Govt Scheme:ಮನೆ ಇಲ್ಲದವರಿಗೆ ಈ ಯೋಜನೆಯಲ್ಲಿ ಸಿಗುತ್ತೆ ಸ್ವಂತ ಕನಸಿನ ಮನೆ
Govt Scheme:ಕೇಂದ್ರ ಸರ್ಕಾರವು ಮಹಿಳೆಯರ ಸಬಲೀಕರಣಕ್ಕಾಗಿ ಶ್ರಮಿಸುತ್ತಿದೆ(Govt Scheme). ಹಲವು ಮಹಿಳೆಯರು ಇದರ ಪ್ರಯೋಜನ ಪಡೆದುಕೊಂಡು ಸ್ವಾವಲಂಬಿಗಳಾಗಿ ಬದುಕುತ್ತಿದ್ದಾರೆ ಎನ್ನಬಹುದು.
ಮಹಿಳೆಯರು ಅಡುಗೆ ಮನೆಗೆ ಸೀಮಿತವಾಗದೆ ಹೊರ ಜಗತ್ತಿಗೆ ಕಾಲಿಟ್ಟಿದ್ದಾರೆ. ಪುರುಷರಿಗೆ ಹೆಗಲು ಕೊಟ್ಟು ದುಡಿಯುತ್ತಿದ್ದಾರೆ. ಮಹಿಳೆಯರಿಗೆ ಸರ್ಕಾರದ ಎಲ್ಲಾ ಯೋಜನೆಯ ಲಾಭ ಪಡೆದುಕೊಳ್ಳುವ ಹಕ್ಕು ಇದೆ.
ಸ್ವಂತ ಮನೆ ಇರಬೇಕು ಎನ್ನುವ ಆಸೆ ಪುರುಷರದ್ದು ಮಾತ್ರ ಅಲ್ಲ, ಸಾಕಷ್ಟು ಮಹಿಳೆಯರಿಗೂ ಕೂಡ ತಾನು ತನ್ನದೇ ಸ್ವಂತ ಮನೆಯಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂದು ಕನಸು ಕಾಣುತ್ತಾರೆ. ಇದಕ್ಕೆ ಈಗ ಸರ್ಕಾರದ ಈ ಯೋಜನೆಯು ಪೂರಕವಾಗಿದೆ.
ಮಹಿಳೆಯರು ಗುಡಿಸಿಲಿನಲ್ಲಿ ಅಥವಾ ಕಚ್ಚಾ ಮನೆಯಲ್ಲಿ ವಾಸಿಸ ಮಾಡುವ ಅಗತ್ಯ ಇಲ್ಲ. ಸರ್ಕಾರ ಪಕ್ಕಾ ಮನೆ ನಿರ್ಮಾಣ ಮಾಡಿಕೊಡುವ ಜವಾಬ್ದಾರಿಯನ್ನು ತೆಗೆದುಕೊಂಡಿದೆ.
ಮಹಿಳೆಯರಿಗಾಗಿ ಈ ಯೋಜನೆ
ಸದ್ಯ ಕೇಂದ್ರ ಮಹಿಳೆಯರಿಗಾಗಿ ಲಾಡ್ಲಿ ಬೆಹೆನಾ ಯೋಜನೆಯನ್ನು ಜಾರಿ ಮಾಡಿದೆ. ಬಡ ಕುಟುಂಬದ ಮಹಿಳೆಯರು, ಅಥವಾ ಸ್ವಂತ ಮನೆ ಇಲ್ಲದೆ ಇರುವವರು, ಸಣ್ಣಪುಟ್ಟ ಸ್ಥಳದಲ್ಲಿ ವಾಸಿಸುವ ಮಹಿಳೆಯರು ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳಲು ಇರುವ ಯೋಜನೆಯಾಗಿದೆ.
ಈ ಯೋಜನೆಯಲ್ಲಿ ಸರಕಾರ ಶಾಶ್ವತ ಮನೆ ನಿರ್ಮಾಣ ಮಾಡಿಕೊಳ್ಳಲು ಮಹಿಳೆಯರಿಗೆ ಹಣ ನೀಡುತ್ತದೆ. ಮಹಿಳೆಯರು ಮಾತ್ರ ಮನೆ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬೇಕು. ಕುಟುಂಬದ ಬೇರೆ ಸದಸ್ಯರು ಅರ್ಜಿ ಸಲ್ಲಿಸಿದರೆ ಅಂತವರಿಗೆ ಲಾಡ್ಲಿ ಬೇಹೆನ್ ಯೋಜನೆ ಲಭ್ಯವಾಗುವುದಿಲ್ಲ.
ಎಷ್ಟು ಸಿಗಲಿದೆ ಸಹಾಯಧನ
ಲಾಡ್ಲಿ ಬೆಹನ್ ಯೋಜನೆಯಡಿ ಶಾಶ್ವತ ಮನೆಯನ್ನು ಮಹಿಳೆಯರ ಹೆಸರಿಗೆ ನಿರ್ಮಿಸಿ ಕೊಡಲಾಗುವುದು. ಇದಕ್ಕಾಗಿ ನೀವು ಸಹಾಯ ಧನವನ್ನು ಸರ್ಕಾರದಿಂದ ಪಡೆಯಬಹುದಾಗಿದೆ. ಎರಡು ಲಕ್ಷ ರೂಪಾಯಿಗಳನ್ನು ಸರ್ಕಾರ ನೀಡುತ್ತದೆ.
ನೀವು ಹತ್ತಿರದ ಬ್ಯಾಂಕ್ ಶಾಖೆಯಲ್ಲಿ ಈ ಬಗ್ಗೆ ಮಾಹಿತಿ ಪಡೆಯಬಹುದು. ಅರ್ಜಿ ಸಲ್ಲಿಸಿದ ಫಲಾನುಭವಿಯ ಖಾತೆಗೆ ನೇರವಾಗಿ ಸರ್ಕಾರದಿಂದ 2 ಲಕ್ಷ ರೂಪಾಯಿ ಜಮಾ ಮಾಡಲಾಗುವುದು.
ಸದ್ಯ ಈ ಯೋಜನೆ ಮಧ್ಯಪ್ರದೇಶದಲ್ಲಿ ಆರಂಭಗೊಂಡಿದೆ. ಸದ್ಯದಲ್ಲಿಯೇ ಕರ್ನಾಟಕ ರಾಜ್ಯಕ್ಕೂ ಬರುವ ಸಾಧ್ಯತೆಗಳು ಇವೆ. ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
ಇದನ್ನೂ ಓದಿ : ವರ್ತೂರು ಬಗ್ಗೆ ನಾಲಿಗೆ ಹರಿ ಬಿಟ್ಟ ನಟ ಜಗ್ಗೇಶ್!ಮನೆಗೆ ಮುತ್ತಿಗೆ ಹಾಕೋ ಎಚ್ಚರಿಕೆ,ಕ್ಷಮೆಗೆಆಗ್ರಹ