Crime News: ಬೆಂಗಳೂರಿನ ಜೋಯಾಲುಕ್ಕಾಸ್ ಶೋರೂಮ್ ನಲ್ಲಿ 75 ಲಕ್ಷ ಮೌಲ್ಯದ ವಜ್ರದ ಉಂಗುರ ಎಗರಿಸಿದ ಕಳ್ಳ

ಫೆಬ್ರವರಿ 18 ರಂದು ಬೆಂಗಳೂರಿನ ಜೋಯಾಲುಕ್ಕಾಸ್ ಜ್ಯುವೆಲ್ಲರಿ ಶೋರೂಂನಿಂದ 75 ಲಕ್ಷ ರೂಪಾಯಿ ಮೌಲ್ಯದ ಸಾಲಿಟೈರ್ ವಜ್ರದ ಉಂಗುರವನ್ನು ಕದ್ದಿದ್ದ ಆರೋಪದ ಮೇಲೆ ಹಿರಿಯ, ಗಡ್ಡವಿರುವ ವ್ಯಕ್ತಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಫೆಬ್ರವರಿ 20ರಂದು ಶೋರೂಂ ಮ್ಯಾನೇಜರ್ ಶಿಬಿನ್ ವಿ. ಎಂ ಅವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಪತ್ತೆಹಚ್ಚಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶೋರೂಮ್ನಲ್ಲಿ ನಡೆಸಿದ ದಾಸ್ತಾನು ಪರಿಶೀಲನೆಯು ಸಾಲಿಟೇರ್ ವಜ್ರದ ಉಂಗುರವನ್ನು ನಕಲಿ ವಜ್ರದ ಉಂಗುರದಿಂದ ಬದಲಾಯಿಸಲಾಗಿದೆ ಎಂದು ಬಹಿರಂಗಪಡಿಸಿದೆ ಎಂದು ಅವರು ಹೇಳಿದರು.

ಸಿಸಿಟಿವಿ ದೃಶ್ಯಾವಳಿಗಳನ್ನು ಬಳಸಿಕೊಂಡು ಆಭರಣ ಶೋರೂಂ ಅಧಿಕಾರಿಗಳು ನಡೆಸಿದ ಆಂತರಿಕ ತನಿಖೆಯಲ್ಲಿ, ಫೆಬ್ರವರಿ 18 ರಂದು ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಭೇಟಿ ನೀಡಿದ್ದ ವೃದ್ಧನೊಬ್ಬ ಕಾಣೆಯಾದ ಸಾಲಿಟೈರ್ ವಜ್ರದ ಉಂಗುರವನ್ನು ಕೊಳ್ಳಲು ಆಸಕ್ತಿ ತೋರಿಸಿದ್ದನು ಆದರೆ ಅದನ್ನು ಖರೀದಿಸಿರಲಿಲ್ಲ ಎಂದು ತಿಳಿದುಬಂದಿದೆ.

ನೈಜ ಉಂಗುರವನ್ನು ಕಳ್ಳ ನಕಲಿ ವಜ್ರದ ಉಂಗುರಕ್ಕೆ ಬದಲಾಯಿಸಿದ್ದಾನೆ ಎಂದು ಆಭರಣ ಅಂಗಡಿಯ ಸಿಬ್ಬಂದಿ ತಿಳಿಸಿದ್ದಾರೆ. ಆಂತರಿಕ ತನಿಖೆಯಲ್ಲಿ ಶಂಕಿತ ಎಂದು ಗುರುತಿಸಲಾದ ವ್ಯಕ್ತಿಯು ಫೆಬ್ರವರಿ 17 ಮತ್ತು 18 ರಂದು ಪೂರ್ವ ಬೆಂಗಳೂರಿನ ಜೋಯಾಲುಕ್ಕಾದ ಇತರ ಎರಡು ಶೋರೂಮ್ಗಳಿಗೆ ಭೇಟಿ ನೀಡಿದ್ದಾನೆ ಎಂದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave A Reply

Your email address will not be published.