Actor Jaggesh: ವರ್ತೂರು ಬಗ್ಗೆ ನಾಲಿಗೆ ಹರಿ ಬಿಟ್ಟ ನಟ ಜಗ್ಗೇಶ್! ಮನೆಗೆ ಮುತ್ತಿಗೆ ಹಾಕೋ ಎಚ್ಚರಿಕೆ , ಕ್ಷಮೆಗೆ ಆಗ್ರಹ

Actor Jaggesh: ವಹ್ಮಿಕುಲ ಕ್ಷತ್ರಿಯ ಸಮುದಾಯದ ಜನರು ಹಾಗೂ ಮುಖಂಡರು ನಟ ಜಗ್ಗೇಶ್ (Actor Jaggesh)ವಿರುದ್ಧ ಕಿರಿಕಾಡುತಿಡ್ಡಾರೆ. ತಮ್ಮ ಜನಾಂಗಕ್ಕೆ ಸೇರಿದ ಯುವಕನ ಬಗ್ಗೆ ಕೆಟ್ಟದಾಗಿ ಮಾತನಾಡಿದ ಜಗ್ಗೇಶ್ ಕ್ಷಮೆ ಕೇಳಲೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ.

 

ಜಗ್ಗೇಶ್ ತಮ್ಮ ಸೇಟ್ಮೆಂಟ್ನಿಂದಲೇ ಆಗಾಗ ಸುದ್ದಿಯಲ್ಲಿರುತ್ತಾರೆ. ವಿವಾದಗಳನ್ನು ಮೈಮೇಲೆ ಎಳೆದುಕೊಳ್ತಾರೆ. ಹುಲಿ ಉಗುರು ಲಾಕೆಟ್ ಕೇಸ್ಗೆ ಸಂಬಂಧಿಸಿದಂತೆ ವರ್ತೂರ್ ಸಂತೋಷ್ ಬಗ್ಗೆ ನಟ ಜಗೇಶ್ ಮಾತಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಹಿರಿಯರಾದ ಜಗ್ಗೇಶ್ ಈ ರೀತಿ ಮಾತಾಡಿದ್ದು ಸರಿಯಲ್ಲ ಎಂದು ನೆಟ್ಟಿಗರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ವರ್ತೂರು ಸಂತೋಷ್ ಕೂಡ ಸೈಲೆಂಟ್ ಆಗಿಯೇ ತಿರುಗೇಟು ನೀಡಿದ್ದಾರೆ. ಇದೀಗ ವಹ್ನಿಕುಲ ಕ್ಷತ್ರಿಯ ಸಮುದಾಯದ ಕೆಲವು ಮುಖಂಡರು ಜಗ್ಗೇಶ್ ಹೇಳಿಕೆಯನ್ನು ವಿರೋಧಿಸಿ ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ.

 

 

ಜಗ್ಗೇಶ್ ಮನೆಗೆ ಮುತ್ತಿಗೆ ಎಚ್ಚರಿಕೆ

 

ವಹ್ಮಿಕುಲ ಕ್ಷತ್ರಿಯ ಸಮುದಾಯದ ಮುಖಂಡರು ಜಗ್ಗೇಶ್ ಮಾತಿಗೆ ತಿರುಗಿಬಿದ್ದಿದ್ದಾರೆ. ತಮ್ಮ ಸಮುದಾಯದ ಯುವಕನ ಕುರಿತು ಜಗ್ಗೇಶ್ ಕೀಳಾಗಿ ಮಾತಾಡಿದ್ದು ತಪ್ಪು . ವರ್ತೂರು ಸಂತೋಷ್ ಗೆ ನಟ ಜಗ್ಗೇಶ್ ಕ್ಷಮೆ ಯಾಚಿಸಬೇಕು. ಇಲ್ಲವಾದ್ರೆ. ಅವರ ಮನೆಯ ಮುಂದೆ ಪ್ರತಿಭಟನೆ ಮಾಡಿ ಬಳಿಕ ಮನೆಗೆ ಮುತ್ತಿಗೆ ಹಾಕಲಾಗುತ್ತದೆ.

 

ವಹ್ಮಿಕುಲ ಕ್ಷತ್ರಿಯ ಸಮುದಾಯ ಮುಖಂಡರು ಗರಂ

 

ವಹ್ನಿಕುಲ ಕ್ಷತ್ರಿಯ ಸಮಯುದಾಯದ ಮುಖಂಡ ನಾರಾಯಣ ಸ್ವಾಮಿ ಜಗ್ಗೇಶ್ ಗೆ ಎಚ್ಚರಿಕೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಗ್‌ಬಾಸ್ ಖ್ಯಾತಿಯ ಹಳ್ಳಿಕಾರ್ ಒಡೆಯ ವರ್ತೂರ್ ಸಂತೋಷ್ ಬಗ್ಗೆ ಜಗ್ಗೇಶ್ ಕೀಳಾಗಿ ಮಾತಾಡಿದ್ದನ್ನು ಖಂಡಿಸುತ್ತೇವೆ.

 

ಕೂಡಲೆ ಕ್ಷಮೆ ಕೇಳುವಂತೆ ಆಗ್ರಹ

 

ಸಂತೋಷ್ ಒಳ್ಳೆಯ ಹುಡುಗ. ಅವನಿಗಿಂತ ಚಿಕ್ಕವನನ್ನು

ಕೂಡ ಅಣ್ಣ ಎಂದು ಕರೀತಾರೆ. ಅಂತ ವ್ಯಕ್ತಿಯ ಬಗ್ಗೆ ಕೆಟ್ಟ ಪದಗಳನ್ನು ಬಳಕೆ ಮಾಡಿದ್ದು ಸರಿಯಲ್ಲ. ಇದರಲ್ಲೇ ನೀನು ಎಲ್ಲರಿಗೂ ಯಾವ ರೀತಿ ಮರ್ಯಾದೆ ಕೊಡುತ್ತೀಯ ಎನ್ನುವುದು ತಿಳಿಯುತ್ತದೆ. ಕೂಡಲೇ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ನಿಮ್ಮ ಮನೆಗೆ ಮುತ್ತಿಗೆ ಹಾಕುವುದಾಗಿ ನಾರಾಯಣ ಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

 

ಕಿತ್ತೋದ್ ನನ್ ಮಗ ನಿಜವಾದ ಹುಲಿ ಉಗುರು ಹಾಕಿಕೊಂಡ

 

ಹುಲಿ ಉಗುರು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ನಟ ಜಗ್ಗೇಶ್, ನಾನು ಹುಲಿ ತರ ಧೈರ್ಯವಾಗಿ ಬದುಕಬೇಕು ಅಂತ ನಾನು 20ನೇ ವಯಸ್ಸಿನವನಿದ್ದಾಗಲೇ ನನ್ನ ತಾಯಿ ನನಗೆ ಹುಲಿ ಉಗುರಿನ ಪೆಂಡೆಂಟ್ ನೀಡಿದ್ರು. ಆದರೆ ಯಾವನೋ ಕಿತ್ತೋದ್ ನನ್ ಮಗ ನಿಜವಾದ ಹುಲಿ ಉಗುರು ಹಾಕ್ಕೊಂಡು ಟಿವಿಗೆ ಹೋಗಿ ಅಲ್ಲಿ ತಗಲಾಕ್ಕೊಂಡ ಎಂದು ಹೇಳಿರುವುದು ಸಿಟ್ಟಿಗೆ ಕಾರಣವಾಗಿದೆ.

 

ಸುದೀಪ್ ಹೇಳಿದ ಮಾತು ನೆನೆದ ವರ್ತೂರು ಸಂತೋಷ್

 

ಬಿಗ್ ಬಾಸ್ ಮನೆಯಲ್ಲಿದ್ದು ಬಂದ ನಾನು ಸುದೀಪಣ್ಣನ ಬಳಿ ನಾನು ಆನೇಕ ವಿಚಾರಗಳನ್ನು ಕಲಿತಿದ್ದೀನಿ. ಸುದೀಪಣ್ಣ ಯಾವಾಗಲೂ ಒಂದು ಹೇಳ್ತಾರೆ. ವರ್ತೂರು ಅವ್ರೇ ಎಲ್ಲಾ ಜಾಗದಲ್ಲೂ ಮಾತನಾಡಬೇಕು ಅಂತಿಲ್ಲ. ಕೆಲವೊಮ್ಮೆ ಮಾತನಾಡದೇ ಸುಮ್ಮನಿದ್ದರೆ ಆ ಸೈಲೆಂಟ್ ಉತ್ತರ ಕೊಡುತ್ತೆ ಅಂತ. ಅಷ್ಟೇ ಸಾಕು ಎಂದು ಹೇಳಿದ್ದಾರೆ.

ಇದನ್ನೂ ಓದಿ : ಈ ದಿನ ಉಗುರು ಕತ್ತರಿಸಿದರೆ ಮಾತ್ರ ಅಂದುಕೊಂಡದ್ದು ಈಡೇರುತ್ತೆ

Leave A Reply

Your email address will not be published.