IRCTC App: ತತ್ಕಾಲ್‌ ಟಿಕೆಟ್‌ ಬುಕ್‌ ಮಾಡಲು ಇಲ್ಲಿದೆ ಕ್ಷಣಾರ್ಧದ ಉಪಾಯ

ಸಾಮಾನ್ಯವಾಗಿ ನಾವು ಪ್ರವಾಸವನ್ನು ಮಾಡುತ್ತೇವೆ. ದೂರದ ಸ್ಥಳಗಳಿಗೆ ಪ್ರಯಾಣಿಸಲು ಟ್ರೈನ್ ಟಿಕೇಟ್ ಗಳನ್ನು, ಅಥವಾ ಬಸ್ ಟಿಕೇಟ್ ಗಳನ್ನು ಬುಕ್ ಮಾಡುತ್ತೇವೆ. ಆದರೆ ಈಗ ನೀವು ತತ್ಕಾಲ್ ನಲ್ಲಿ ವೇಗವಾಗಿ ಹಾಗೂ ಸುಲಭವಾಗಿ ರೈಲು ಟಿಕೇಟ್ ಗಳನ್ನು ಬುಕ್ ಮಾಡಬಹುದು. ಕೆಳಗಿನಂತೆ ಟಿಕೇಟ್ ಬುಕ್ ಮಾಡಬಹುದಾಗಿದೆ.

ಇದನ್ನೂ ಓದಿ: Trisha Krishnan: ನಟಿ ತ್ರಿಶಾ ಕುರಿತು ಅವಹೇಳನಕಾರಿ ಮಾತು ಹರಿಬಿಟ್ಟ ರಾಜಕೀಯ ಮುಖಂಡ; ತಪ್ಪು ಅರಿತು ಇನ್ನೊಂದು ವೀಡಿಯೋ ಬಿಟ್ಟು, ಹೇಳಿದ್ದೇನು?

ಐ‌ಆರ್‌ಸಿ‌ಟಿ‌ಸಿ ಅಪ್ಲಿಕೇಶನ್ ಮೂಲಕವೇ ಆನ್‌ಲೈನ್‌ನಲ್ಲಿ ರೈಲು ಟಿಕೇಟ್ ಗಳನ್ನು ಸುಲಭವಾಗಿ ಬುಕ್ ಮಾಡಬಹುದಾಗಿದೆ.

ಕೆಲವೆ ಕೆಲವು ನಿಮಿಷಗಳಲ್ಲಿ ತತ್ಕಾಲ್ ನಲ್ಲಿ ಟಿಕೆಟ್ ಅನ್ನು ಬುಕಿಂಗ್ ಮಾಡಬಹುದು.

ಪ್ರಯಾಣಕ್ಕೆ ಒಂದು ದಿನ ಮೊದಲೇ ತತ್ಕಾಲ್ ವೆಬ್ ಸೈಟ್ ಓಪನ್ ಇರುತ್ತದೆ.

ಕಡಿಮೆ ಖರ್ಚಿನ ಪ್ರಯಾಣಕ್ಕೆ ರೈಲು ಹೆಸರುವಾಸಿಯಾಗಿದೆ. ನೀವು ಐ‌ಆರ್‌ಸಿ‌ಟಿ‌ಸಿ ಅಪ್ಲಿಕೇಷನ್ ಅಥವಾ ವೆಬ್‌ಸೈಟ್ ನ ಮೂಲಕ. ಯಾವಾಗ ಬೇಕಾದರೂ ಯಾವ ರೈಲನ್ನು ಬೇಕಾದರೂ ಬುಕ್ ಮಾಡಬಹುದು. ಒಂದು ವೇಳೆ ನೀವು ಎಲ್ಲಿಗಾದರೂ ಹೋಗಬೇಕಾದ ಸಂದರ್ಭದಲ್ಲಿ ತತ್ಕಾಲ್ ಟಿಕೆಟ್ ಬುಕ್ಕಿಂಗ್ ನಿಮಗೆ ಬಹಳಷ್ಟು ಉಪಯೋಗವಾಗಲಿದೆ.

ಬುಕಿಂಗ್ ವ್ಯವಸ್ಥೆ

ನಾವು ಪ್ರಯಾಣಿಸುವ ಒಂದು ದಿನದ ಮೊದಲೇ ಟಿಕೇಟ್ ಬುಕ್ ಮಾಡಿಕೊಂಡು ನಮ್ಮ ಸೀಟ್ ಅನ್ನು ದೃಢೀಕರಿಸಿ ಕೊಳ್ಳಬಹುದು. ಆದರೆ ಕೆಲವರು ಐಆರ್‌ಸಿಟಿಸಿಯ ತತ್ಕಾಲ್ ನಲ್ಲಿಯೂ ಸಹ ಟಿಕೇಟ್ ಬುಕ್ ಆಗುತ್ತಿಲ್ಲ ಎಂದು ಹೇಳುತ್ತಾರೆ. ಇದಕ್ಕೆ ಕಾರಣ ನಾವು ಟಿಕೇಟ್ ಬುಕ್ ಮಾಡುವಾಗ ಮಾಡುವ ತಪ್ಪುಗಳು ಇರಬಹುದು ಎನ್ನುತ್ತಾರೆ.

ನೀವು ತತ್ಕಾಲ್ ನಲ್ಲಿ ಟಿಕೇಟ್ ಬುಕ್ ಮಾಡುವಾಗ ಈ ಅಂಶಗಳನ್ನು ಗಮನಿಸಬೇಕು.

ನೀವು ಪ್ರಯಾಣಿಸುವ ಮಾಡಬೇಕಿರುವ ಸ್ಥಳಕ್ಕೆ ಒಂದು ದಿನದ ಮುಂಚೆಯೇ ಟಿಕೇಟ್ ಬುಕ್ ಮಾಡಿಕೊಳ್ಳಬೇಕು.

ಮುಖ್ಯವಾಗಿ ಬೆಳಗ್ಗೆ 10 ಗಂಟೆಗೆ ತತ್ಕಾಲ್‌ನ ಎಸಿ ಕೋಚ್ಗಳ ಬುಕಿಂಗ್ ಆರಂಭವಾಗುತ್ತದೆ.

ಸಾಮಾನ್ಯ ಕೋಚ್ ಗಳ ಟಿಕೇಟ್ ಗಳು ಬೆಳಗ್ಗೆ 11 ಗಂಟೆಗೆ ಓಪನ್ ಆಗುತ್ತೇವೆ.

ಆನ್ಲೈನ್ ಅಲ್ಲಿ ಟಿಕೇಟ್ ಬುಕ್ ಮಾಡುವ ವಿಧಾನ ಇಲ್ಲಿದೆ.

ನಿಮ್ಮ ಮೊಬೈಲ್ ನಲ್ಲಿ ಐ‌ಆರ್‌ಸಿ‌ಟಿ‌ಸಿ ಯನ್ನು ಓಪನ್ ಮಾಡಿಕೊಳ್ಳಿ, ನಂತರ ನಿಮ್ಮ ಐಡಿ ಮತ್ತು ಪಾಸ್ವರ್ಡ್ ಅನ್ನು ಹಾಕಿ ಲಾಗಿನ್ ಮಾಡಿ. ನಿಮ್ಮ ಐ‌ಆರ್‌ಸಿ‌ಟಿ‌ಸಿ ಖಾತೆ ಇಲ್ಲದಿದ್ದರೆ, ಸೈನ್ ಅಪ್ ಮಾಡಿ ಲಾಗಿನ್ ಆಗಿ. ನಿಮಗೆ ಬುಕಿಂಗ್ ಶೋ ಆಗುತ್ತದೆ. ಪ್ರಯಾಣದ ದಿನಾಂಕ, ನೀವು ತಲುಪಬೇಕಾದ ನಿಲ್ದಾಣ, ರೈಲು ಮತ್ತು ವರ್ಗವನ್ನು ಸರಿಯಾಗಿ ಭರ್ತಿ ಮಾಡಿ. ನಂತರ ಪೇಮೆಂಟ್ ಮಾಡಿ. ಹಣ ಪಾವತಿಯ ಕೂಡಲೇ ಟಿಕೇಟ್ ಬುಕ್ ಆಗುತ್ತದೆ. ನಂತರ ನೀವು ಟಿಕೇಟ್ ಡೌನ್ಲೋಡ್ ಮಾಡಿಕೊಳ್ಳಬಹುದು.

Leave A Reply

Your email address will not be published.