Gruhalakshmi scheme: ಈ ಯಜಮಾನಿಯರಿಗೆ ‘ಗೃಹಲಕ್ಷ್ಮೀ’ಯ 6ನೇ ಕಂತಿನ ಹಣ ಸಿಗಲ್ಲ !!

Gruhalakshmi Scheme: ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಲ್ಲಿ ಒಂದಾಗಿರುವ ಗೃಹಲಕ್ಷ್ಮಿ(Gruhalakshmi)ಯೋಜನೆಯ 5 ಕಂತು ಹಣಗಳು ಈಗಾಗಲೇ. ಮಹಿಳೆಯರ ಖಾತೆಗೆ ಜಮಾ ಆಗಿದೆ. ಇದೀಗ ಮುಂದಿನ ಕಂತಿನ ಹಣಕ್ಕಾಗಿ ಎಲ್ಲಾ ಯಜಮಾನಿಯರು ಕಾಯುತ್ತಿದ್ದಾರೆ. ಆದರೆ ಈ ನಡುವೆ ರಾಜ್ಯದ ಯಜಮಾನಿಯರಿಗೆ ಸರ್ಕಾರವು ಒಂದು ಅಘಾತಕಾರಿ ಸುದ್ದಿ ನೀಡಿದ್ದು ಈ ಮಹಿಳೆಯರಿಗೆ 6ನೇ ಕಂತಿನ ಗೃಹಲಕ್ಷ್ಮೀ ದುಡ್ಡು ಸಿಗುವುದಿಲ್ಲ ಎಂದು ಹೇಳಿದೆ.

 

ಇದನ್ನೂ ಓದಿ: Karnataka High Court: ಪ್ರತಿ ಅಪಘಾತ ಪ್ರಕರಣದಲ್ಲೂ ಪ್ರತ್ಯಕ್ಷ ಸಾಕ್ಷಿ ನಿರೀಕ್ಷಿಸುವುದು ಅವಾಸ್ತವಿಕ : ಕರ್ನಾಟಕ ಹೈಕೋರ್ಟ್

ಹೌದು, ಸರ್ಕಾರ ಈಗಾಗಲೇ ಕೆಲವು ಮಹಿಳೆಯರಿಗೆ 6ನೇ ಕಂತಿನ ಹಣವನ್ನು ಜಮೆ ಮಾಡಿದೆ. ಇನ್ನು ಕೆಲವು ಮಹಿಳೆಯರಿಗೆ 6ನೇ ಕಂತಿನ ಹಣ ಜಮೆ ಯಾಗಿಲ್ಲ. ಯಾಕೆಂದರೆ ಗೃಹಲಕ್ಷ್ಮೀ ಯೋಜನೆಗೆ(Gruhalakshmi scheme)ಅರ್ಜಿ ಸಲ್ಲಿಕೆ ನೊಂದಣಿ ಮಾಡುವಾಗ ಕೆಲವೊಂದು ನಿಯಮ ಗಳನ್ನು ಮಹೀಳಾ ಮತ್ತು ಮಕ್ಕಳ ಇಲಾಖೆ ಮಾಹಿತಿ ನೀಡಿತ್ತು‌ ಆದರೆ ಕೆಲವೊಂದು ಮಹೀಳೆಯರು ಈ ನಿಮಯಗಳನ್ನು ಉಲ್ಲಂಘಿಸಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರು. ಇದನ್ನೆಲ್ಲಾ ಸರಕಾರ ಈಗ ಪರಿಶೀಲನೆ ಮಾಡಿದ್ದು ಗೃಹಲಕ್ಷ್ಮೀ ಯೋಜನೆಯ ಮಾನದಂಡಗಳನ್ನು ಉಲ್ಲಂಘನೆ ಮಾಡಿರುವ ಮಹಿಳೆಯರ ಖಾತೆಗೆ ಹಣ ಜಮಾ ಮಾಡದಿರಲು ಕ್ರಮ ಕೈಗೊಂಡಿದೆ.

ಜೊತೆಗೆ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿ ಹಣ ಪಡೆಯುತ್ತಿರುವರಲ್ಲಿ ಕೆಲವರು ಸರ್ಕಾರಕ್ಕೆ ಮೋಸ ಮಾಡಿದ್ದಾರೆ. ಅದೇನೆಂದರೆ ಈಗಾಗಲೇ ಸಾವಿರಾರು ನಕಲಿ ಬಿಪಿಎಲ್‌ ಕಾರ್ಡು (BPL Card) ಗಳನ್ನು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಹೀಗಾಗಿ ಇಂತಹ ನಕಲಿ ಕಾರ್ಡುಗಳನ್ನು ನೀಡಿ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿ, ಇದುವರೆಗೆ ಹಣವನ್ನು ಪಡೆದುಕೊಳ್ಳುತ್ತಿರುವ ಜನರಿಗೆ ಸರಕಾರ ಬಿಸಿ ಮುಟ್ಟಿಸಿದೆ.

ಅಂದರೆ ಸರ್ಕಾರವು ಸರಕಾರಿ ನೌಕರರಿಗೆ, ನಾಲ್ಕು ಚಕ್ರದ ವಾಹನ ಹೊಂದಿದವರಿಗೆ ಬಿಪಿಎಲ್‌ ಕಾರ್ಡ್‌ ರದ್ದು ಮಾಡಿದೆ. ಇದೇ ಮಾನದಂಡವನ್ನೇ ಇದೀಗ ಗೃಹಲಕ್ಷ್ಮೀ ಯೋಜನೆಗೆ ಪ್ರಯೋಗಿಸುತ್ತಿದ್ದು, ಈ ರೀತಿ ನಕಲಿ ಕಾರ್ಡ್ ಬಳಸಿ ಗೃಹಲಕ್ಷ್ಮೀ ಲಾಭ ಪಡೆಯುವವರನ್ನು ಸರ್ಕಾರ ಪತ್ತೆ ಹಚ್ಚಿ ಪಟ್ಟಿ ಬಿಡುಗಡೆ ಮಾಡಿದೆ.

Leave A Reply

Your email address will not be published.