Vijayanagar: ಅಯೋಧ್ಯೆಯಿಂದ ಹೊಸಪೇಟೆಗೆ ಹಿಂತಿರುಗುತ್ತಿದ್ದ ರೈಲಿಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದ ಯುವಕನ ಬಂಧನ

ವಿಜಯನಗರ : ಶುಕ್ರವಾರ ಅಯೋಧ್ಯೆಯಿಂದ ಹೊಸಪೇಟೆ ರೈಲು ನಿಲ್ದಾಣಕ್ಕೆ ಹಿಂತಿರುಗುತ್ತಿದ್ದ ರೈಲಿಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

1,500 ರಾಮ ಭಕ್ತರನ್ನು ಹೊತ್ತ ರೈಲು ಜಬಲ್ಪುರ್ ಮತ್ತು ನಾಗಪುರ ಮೂಲಕ ಮೈಸೂರಿಗೆ ಹಿಂತಿರುಗುತ್ತಿತ್ತು. ಇದೇ ವೇಳೆ ರೈಲಿನಲ್ಲಿದ್ದ ರಾಮಭಕ್ತರು ಜೈ ಶ್ರೀ ರಾಮ್ ಎಂದು ಘೋಷಣೆ ಕೂಗುತ್ತಿದ್ದರು. ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮುಸ್ಲಿಂ ಯುವಕರು ಘೋಷಣೆ ಕೂಗುತ್ತಿದ್ದವರ ಜೊತೆ ಘರ್ಷಣೆಗಿಳಿದರು. ಇದೆ ವೇಳೆ ಅವರಲ್ಲೊಬ್ಬ ರೈಲು ಸರ್ಕಾರಕ್ಕೆ ಸೇರಿದ್ದು, ನಿಮ್ಮ ತಂದೆಯ ಆಸ್ತಿಯಲ್ಲ, ನಮ್ಮನ್ನು ಕೆಳಗಿಳಿಸಿದರೆ ರೈಲಿಗೆ ಬೆಂಕಿ ಹಚ್ಚುತ್ತೇವೆ’ ಎಂದು ಬೆದರಿಕೆ ಹಾಕಿದ್ದಾನೆ.

ಯುವಕ ಈ ರೀತಿ ಬೆದರಿಕೆ ಒಡ್ಡುತ್ತಿ ದ್ದಂತೆ ತೀವ್ರವಾಗಿ ಪ್ರತಿಕ್ರಿಯಿಸಿದ ಪ್ರಯಾಣಿಕರು ದುಷ್ಕರ್ಮಿಗಳನ್ನು ಕೂಡಲೇ ಬಂಧಿಸ ವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಸ್ಥಳದಲ್ಲಿದ್ದ ಪೊಲೀಸರು ಮಧ್ಯಪ್ರವೇಶಿಸಿ ಯುವಕರನ್ನು ಬೇರೆ ಕೋಚ್‌ಗೆ ತೆರಳುವಂತೆ ಸೂಚಿಸಿದರು. ನಂತರ ಪ್ರಯಾಣಿಕರು ರೈಲಿನಿಂದ ಇಳಿದು ಒಂದು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು.

ಹಿಂದೂ ಕಾರ್ಯಕರ್ತರು ಮತ್ತು ಬಜರಂಗದಳದ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ರೈಲ್ವೆ ನಿಲ್ದಾಣಕ್ಕೆ ಧಾವಿಸಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ತೆರಳಿ ವಿಜಯನಗರ ಎಸ್ಪಿ ಶ್ರೀಹರಿಬಾಬು ಬಿ.ಎಲ್ . ಆಗಮಿಸಿ ತಪ್ಪಿತಸ್ಥರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಯಾಣಿಕರು ಹಾಗೂ ಕಾರ್ಯಕರ್ತರಿಗೆ ಭರವಸೆ ನೀಡಿದರು. ಬಳಿಕ ಪ್ರಯಾಣಿಕರು ರೈಲನ್ನು ಹತ್ತಿ ತಮ್ಮ ಪ್ರಯಾಣವನ್ನು ಮುಂದುವರಿಸಲು ಒಪ್ಪಿದರು.

ಪೊಲೀಸರು ಬೆದರಿಕೆ ಒಡ್ಡಿದ ಆರೋಪಿಗಳನ್ನು ಬಂಧಿಸಲು ಪ್ರಯತ್ನಿಸಿದರೂ, ಆದರೆ ಅಷ್ಟರಲ್ಲಿ ಅವರು ಸ್ಥಳದಿಂದ ಪರಾರಿಯಾಗಿದ್ದರು. ಆದರೆ ಶೋಧ ಕಾರ್ಯಾಚರಣೆ ಆರಂಭಿಸಿದ್ದು, ಓರ್ವನನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳನ್ನು ಪತ್ತೆ ಪೊಲೀಸರು ಬಲೆ ಬೀಸಿದ್ದಾರೆ.

Leave A Reply

Your email address will not be published.