Uttar pradesh: RSS ಮುಖಂಡ ಹಾಗೂ ಪುತ್ರಿಯ ಕತ್ತು ಸೀಳಿ ಬರ್ಬರ ಹತ್ಯೆ- ಕೊಂದದ್ದು ಯಾರು, ಯಾಕೆ ಎಂದು ಗೊತ್ತಾದ್ರೆ ಶಾಕ್ ಆಗ್ತೀರಾ!!

Uttar pradesh: ಆರ್ ಎಸ್ ಎಸ್ ಮುಖಂಡ ಹಾಗೂ ದತ್ತು ಪುತ್ರಿಯನ್ನು ಕುತ್ತಿಗೆ ಸೀಳಿ ಅವರ ಪುತ್ರನೆ ಭೀಕರವಾಗಿ ಹತ್ಯೆ ಮಾಡಿದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.

 

ಹೌದು, ಉತ್ತರ ಪ್ರದೇಶದ(Uttar pradesh) ಅಮ್ರೋಹಾ ನಗರದ ಕತ್ರಾ ಗುಲಾಮ್ ಅಲಿ ಪ್ರದೇಶದಲ್ಲಿನ ಮನೆಯಲ್ಲಿ ತಂದೆ ಯೋಗೇಶ್ ಚಂದ್ ಅಗರ್ವಾಲ್ ಮತ್ತು ಮೂರು ವರ್ಷಗಳ ಹಿಂದೆ ದತ್ತು ಪಡೆದ 27 ವರ್ಷದ ಸೃಷ್ಟಿ ಎಂಬ ಸಹೋದರಿಯನ್ನು ಅವರ ಮಗ 42 ವರ್ಷದ ಮಗ ಇಶಾಂಕ್ ಅಗರ್ವಾಲ್ ಆಸ್ತಿ ವಿಚಾರಕ್ಕೆ ಭೀಕರವಾಗಿ ಕೊಲೆ ಮಾಡಿ, ನಾಟಕವಾಡಿದ್ದಾನೆ. ಬಳಿಕ ತನಿಖೆ ವೇಳೆ ನಿಜಾಂಶ ಬಯಲಾಗಿ ಪೋಲೀಸ್ ಅತಿಥಿಯಾಗಿದ್ದಾನೆ.

 

ಏನಿದು ಪ್ರಕರಣ?

ಯೋಗೇಶ್ ಚಂದ್ ಅಗರ್ವಾಲ್ ಅವರು ಅಮ್ರೋಹ ವ್ಯಾಪಾರಿ ಮಂಡಲದ ಜಿಲ್ಲಾ ಮುಖ್ಯಸ್ಥರಾಗಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಭಾಗವಾದ ಸೇವಾ ಭಾರತಿಯ ಪೋಷಕರಾಗಿದ್ದರು. 3 ವರ್ಷಗಳ ಹಿಂದೆ ಸೃಷ್ಟಿ ಎಂಬ ಹುಡುಗಿಯನ್ನು ದತ್ತು ಪಡೆದಿದ್ದರು. ಅಲ್ಲದೆ ಅರ್ಧ ಆಸ್ತಿಯನ್ನು ಸೃಷ್ಟಿ ಹೆಸರಿಗೆ ನೋಂದಣಿ ಮಾಡಿಸಿದ್ದಾರೆ. ಆಕೆ ಯೋಗೇಶ್ ಅವರ ಸೋದರ ಮಾವನ ಮಗಳು ಕೂಡ ಹೌದು. ಹೆಂಡತಿಯೊಂದಿಗೆ ದೆಹಲಿಯಲ್ಲಿ ನೆಲೆಸಿದ್ದ ಇಶಾಂಕ್ ವಾರಕ್ಕೆರಡು ಬಾರಿ ತಂದೆ ಮನೆಗೆ ಬರುತ್ತಿದ್ದ. ಅಂತೆಯೇ ಶುಕ್ರವಾರ ಬೆಳಗ್ಗೆ ಹೆಂಡತಿ ಜೊತೆ ಅಮ್ರೋಹಾ ತಲುಪಿದ್ದಾನೆ. ಆದರೆ ಅಂದು ರಾತ್ರಿಯೇ ಅಪ್ಪ-ದತ್ತು ಮಗಳ ಕೊಲೆಯಾಗಿದೆ.

 

ಈ ಕುರಿತು ಪೋಲೀಸ್ ದೂರು ದಾಖಲಿಸಿದ ಆತ ಶುಕ್ರವಾರ ರಾತ್ರಿ 11.30ರ ಸುಮಾರಿಗೆ ಕುಟುಂಬದ ನಾಲ್ವರೂ ಒಟ್ಟಿಗೆ ಊಟ ಮಾಡಿದ್ದು, ತಾನು ಮತ್ತು ಪತ್ನಿ ಮೊದಲ ಮಹಡಿಯಲ್ಲಿ ಮಲಗಿದ್ದರೆ, ತಂದೆ ಮತ್ತು ದತ್ತು ಪಡೆದ ಸಹೋದರಿ ನೆಲ ಮಹಡಿಯಲ್ಲಿ ಮಲಗಿದ್ದರು. ತನ್ನ ತಂದೆ ಮತ್ತು ಸಹೋದರಿಯನ್ನು ಯಾರೋ ಕೊಂದಿದ್ದಾರೆ ಎಂದು ತಿಳಿಸಿದ್ದಾನೆ.

 

ಆದರೆ ತನಿಖೆ ನಡೆಸಿದ ಪೋಲೀಸ್ ಅಧಿಕಾರಿಗಳು ಸೀದಾ ಬಂದು ಇಶಾಂಕ್ ನನ್ನು ಬಂಧಿಸಿದ್ದಾರೆ. ಯಾಕೆಂದರೆ ತಂದೆ,ಮಗಳು ಕೊಲೆಯಾದ ಕೋಣೆಯಲ್ಲಿ ರಕ್ತದ ಕಲೆಗಳನ್ನು ಅಳಿಸಲು ಪ್ರಯತ್ನಿಸಲಾಗಿದೆ. ಕುತ್ತಿಗೆಯನ್ನು ಹರಿತವಾದ ಆಯುಧದಿಂದ ಸೀಳಲಾಗಿದೆ. ಮೊದಲ ಮಹಡಿಗೆ ಹೋಗುವ ಮೆಟ್ಟಿಲುಗಳಲ್ಲಿ ಕೆಲವು ರಕ್ತದ ಕಲೆಗಳೂ ಕಂಡುಬಂದಿದೆ. ಘಟನೆಯ ಸಮಯದಲ್ಲಿ ಇಶಾಂಕ್ ಮತ್ತು ಅವರ ಪತ್ನಿ ಅವರು ಮಲಗಿದ್ದರು ಎಂದು ಹೇಳಿದ್ದಾರೆ. ಮನೆಯಲ್ಲಿ 15 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದರೂ ಎಲ್ಲವೂ ಕೆಲಸ ಮಾಡದ ಕಾರಣ ಕುಟುಂಬದ ಹತ್ತಿರದವರೇ ಹಂತಕರು ಇರಬಹುದೆಂಬ ಶಂಕೆ ವ್ಯಕ್ತವಾಗಿದೆ. ಇಶಾಂಕ್‌ನನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ತನ್ನ ತಂದೆ ಮತ್ತು ದತ್ತು ತಂಗಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ.

1 Comment
Leave A Reply

Your email address will not be published.