White Hair Home Remidies: ತೆಂಗಿನೆಣ್ಣೆಗೆ ಈ ಎಲೆ ಪುಡಿ ಹಾಕಿ ನೋಡಿ, ನಿಮ್ಮ ಕೂದಲು ಕಪ್ಪಾಗೋದರಲ್ಲಿ ಸಂಶಯವೇ ಇಲ್ಲ

Share the Article

White Hair Home Remidies: ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರಿಗೆ ಬಿಳಿ ಕೂದಲಾಗುವುದು ಸಾಮಾನ್ಯವಾಗಿದೆ. ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಎಲ್ಲರಿಗೂ ತಲೆ ಬೆಳ್ಳಗಾಗುತ್ತಿದೆ. ಇದಕ್ಕಾಗಿ ಬಹಳ ಮಂದಿ ಹೇರ್‌ ಡೈ ಅನ್ನು ಬಳಕೆ ಮಾಡುತ್ತಾರೆ. ಈ ಹೇರ್‌ ಡೈ ಗಳು ಕೂದಲಿಗೆ ತುಂಬಾ ಹಾನಿಕಾರಕವಾಗಿವೆ.

ಈ ಎರಡು ಅಂಶಗಳನ್ನು ಬಳಸಿದರೆ ಸಾಕು:
ನಮ್ಮ ಕೂದಲು ಕಪ್ಪು ಆಗಬೇಕಾದರೆ, ಮೆಲನಿನ್ ಅಂಶ ಅಗತ್ಯವಾಗಿದೆ. ಈ ಅಂಶ ಹೊಂದಿರುವ ತೈಲಗಳನ್ನು ಬಳಸಿದ್ದರೆ ಮಾತ್ರ ನಮ್ಮ ಕೂದಲು ಯಾವುದೇ ಅಡ್ಡಪರಿಣಾಮವಿಲ್ಲದೆ ಕಪ್ಪಾಗುತ್ತದೆ. ನೈಸರ್ಗಿಕವಾಗಿ ಸಿಗುವ ಬೇವಿನ ಎಲೆ ಹಾಗೂ ತೆಂಗಿನ ಎಣ್ಣೆ ನಿಮ್ಮ ಬಿಳಿ ಕೂದಲಿಗೆ ರಾಮಬಾಣ ವಾಗಿದೆ. ಇವುಗಳಿಂದ ಯಾವುದೇ ಅಡ್ಡಪರಿಣಾಮವಿರುವುದಿಲ್ಲ. ನೀವು ಮೊದಲು ಬೇವಿನ ಎಲೆಯ ಪುಡಿಯನ್ನು ಸಿದ್ದಪಡಿಸಿಕೊಳ್ಳಿ. ನಂತರ ತೆಂಗಿನ ಎಣ್ಣೆಯ ಜೊತೆಗೆ 2 ಸ್ಪೂನ್ ಕರಿಬೇವಿನ ಪುಡಿ, 2 ಚಮಚ ನಿಂಬೆ ರಸ ಅಥವಾ ಆಮ್ಲ ಪುಡಿಯನ್ನು ಬೆರೆಸಿ ಚೆನ್ನಾಗಿ ಕುದಿಸಿ.

ಸಿದ್ಧವಾದ ಎಣ್ಣೆಯನ್ನು ಒಂದು ಸ್ವಚ್ಚ ಬಾಟಲಿಗೆ ಹಾಕಿ ಇಟ್ಟುಕೊಳ್ಳಿ. ವಾರಕ್ಕೆ ಎರಡೂ ಮೂರು ಬಾರಿ ತಲೆಗೆ ಹಚ್ಚಿಕೊಳ್ಳಿ. ಹೀಗೆ ಮಾಡುವ ಮೂಲಕ ನಿಮ್ಮ ಕೂದಲನ್ನು ಕಪ್ಪಾಗಿಸಬಹುದು.

Leave A Reply