SSLC Supplimentary Result: ಇಂದು ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ-2 ಫಲಿತಾಂಶ ಪ್ರಕಟ- ರಿಸಲ್ಟ್‌ ಚೆಕ್‌ ಮಾಡಲು ಲಿಂಕ್‌ ಇಲ್ಲಿದೆ

Share the Article

SSLC Supplimentary Result: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯ ಫಲಿತಾಂಶವನ್ನು ಇಂದು (ಜುಲೈ 10) ರಂದು ಪ್ರಕಟ ಮಾಡಲಿದೆ. ಇಂದು ಬೆಳಿಗ್ಗೆ 11.30 ಕ್ಕೆ ಪರೀಕ್ಷೆಯ ಫಲಿತಾಂಶಗಳನ್ನು ಪ್ರಕಟ ಮಾಡಲಾಗುವುದು.

ವಿದ್ಯಾರ್ಥಿಗಳು ಮಂಡಳಿಯ kseab.karnataka.gov.in ಅಥವಾ karresults.nic.in ವೆಬ್‌ಸೈಟ್‌ನಲ್ಲಿ ತಮ್ಮ ಫಲಿತಾಂಶ ವೀಕ್ಷಿಸಬಹುದು.

ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಜೂನ್‌ 14 ರಿಂದ ಜೂನ್‌ 21 ರವರೆಗೆ ನಡೆಸಲಾಗಿದ್ದು, ನಂತರ ವೆಬ್‌ಸೈಟ್‌ನಲ್ಲಿ ಮಾದರಿ ಉತ್ತರ ಬಿಡುಗಡೆ ಮಾಡಲಾಗಿತ್ತು. ಹಾಗೆನೇ ಈ ಬಾರಿ ಪೂರಕ ಪರೀಕ್ಷೆಯನ್ನು ಪರೀಕ್ಷೆ 2 (exam 2) ಎಂದು ಮರುನಾಮಕರಣ ಮಾಡಲಾಗಿದೆ.

ಪ್ರತಿವರ್ಷ ಪರೀಕ್ಷೆ 1, 2 ಮತ್ತು 3 ಎಂದು ಒಟ್ಟು ಮೂರು ಪರೀಕ್ಷೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಇರುತ್ತದೆ. ಈ ಬಾರಿಯ ಎಸ್‌ಎಸ್‌ಎಲ್‌ಸಿ ಮುಖ್ಯ ಫಲಿತಾಂಶವನ್ನು ಮೇ 9 ರಂದು ಪ್ರಕಟ ಮಾಡಲಾಗಿತ್ತು. ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಮರು ಪರೀಕ್ಷೆ ಬರೆದಿದ್ದು, ಇಂದು ಫಲಿತಾಂಶ ಘೋಷಣೆಯಾಗಲಿದೆ.

ಹಾಗೆನೇ ಪರೀಕ್ಷೆ 2 ಪೂರಕ ಫಲಿತಾಂಶ ಪ್ರಕಟವಾದ ನಂತರ, ವಿದ್ಯಾರ್ಥಿಗಳು ತಮ್ಮ ಅಂಕಗಳಿಂದ ಅಸಮಧಾನ ಹೊಂದಿದ್ದರೆ ಅಂದರೆ ಹೆಚ್ಚಿನ ಅಂಕಕ್ಕಾಗಿ ಅಥವಾ ಪರೀಕ್ಷೆ 2 ಗೆ ಹಾಜರಾಗಲು ಸಾಧ್ಯವಾಗಿರದಿದ್ದರೆ ಅಂತಹ ವಿದ್ಯಾರ್ಥಿಗಳು ಪರೀಕ್ಷೆ 3 ಕ್ಕೆ ನೊಂದಾಯಿಸಬಹುದು.

ಇಂದು ಪರೀಕ್ಷೆ 2 ರ ಫಲಿತಾಂಶ ಪ್ರಕಟಗೊಂಡ ನಂತರ ಮಂಡಳಿಯು ಪರೀಕ್ಷೆ 3 ರ ನೋಂದಣಿ ಲಿಂಕ್‌ ಮತ್ತು ವೇಳಾಪಟ್ಟಿ ಪ್ರಕಟಿಸಲಿದೆ.

Google Map: ಇನ್ಮುಂದೆ ಟ್ರಾಫಿಕ್ ಪೋಲೀಸರಿಂದ ತಪ್ಪಿಸಿಕೊಳ್ಳಲು ಗೂಗಲ್ ಮಾಡುತ್ತೆ ಹೆಲ್ಪ್ – ಗೂಗಲ್‌ ಮ್ಯಾಪ್‌ನಲ್ಲಿ ಹೀಗೆ ಸರ್ಚ್ ಮಾಡಿ ಸಾಕು !!

Leave A Reply

Your email address will not be published.