಾನಗೊಂಡ ವರ್ಷಾಳ ತಂದೆ ಬುಧವಾರ ಮಧ್ಯಾಹ್ನ ಬಲವಂತವಾಗಿ ಓಪನ್ ಮಾಡಿಸಿದಾಗ ಆಕೆಯ ಮೃತದೇಹ ಒಳಗಡೆ ಪತ್ತೆಯಾಗಿದೆ. ಆಕೆಯ ಕುತ್ತಿಗೆಯಲ್ಲಿ ಗಾಯದ ಕಲೆ ಇದ್ದು, ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

Leave A Reply

Your email address will not be published.