Kitchen Hacks: ನಿಮ್ಮ ಮನೆಯ ಸಿಂಕ್ ಪೈಪ್ ಕಟ್ಟಿಕೊಂಡಿದ್ಯಾ? ಇದನ್ನು ಅನುಸರಿಸಿ ಕ್ಲೀನ್ ಆಗುತ್ತೆ !

Kitchen Hacks: ಸಾಮಾನ್ಯವಾಗಿ ಅಡುಗೆ ಮನೆಯ ಸಿಂಕ್ ಪೈಪ್ನಲ್ಲಿ ಏನಾದರೂ ಸಿಲುಕಿಕೊಂಡರೆ ನೀರು ಸರಿಯಾಗಿ ಹರಿದು ಹೋಗುವುದಿಲ್ಲ. ಇದರಿಂದ ಸಿಂಕ್ ನಲ್ಲಿ ನೀರು ಕಟ್ಟಿಕೊಳ್ಳುವ ಜೊತೆಗೆ ವಾಸನೆ ಬರುತ್ತದೆ. ಎಷ್ಟೇ ಪ್ರಯತ್ನಿಸಿದರೂ ಇದನ್ನು ಕ್ಲೀನ್ ಮಾಡಲು ಆಗುವುದಿಲ್ಲ. ಅಂತಹ ವೇಳೆ ಕಷ್ಟಪಡುವ ಬದಲು ಕೆಲವು ಸಿಂಪಲ್ ಟ್ರಿಕ್ಸ್ ಮೂಲಕ ನಿಮ್ಮ ಅಡುಗೆ ಮನೆಯ ಸಿಂಕ್ ಅನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು.

ಇದನ್ನೂ ಓದಿ: Physical Abuse: ಕೊಡಗಿನಲ್ಲೊಂದು ಹೇಯ ಕೃತ್ಯ; 2 ವರ್ಷದ ಕಂದನ ಮೇಲೆ 45ರ ವ್ಯಕ್ತಿಯಿಂದ ಅತ್ಯಾಚಾರ

ಪಾತ್ರೆ ತೊಳೆಯುವ ಸಂದರ್ಭದಲ್ಲಿ ಸಿಂಕ್ ಗೆ ಬೀಳುವ ಆಹಾರ ಮತ್ತು ತರಕಾರಿ ಚಿಪ್ಪೆಗಳು ಅಡುಗೆ ಮನೆಯ ಸಿಂಕ್ ಜಾಮ್ ಆಗಳು ಕಾರಣವಾಗುತ್ತದೆ.

ಈಗೆ ಆಗುವುದರಿಂದ ಸಿಂಕ್ ತುಂಬಾ ನೀರು ಕಟ್ಟಿಕೊಳ್ಳುತ್ತದೆ. ಎಷ್ಟೇ ಪ್ರಯತ್ನಿಸಿದರೂ ಇದನ್ನು ಕ್ಲೀನ್ ಮಾಡಲು ಸಾದ್ಯವಾಗುವುದಿಲ್ಲ. ಆ ಸಮಯದಲ್ಲಿ ಸಿಂಪಲ್ ಟ್ರಿಕ್ಸ್ ಬಳಸುವ ಮೂಲಕ ನಿಮ್ಮ ಅಡುಗೆ ಮನೆಯ ಸಿಂಕ್ ಅನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು.

ಬಿಸಿನೀರು

ಒಂದು ದೊಡ್ಡ ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ. ಸಿಂಕ್ ಪೈಪ್ ಮೂಲಕ ಕುದಿಯುವ ನೀರನ್ನು ಒಳಕ್ಕೆ ಸುರಿಯಿರಿ . ಇದರಿಂದ ಪೈಪ್ ಒಳಗೆ ಸಿಲುಕಿಕೊಂಡಿರುವ ಕೊಳಕು ಸಾರಾಗವಾಗಿ ಹೊರ ಹೋಗುತ್ತದೆ.

ಅಡುಗೆ ಸೋಡಾ

ಅರ್ಧ ಕಪ್ ಅಡಿಗೆ ಸೋಡಾವನ್ನು ತೆಗೆದುಕೊಂಡು ಪೈಪ್ಗೆ ಸುರಿಯಿರಿ. ನಂತರ ಅರ್ಧ ಕಪ್ ವಿನೆಗರ್ ಅನ್ನು ಹಾಕಿ ತುಸು ಹೊತ್ತು ಬಿಡಿ. ಕೊನೆಗೆ ಬಿಸಿ ನೀರನ್ನು ಸುರಿಯಿರಿ. ಆಗ ಪೈಪ್ ಸ್ವಚ್ಛವಾಗುತ್ತದೆ.

ಕಾಸ್ಟಿಕ್ ಸೋಡಾ

ಕಾಸ್ಟಿಕ್ ಸೋಡಾ, ಸೋಡಿಯಂ ಹೈಡ್ರಾಕ್ಸೈಡ್ ಬಳಸಿ ಸುಲಭವಾಗಿ ಸ್ವಚ್ಚ ಮಾಡಬಹುದು. ಗಮನಿಸಿ; ಈ ಮಿಶ್ರಣ ಬಳಸುವಾಗ ಕೈಗವಸುಗಳು ಮತ್ತು ಕನ್ನಡಕವನ್ನು ಧರಿಸಬೇಕು.

ಪೊಟ್ಟಣದ ಸೂಚನೆಗಳ ಪ್ರಕಾರ ಕಾಸ್ಟಿಕ್ ಸೋಡಾವನ್ನು ಮತ್ತು ನೀರಿಗೆ ಮಿಶ್ರಣವನ್ನು ಮಾಡಿ. ನಂತರ ಬಹಳ ಎಚ್ಚರಿಕೆಯಿಂದ ಸಿಂಕ್ ಪೈಪ್ ಗೆ ಸುರಿಯಿರಿ. ಸಿಂಕ್ನ ಇತರ ಭಾಗಗಳಿಗೆ ಈ ಸಂಯುಕ್ತವನ್ನು ಹಾಕಬೇಡಿ. ಇದು ಹಾನಿಯಾಗಬಹುದು.

ಈ ಮಿಶ್ರಣವನ್ನು ಸುರಿದ ನಂತರ, ಪೈಪ್ ಒಳಗೆ ಬಿಸಿ ನೀರಿನ್ನು ಸುರಿಯಿರಿ. ಆಗ ಅಂಟಿಕೊಂಡಿರುವ ಕೊಳಕು ಎಲ್ಲಾ ಹೊರಬರುತ್ತದೆ . ನಿಮ್ಮ ಸಿಂಕ್ ಪೈಪ್ ಸ್ವಚ್ಚ ವಾಗುತ್ತದೆ.

Leave A Reply

Your email address will not be published.