ವಿದ್ಯಾರ್ಥಿನಿಯರ ಕನ್ಯತ್ವ ಪರೀಕ್ಷೆ!! ವಿವಿಯ ವಿಚಿತ್ರ ನಡೆ

virginity test :ವಿವಿಯೊಂದು ವಿದ್ಯಾರ್ಥಿನಿಯರು ತಲೆ ತಗ್ಗಿಸುವ ಕಾರ್ಯವನ್ನು ಮಾಡಿದೆ .ವಿದ್ಯಾರ್ಥಿನಿಯರ ಕನ್ಯತ್ವ ಪರೀಕ್ಷೆ(virginity test) ಮಾಡಿಸಿದೆ. ಈ ಮಾಹಿತಿಯನ್ನು ಎಲ್ಲೆಡೆ ಪ್ರಚಾರ ಮಾಡಿದೆ. ಯಾಕೆ ಈ ಪರೀಕ್ಷೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ದೊರೆತಿಲ್ಲ.

 

ಯಾವುದೇ ವಿದ್ಯಾಸಂಸ್ಥೆಯಾಗಲಿ ಅಡ್ಮಿಷನ್ ವೇಳೆ ಜನನ ದಾಖಲೆ, ಹೆಸರು, ಜಾತಿ ಸೇರಿದಂತೆ ಕೆಲ ಮಾಹಿತಿಯನ್ನು ಕೇಳುವುದು ಸಹಜ. ಕೆಲ ಶಾಲೆ- ಕಾಲೇಜಿನಲ್ಲಿ ರಕ್ತದ ಗುಂಪಿನ ಬಗ್ಗೆ ವಿವರ ಕೇಳೋದಿದೆ. ಆದ್ರೆ ಈ ವಿಶ್ವವಿದ್ಯಾನಿಲಯ ನಡೆಸಿದ ಪರೀಕ್ಷೆ ಅಚ್ಚರಿ ಹುಟ್ಟಿಸಿದೆ. ಈ ವಿಶ್ವವಿದ್ಯಾನಿಲಯ ಕನ್ಯತ್ವ ಪರೀಕ್ಷೆ ನಡೆಸಿದೆ. ಅಷ್ಟೇ ಅಲ್ಲ ಕನಿಷ್ಠ 190 ವಿದ್ಯಾರ್ಥಿನಿಯರ ಕನ್ಯತ್ವದ ವರದಿ ವಿಶ್ವವಿದ್ಯಾನಿಲಯದಿಂದ ಸೋರಿಕೆಯಾಗಿದೆ. ವಿಶ್ವವಿದ್ಯಾನಿಲಯ ಕನ್ಯತ್ವ ಪರೀಕ್ಷೆ ಮಾಡಲು ಕಾರಣ ತಿಳಿದುಬಂದಿಲ್ಲ. ಆದ್ರೆ ವಿವಿಯ ಮೆಡಿಕಲ್ ಅಧಿಕಾರಿಗಳು ವರದಿಯನ್ನು ಸೋರಿಕೆ ಮಾಡಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. ಈ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಅವರೇ ಹಂಚಿಕೊಂಡಿದ್ದಾರೆ.

 

ಈ ಘಟನೆ ಕಝಾಕಿಸ್ತಾನ್ (Kazakhstan) ಅಲ್-ಫರಾಬಿ ರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ನಡೆದಿದೆ. ಇಷ್ಟೇ ಅಲ್ಲದೆ ವಿದ್ಯಾರ್ಥಿಗಳ ವಯಕ್ತಿಕ ಮಾಹಿತಿಯಾದ ವಿದ್ಯಾರ್ಥಿಗಳ ಹೆಸರು, ವಯಸ್ಸು, ಫೋನ್ ನಂಬರ್ ಟ್ಯಾಕ್ಸ್ ಕೋಡ್ ಕೂಡ ಲೀಕ್ ಆಗಿದೆ. ವಿವಿ ಯ ಅನೇಕ ಸಾಮಾಜಿಕ ಜಾಲತಾಣ ಗುಂಪಿನಲ್ಲಿ ಕನ್ಯತ್ವ ಪರೀಕ್ಷೆ ವರದಿಯನ್ನು ಹಂಚಿಕೊಳ್ಳಲಾಗಿದೆ. ವಿಶ್ವವಿದ್ಯಾನಿಲಯದ ಮೆಡಿಕಲ್ ವಿಭಾಗದ ವೈದ್ಯಕೀಯ ಕೇಂದ್ರದಲ್ಲಿ ಸ್ತ್ರೀರೋಗತಜ್ಞರು, ವಿದ್ಯಾರ್ಥಿನಿಯರನ್ನು ಪರೀಕ್ಷೆ ಮಾಡಿದ್ದಾರೆ ಎಂಬುದು ಪತ್ತೆಯಾಗಿದೆ.

 

ಕನ್ಯತ್ವ ಪರೀಕ್ಷೆ ವರದಿಯ ಡೇಟಾವನ್ನು ವಿವಿಯ ಶಿಕ್ಷಕರಲ್ಲದೆ, ವಿದ್ಯಾರ್ಥಿಗಳು ಸಹ ನೋಡಿದ್ದಾರೆ. ಕನ್ಯತ್ವ ಪರೀಕ್ಷೆಗೆ ಒಳಪಟ್ಟಿರುವ ಹಾಗೂ ಪಟ್ಟಿಯಲ್ಲಿ ಹೆಸರು ಬಂದಿರುವ ವಿದ್ಯಾರ್ಥಿಯೊಬ್ಬಳು ಈ ಬಗ್ಗೆ ಮಾತನಾಡಿದ್ದಾಳೆ. ಕಝಾಕಿಸ್ತಾನ್‌ನಲ್ಲಿ ಖಾಸಗಿತನಕ್ಕೆ ಬೆಲೆ ಇಲ್ಲ ಎಂದು ಒಬ್ಬಳು ವಿದ್ಯಾರ್ಥಿ ಆರೋಪ ಮಾಡಿದ್ದಾಳೆ. ಆದ್ರೆ ವಿಶ್ವವಿದ್ಯಾನಿಲಯ ಇದ್ರಲ್ಲಿ ತನ್ನ ತಪ್ಪಿಲ್ಲ ಎಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ ಎಂದು ವಿವಿಯು ಹೇಳಿಕೆ ನೀಡಿದೆ. ಕನ್ಯತ್ವ ಪರೀಕ್ಷೆ ವರದಿಯ ಡೇಟಾ ಲೀಕ್ ಆಗಿರುವ ಬಗ್ಗೆ ವಿವಿ ಏನು ಹೇಳಿಲ್ಲ. ವಿದ್ಯಾರ್ಥಿಗಳಿಗೆ ಕ್ಷಮೆ ಕೇಳಿಲ್ಲ.

 

ಕಝಾಕಿಸ್ತಾನ್‌ನ ವಿಜ್ಞಾನ ಮತ್ತು ಉನ್ನತ ಶಿಕ್ಷಣ ಸಚಿವ ಸಯಾಸತ್ ನುರ್ಬೆಕ್ ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ. ಇದೊಂದು ಆಘಾತಕಾರಿ ಪ್ರಕರಣವಾಗಿದೆ. ವೈಯಕ್ತಿಕ ಡೇಟಾ ವರ್ಗಾವಣೆ, ವಿಶೇಷವಾಗಿ ಔಷಧಕ್ಕೆ ಸಂಬಂಧಿಸಿದ ಡೇಟಾ ಬಹಿರಂಗಪಡಿಸಿರುವುದು ಕಾನೂನು ಅಪರಾಧ ಎಂದು ಹೇಳಿದ್ದಾರೆ. ಈ ಕುರಿತು ತನಿಖೆ ಶುರುವಾಗಿದೆ. ಕಾನೂನಿನ ದೃಷ್ಟಿಯಲ್ಲಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ವಿಧಿಸಲಾಗುವುದು ಎಂದಿದ್ದಾರೆ.

 

ಕನ್ಯತ್ವ ಪರೀಕ್ಷೆ ಹೇಗೆ ನಡೆಯುತ್ತದೆ? :

ಭಾರತದಲ್ಲಿ ಎರಡು ಬೆರಳು ಪರೀಕ್ಷೆಯನ್ನು ಬಳಸಿಕೊಂಡು ಅತ್ಯಾಚಾರ ಸಂತ್ರಸ್ತೆಯ ಯೋನಿಯನ್ನು ಪರಿಶೀಲಿಸಲಾಗುತ್ತದೆ. ಸೇರಿಸಲಾದ ಬೆರಳುಗಳ ಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ಮಹಿಳೆಯ ಸಕ್ರಿಯ ಲೈಂಗಿಕ ಜೀವನವನ್ನು ಹೊಂದಿದ್ದಾಳೆ ಅಥವಾ ಇಲ್ಲವೇ ಎಂಬುದನ್ನು ವೈದ್ಯರು ಹೇಳುತ್ತಾರೆ. ತಮ್ಮ ಭಾರತದಲ್ಲಿ ವೈದ್ಯರಿಗೆ ಇದನ್ನು ಪರೀಕ್ಷೆ ಮಾಡುವಂತೆ ಸೂಚನೆ ನೀಡುವ ಯಾವುದೇ ಅಧಿಕಾರ ಇಲ್ಲ ಎಂಬುದು ಗಮನಾರ್ಹ .

Leave A Reply

Your email address will not be published.