Vijay devarakonda: ನಟ ವಿಜಯ್ ದೇವರಕೊಂಡಗೆ ವಿಚಿತ್ರ ಬೇಡಿಕೆ ಇಟ್ಟು ಲೆಟರ್ ಬರೆದ ಹುಡುಗಿಯರು – ನಟ ಕೊಟ್ಟ ರಿಪ್ಲೇ ಹೀಗಿತ್ತು !!

Vijay devarakonda: ಟಾಲಿವುಡ್ (Tollywood) ನಟ ವಿಜಯ್ ದೇವರಕೊಂಡಗೆ (Vijay Devarakonda) ಫೀಮೇಲ್ ಫಾಲೋವರ್ಸ್ ಕೊಂಚ ಜಾಸ್ತಿಯೇ ಇದ್ದಾರೆ. ಇದೀಗ ವಿಜಯ್‌ಗೆ ವಿದ್ಯಾರ್ಥಿನಿಯರು (Fans) ವಿಚಿತ್ರ ಬೇಡಿಕೆ ಇಟ್ಟು ಲೆಟರ್ ಒಂದನ್ನು ಬರೆದಿದ್ದಾರೆ.

 

ಹೌದು, ವಿಚಿತ್ರ ಎಂಬಂತೆ ಸೋಷಿಯಲ್​ ಮೀಡಿಯಾದಲ್ಲಿ ಇಬ್ಬರು ವಿದ್ಯಾರ್ಥಿನಿಯರು ವಿಡಿಯೋ ಮಾಡಿ ಪೋಸ್ಟ್ ಹಾಕಿ ವಿಜಯ್​ ದೇವರಕೊಂಡ ಅವರು ಕಮೆಂಟ್​ ಮಾಡಿದರೆ ಮಾತ್ರ ನಾವು ಪರೀಕ್ಷೆಗೆ ತಯಾರಿ ನಡೆಸುತ್ತೇವೆ ಎಂದು ಬರೆದುಕೊಂಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ವಿದ್ಯಾರ್ಥಿನಿಯರ ಪೋಸ್ಟ್​ ನೋಡಿ ಹಲವರು ಹುಚ್ಚು ಹುಡೈಗಿಯರು ಎಂದಿದ್ದರು. ನೆಟ್ಟಿಗರು ಕೂಡ ಖಂಡಿತ ನಟ ಪ್ರತಿಕ್ರಿಯೆ ನೀಡಲ್ಲ ಎಂದು ಕಾಮೆಂಟ್ ಮಾಡಿದ್ದರು.

 

ಆದರೆ ಅಚ್ಚರಿಯ ಬೆಳವಣಿಗೆಯಲ್ಲಿ, ವಿಜಯ್​ ದೇವರಕೊಂಡ ಅವರು, ವಿದ್ಯಾರ್ಥಿನಿಯರ ಈ ಪೋಸ್ಟ್​ಗೆ ಉತ್ತರ ನೀಡಿದ್ದಾರೆ. ನೀವು ಪರೀಕ್ಷೆಯಲ್ಲಿ 90% ಅಂಕ ಗಳಿಸಿದರೆ ನಿಮ್ಮನ್ನು ಖಂಡಿತ ಭೇಟಿ ಮಾಡುತ್ತೇನೆ ಎಂದು ರಿಪ್ಲೈ ಮಾಡಿದ್ದಾರೆ. ವಿಜಯ್ ಪ್ರತಿಕ್ರಿಯೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಟ ಅಂದ್ರೆ, ಸೆಲೆಬ್ರಿ ಅಂದರೆ ಹೀಗಿರಬೇಕು ಅನ್ನುತ್ತಿದ್ದಾರೆ.

ಇದನ್ನೂ ಓದಿ : ಓಟಿಟಿ ಗೆ ಕಾಲಿಟ್ಟ ‘ಹನು-ಮ್ಯಾನ್’ !!ಈ ಒಟಿಟಿ ಯಲ್ಲಿ ಸ್ಟ್ರೀಮಿಂಗ್

Leave A Reply

Your email address will not be published.