Crime News: ಹೃದಯವಿದ್ರಾವಕ ಘಟನೆ; ತನ್ನ ಎರಡು ವರ್ಷದ ಕಂದನ ಕೊಂದು ಮಹಿಳೆ ಆತ್ಮಹತ್ಯೆ

Chincholi: ತಾಯಿ ಹಾಗೂ ಮಗಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಚಿಂಚೋಳಿ(Chincholi) ತಾಲೂಕಿನ ಮರಪಳ್ಳಿ ಗ್ರಾಮದಲ್ಲಿ ನಡೆದಿದೆ.

 

ತಾಯಿ ಶಿವಲೀಲಾ ಆನಂದ ( 24) ಹಾಗೂ ಮಗಳು ವರ್ಷಿತಾ (2) ಮೃತಪಟ್ಟವರು. ಫೆ.13 ರ ಮಂಗಳವಾರ ಸುಮಾರು 5 ಗಂಟೆಗೆ ಈ ಘಟನೆ ನಡೆದಿದೆ. ತಾಯಿ ಮೊದಲು ಮಗಳಿಗೆ ನೇಣು ಹಾಕಿ ನಂತರ ತಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಈ ಘಟನೆ ನಡೆದಿದೆ.

 

ಶವಗಳನ್ನು ಚಿಂಚೋಳಿ ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ. ಆತ್ಮಹತ್ಯೆಗೆ ಕಾರಣವೇನೆಂದು ತಿಳಿದು ಬಂದಿಲ್ಲ.

ಚಿಂಚೋಳಿ ಪೊಲೀಸರು ಸ್ಥಳಕ್ಕೆ ಬಂದಿದ್ದು, ಗಂಡ ಆನಂದ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ನಿಮ್ಮ ಅಡಿಕೆ ಸಸಿ ಒಣಗಿದೆಯಾ, ಇಲ್ಲಿದೆ ಪರಿಹಾರ !!

Leave A Reply

Your email address will not be published.