Krishi Honda: ಜಮೀನಿನಲ್ಲಿ ಕೃಷಿ ಹೊಂಡ ಹೊಂದಿರುವ ರೈತರಿಗೆಲ್ಲಾ ಬಂತು ಹೊಸ ರೂಲ್ಸ್ – ಸರ್ಕಾರದ ಖಡಕ್ ಆದೇಶ !!

Krishi Honda: ಕೃಷಿ ಹೊಂಡ ಯೋಜನೆಯು ಸರ್ಕಾರವು ರೈತರಿಗೆ ಮಾಡಿಕೊಟ್ಟಿರುವ ಬಹು ಉಪಯುಕ್ತ ಯೋಜನೆಗಳಲ್ಲಿ ಒಂದು. ಇದರಿಂದ ಎಷ್ಟೋ ರೈತರು ನೀರು ಸಂಗ್ರಹಿಸಿ ತಮ್ಮ ಹೊಲ ಗದ್ದೆಗಳ ದಾಹವನ್ನು ನೀಗಿಸುತ್ತಿದ್ದಾರೆ. ಇದೀಗ ಸರ್ಕಾರ ಕೃಷಿ ಹೊಂಡ(Krishi Honda) ಹೊಂದಿರುವ ರೈತರಿಗೆ ಹೊಸ ರೂಲ್ಸ್ ಜಾರಿಮಾಡಿದೆ.
ಅದೇನೆಂದರೆ ಜಮೀನುಗಳಲ್ಲಿರುವ ಕೃಷಿ ಹೊಂಡಗಳಿಗೆ ತಡೆ ಬೇಲಿ ಕಾಬೇಕು, ಬೇಲಿ ಹಾಕುವುದು ಕಡ್ಡಾಯ ಎಂದು ರಾಜ್ಯ ಸರ್ಕಾರ ಆದೇಶಿಸಿದೆ. ಹೌದು, ವಿಧಾನ ಪರಿಷನ್‌ನಲ್ಲಿ(Vidhanaparishath) ಶುಕ್ರವಾರ ಬಿಜೆಪಿಯ ಎಸ್. ಕೇಶವ ಪ್ರಸಾದ್ ಅವರ ಪ್ರಶ್ನೆಗೆ ಉತ್ತರಿಸಿದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ಸಹಾಯಧನ ಪಡೆದು ರೈತರೇ ತಮ್ಮ ಹೊಲಗಳಲ್ಲಿ ನಿರ್ಮಿಸಿಕೊಳ್ಳುವ ಕೃಷಿ ಹೊಂಡಗಳಲ್ಲಿ ಮಕ್ಕಳು, ಜಾನುವಾರು ಬಿದ್ದು ಮೃತಪಟ್ಟ ಕೆಲ ಘಟನೆಗಳು ವರದಿಯಾಗಿವೆ. ಹಾಗಾಗಿ, ಕೃಷಿ ಹೊಂಡಗಳ ಸುತ್ತ ತಡೆಬೇಲಿ ಹಾಕುವುದನ್ನು ಕಡ್ಡಾಯಗೊಳಿಸಲಾಗುವುದು ಎಂದರು.
ಏನಿದು ಕೃಷಿ ಹೊಂಡ ಯೋಜನೆ?
ಮಳೆಯ ನೀರು ಪೋಲಾಗುವುದನ್ನ ತಡೆದು ಅವಶ್ಯ ಬಿದ್ದಾಗ ಬಿತ್ತನೆ ಮಾಡಿದ ಬೆಳೆಗಳಿಗೆ ಹರಿಸಲು ಸಂಗ್ರಹಿಸಿಡುವುದಕ್ಕೆ ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ. ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕೃಷಿ ಸಮ್ಮಾನ್, ರಾಜ್ಯ ಸರ್ಕಾರದ ಕೃಷಿ ಭಾಗ್ಯ ಯೋಜನೆ ಹಾಗೂ ಉದ್ಯೋಗ ಖಾತ್ರಿಗಳ ಮೂಲಕ ಪ್ರತಿ ವರ್ಷವೂ ದಾಖಲೆಗಳಿರುವ ರೈತರ ಜಮೀನಿಗೆ ಕೃಷಿ ಹೊಂಡಗಳನ್ನು ನಿರ್ಮಿಸಲಾಗುತ್ತಿದೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:
ಕೃಷಿ ಭಾಗ್ಯ ಯೋಜನೆ(Krishi Bhagya)ಯಡಿ ಕೃಷಿ ಹೊಂಡ, ಕ್ಷೇತ್ರ ಬದು ನಿರ್ಮಾಣ, ಕೃಷಿ ಹೊಂಡದಿಂದ ಎತ್ತಲು ಪಂಪ್ ಸೆಟ್, ಕೃಷಿ ಹೊಂಡ ಸುತ್ತಲೂ ತಂತಿ ಬೇಲಿ (GI Wire Fencing ) ಮಾಡಲು ಅಗತ್ಯ ದಾಖಲೆ ಸಲ್ಲಿಸಬೇಕಾಗುತ್ತದೆ. ಹೌದು, ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿ ಪಡೆದು ಸರಿಯಾಗಿ ಭರ್ತಿ ಮಾಡಬೇಕು. ರೈತರ ಭಾವಚಿತ್ರ ಸಲ್ಲಿಸಬೇಕು. ಎಫ್ಐಡಿ ಸಲ್ಲಿಸಬೇಕು. ಒಂದು ವೇಳೆ ರೈತರ ಬಳಿ ಎಫ್ಐಡಿ ಇಲ್ಲವಾದಲ್ಲಿ ಆಧಾರ್ ಪ್ರತಿ ಸಲ್ಲಿಸಬೇಕು. ರೈತರು ಪಹಣಿ ಪ್ರತಿ ಸಲ್ಲಿಸಬೇಕು. ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸಲ್ಲಿಸಬೇಕು. ರೈತರ ಚಾಲ್ತಿಯಲ್ಲಿರುವ ಬ್ಯಾಂಕ್ ಪಾಸ್ ಬುಕ್ ಪ್ರತಿ ಸಲ್ಲಿಸಬೇಕು.
ರೈತರಿಗೆ ಎಷ್ಟು ಸಬ್ಸಿಡಿ ನೀಡಲಾಗುವುದು?
ಕೃಷಿ ಹೊಂಡ ಅಳತೆಗನುಸಾರವಾಗಿ ಸಬ್ಸಿಡಿ ನೀಡಲಾಗುವುದು. ಇದರೊಂದಿಗೆ ಬದು ನಿರ್ಮಾಣ, ಬೇಲಿ ತಂತಿ ನಿರ್ಮಾಣ, ಹನಿ ನೀರಾವರಿ ಅಥವಾ ತುಂತುರು ನೀರಾವರಿಗೂ ಸಬ್ಸಿಡಿ ನೀಡಲಾಗುವುದು. ಆದರೆ ಎಷ್ಟು ಸಬ್ಸಿಡಿ ನೀಡಲಾಗುವುದು ಅಂದರೆ ನೀವು ಖರೀದಿಸುವ ಉಪಕರಣಗಳ ಮೇಲೆ ಶೇ. 50 ರಷ್ಟು ಸಬ್ಸಿಡಿ ನೀಡಲಾಗುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಹೆಚ್ಚಿನ ಸಬ್ಸಿಡಿ ನೀಡಲಾಗುವುದು.