Hanuman: ಓಟಿಟಿ ಗೆ ಕಾಲಿಟ್ಟ ‘ಹನು-ಮ್ಯಾನ್’ !! ಜೀ 5 ನಲ್ಲಿ ಲೈವ್ ಸ್ಟ್ರೀಮಿಂಗ್!

Hanuman: ಅನೇಕ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಗೊಂಡ ಪ್ಯಾನ್ ಇಂಡಿಯಾ ನಿನಿಮಾ ವಾದ ‘ಹನು-ಮ್ಯಾನ್’ (Hanuman)ಪ್ರೇಕ್ಷಕರಿಂದ ಉತ್ತಮ ಪಿಡ್ ಬ್ಯಾಕ್ ತೆಗೆದುಕೊಂಡಿದೆ. ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಆದಾಯವನ್ನು ಗಳಿಸಿಕೊಂಡಿದೆ. ನಟ ತೇಜ ಸಜ್ಜ ಅಭಿನಯದಲ್ಲಿ ಸೂಪರ್ ಹಿಟ್ ಆಗಿರುವ ಈ ಸಿನಿಮಾ ಇದೀಗ ಒಟಿಟಿ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಡಲು ಸಿದ್ದವಾಗಿದೆ.

 

ಎಲ್ಲ ಚಿತ್ರಮಂದಿರಗಳಲ್ಲಿ ತುಂಬ ಯಶಸ್ಸು ಕಂಡ ಪ್ರಶಾಂತ್ ವರ್ಮಾ ನಿರ್ದೇಶನದ ‘ಹನು-ಮ್ಯಾನ್’ ಮಾರ್ಚ್ 02 ರಂದು ಜೀ 5 ಒಟಿಟಿ ಯಲ್ಲಿ ಲೈವ್ ಸ್ಟ್ರೀಮಿಂಗ್ ಆಗಲಿದೆ. ಈಗ ಮನೆಯಲ್ಲೇ ಕೂತು ಚಿತ್ರವನ್ನು ವೀಕ್ಷಿಸಬಹುದು.

 

ಚಿತ್ರದಲ್ಲಿ ಅಮೃತಾ ಅಯ್ಯರ್, ವಿನಯ್ ರೈ, ವರಲಕ್ಷ್ಮಿ ಶರತ್‌ಕುಮಾ‌ರ್, ಗೆಟಪ್ ಶ್ರೀನು, ಸಮುದ್ರಕಣಿ, ವೆನ್ನೆಲ ಕಿಶೋರ್ ಮುಂತಾದವರ ತಾರಾಗಣವಿದೆ. ಚಿತ್ರವನ್ನು ಪ್ರೈಮ್‌ಶೋ ಎಂಟರ್‌ಟೈನ್‌ಮೆಂಟ್‌ನ ಕೆ. ನಿರಂಜನ್ ರೆಡ್ಡಿ ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ : ಮನೆ ಇಲ್ಲದವರಿಗೆ ಈ ಯೋಜನೆಯಲ್ಲಿ ಸಿಗುತ್ತೆ ಸ್ವಂತ ಕನಸಿನ ಮನೆ

Leave A Reply

Your email address will not be published.