ನಿಮ್ಮ ಅಡಿಕೆ ಸಸಿ ಒಣಗಿದೆಯಾ? ಇಲ್ಲಿದೆ ಪರಿಹಾರ !!

Arecanut : ಇನ್ನೇನು ಬೇಸಿಗೆ ಬರುತ್ತಿದೆ. ಎಲ್ಲ ಕಡೆಯಲ್ಲೂ ನೀರಿನ ಆಭಾವ ಹೆಚ್ಚಾಗುತ್ತದೆ. ನಾವು ಅಡಿಕೆ(Arecanut)ಸಸಿಗಳಿಗೆ ಬೇಸಿಗೆ ಆರಂಭವಾಗುತ್ತಿದ್ದಂತೆ ನೆರಳನ್ನು ಮಾಡಬೇಕು. ಕೆಲವರು ಹೇಳುತ್ತಾರೆ. ನಮ್ಮ ಅಡಿಕೆ ಸಸಿಗಳು ಕೆಂಪಗೆ ಆಗಿವೆ. ನೀರು ಗೊಬ್ಬರ ಹಾಕಿದರು ಈಗೆ ಇವೆ ಎಂದು. ಇದಕ್ಕೆ ಮುಖ್ಯ ಕಾರಣ ಬಿಸಿಲು. ಅಡಿಕೆಗೆ ಗಿಡಗಳನ್ನು ಬಿಸಿಲಿನಿಂದ ರಕ್ಷಿಸುವುದು ಹೇಗೆ ಎಂದು ನೋಡೋಣ..

 

ಮೊದಲನೆಯದಾಗಿ 5 ವರ್ಷದ ಒಳಗಿನ ಅಡಿಕೆ ಗಿಡಗಳು ಬಿಸಿಲಿನ ಬೇಗೆಗೆ ತಡೆದುಕೊಳ್ಳುವುದಿಲ್ಲ. ಇದಕ್ಕಿಂತ ಮೇಲ್ಪಟ್ಟ ಗಿಡಗಳು ತಡೆದುಕೊಳ್ಳುತ್ತವೆ. ಆಗಾಗಿ ನಾವು ಸಸಿಗಳನ್ನು ನೆಡುವುದರಿಂದ ಅವುಗಳ ಪೋಷಣೆಯನ್ನು ಶುರು ಮಾಡಬೇಕು.

 

ಅಗಸೆ ನೆಡುವುದು ಲಾಭದಾಯಕ

 

ನಾವು ಅಡಿಕೆ ಸಸಿಗಳನ್ನು ನೆಡುವಾಗಲೇ ಅವುಗಳಿಗೆ ನೆರಳನ್ನು ಮಡಬೇಕು. ಪ್ರತಿ ಅಡಿಕೆಯ ಸಾಲಿನ ಮಧ್ಯೆ ಅಗಸೆ ಮರವನ್ನು ಬೆಳೆಸುವುದು ತುಂಬಾ ಲಾಭದಾಯಕ. ಇದು ನೆರಳು ನೀಡುವ ಜೊತೆಗೆ ಆದಾಯದ ಮೂಲ ಕೂಡ. ಸಸಿಗಳನ್ನು ನೆಡುವಾಗಲೇ ಅಗಸೆ ಯನ್ನು ನೆಟ್ಟರೆ 2 ತಿಂಗಳಲ್ಲಿ ಗಿಡಗಳಿಗೆ ಸಂಪೂರ್ಣ ನೆರಳನ್ನು ಒದಗಿಸುತ್ತದೆ.

 

ಅಗಸೆಯ ಸೊಪ್ಪಿಗೆ ಕೆಲ ಕಡೆ ತುಂಬಾ ಬೇಡಿಕೆ ಇದೆ. ಕುರಿ ಮೇಕೆ ಸಾಕಾಣಿಕೆ ಮಾಡುವವರಿಗೆ ಈ ಸೊಪ್ಪು ಜೀವ ಇದ್ದಂತೆ. ಒಂದು ಎಕ್ಕರೆಗೆ ವರ್ಷಕ್ಕೆ ಸಮಾರು 50 ಸಾವಿರದಿಂದ 70 ಸಾವಿರದ ಆದಾಯಗಳಿಸಬಹುದು.

 

ಈ ಸೊಪ್ಪನ್ನು ವರ್ಷಕ್ಕೆ 3 ಬಾರಿ ಕಟಾವು ಮಾಡಬಹುದು. ಇದು ಕಟಾವು ಮಾಡಿದಂತೆ ಮತ್ತೆ ಚಿಗುರುತ್ತದೆ. ಕನಿಷ್ಟ 5 ವರ್ಷ ಹೀಗೆ ಇರುತ್ತದೆ.

 

ಹರಳು ಗಿಡ ಉತ್ತಮ ನೆರಳು ನೀಡುತ್ತದೆ.

 

ನೆರಳನ್ನು ನೀಡಲು ಮರ ಹರಳು ಎಂಬ ಒಂದು ಗಿಡವಿದೆ. ಇದನ್ನು ಎಣ್ಣೆಯ ಅಂಶವನ್ನು ಹೊಂದಿರುತ್ತದೆ. ಇದರ ಎಣ್ಣೆಯನ್ನು ತಲೆಗೆ ಹಚ್ಚಿಕೊಳ್ಳುತ್ತಾರೆ. ಇವುಗಳು 10 ಅಡಿ ಎತ್ತರವನ್ನು ಬೆಳೆಯುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಮೂಲಕ ಸೂರ್ಯನ ಕಿರಣಗಳು ಸಸಿಗಳ ಮೇಲೆ ಬೀಳದಂತೆ ತಡೆಯಲು ಸಹಕಾರಿಯಾಗಿದೆ. ಇದು ಆದಾಯದ ಮೂಲವಾಗಿದೆ. ಒಂದು ಸೇರು ಹರಳಿಗೆ 130 ರೂಪಾಯಿ ತೆಗೆದು ಕೊಳ್ಳುತ್ತಾರೆ. ಇದರಿಂದ ಒಳ್ಳೆ ಲಾಭ ಗಳಿಸಬಹುದು.

 

ಈಗೆ ಆಡಿಕೆಯನ್ನು ಬಿಸಿಲಿನಿಂದ ರಕ್ಷಿಸುವ ಜೊತೆಗೆ ಆದಾಯವನ್ನು ಗಳಿಸಬಹುದು.

ಇದನ್ನೂ ಓದಿ : Post Office : ಕೇವಲ 10,000 ಡೆಪಾಸಿಟ್ ಮಾಡಿ, 7 ಲಕ್ಷಕ್ಕಿಂತಲೂ ಅಧಿಕ ಮೊತ್ತ ಪಡೆಯಿರಿ

 

 

Leave A Reply

Your email address will not be published.