Vijay: ದಳಪತಿ ಎಂಟ್ರಿಯಿಂದ ರಂಗೇರಿದೆ ತಮಿಳು ಪಾಲಿಟಿಕ್ಸ್! ನಾನು ರಾಜಕಾರಣಕ್ಕೆ ಬರುತ್ತೇನೆ ಎಂದ ನಟಿ!

Vijay:ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ (Vijay)ರಾಜಕೀಯಕ್ಕೆ ಎಂಟ್ರಿ ನೀಡಲಿದ್ದಾರೆ. ಈ ಕುರಿತಂತೆ ಹಲವಾರು ನಟ ನಟಿಯರು ಕಾಮೆಂಟ್ ಮಾಡಿದ್ದಾರೆ. ಖ್ಯಾತ ನಟಿ ನನಗೂ ರಾಜಕೀಯಕ್ಕೆ ಹೋಗುವ ಆಸೆ ಇದೆ ಎಂದಿದ್ದಾರೆ.

ದಳಪತಿ ವಿಜಯ್ ತಮಿಳಿಗ ವೆಟ್ರಿ ಕಳಗಂ ಎಂಬ ಪಕ್ಷವನ್ನು ಈಗಾಗಲೇ ಸ್ಥಾಪಿಸಿದ್ದಾರೆ. ಹಲವು ವರ್ಷಗಳಿಂದ ತನ್ನದೇ ಸಂಘಟನೆ ಮಾಡಿಕೊಂಡು ಜನ ಸೇವೆಯನ್ನು ಮಾಡುತ್ತಿರುವ ದಳಪತಿ ವಿಜಯ್ ಇದೀಗ ಸಿನಿಮಾ ಬಿಟ್ಟು ಫುಲ್ ಟೈಮ್ ರಾಜಕಾರಣಿ ಆಗಲು ಸಿದ್ಧತೆ ನಡೆಸುತ್ತಿದ್ದಾರೆ.

ರಾಜಕೀಯಕ್ಕೆ ಬಂದಿರುವುದಾಗಿ ನಟ ವಿಜಯ್ ತಿಳಿಸಿದ್ದಾರೆ. ವಿಜಯ್ ರವರ ರಾಜಕೀಯ ಎಂಟ್ರಿ ಬಗ್ಗೆ ತಮಿಳಿನಲ್ಲಿ ಒಳ್ಳೆಯ ಪ್ರತಿಕ್ರಿಯೆ ದೊರೆತಿದೆ. ಅಭಿಮಾನಿಗಳು ನಮ್ಮ ಮತ ದಳಪತಿ ವಿಜಯ್ಗೆ ಎನ್ನುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಭಾರೀ ಪ್ರಚಾರ ನಡೆಯಲು ಶುರುವಾಗಿದೆ.

ತಮ್ಮ ಪಕ್ಷಕ್ಕೆ ತಮಿಳುನಾಡು ವೆಟ್ರಿ ಕಳಗಂ ಹೆಸರಿಟ್ಟಿರುವ ವಿಜಯ್, ನಾನು ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಮುಂಬರುವ 2026 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.

ವಿಜಯ್ ರಾಜಕೀಯ ಬರುವ ಬಗ್ಗೆ ಹಲವು ಮಂದಿ ಚಿತ್ರರಂಗದ ನಟ ನಟಿಯರು, ರಾಜಕೀಯ ಗಣ್ಯರು ಕಮೆಂಟ್ ಮಾಡಿದ್ದಾರೆ. ಇದೀಗ ಕಾಲಿವುಡ್ ಖ್ಯಾತ ನಟಿ ಕೂಡ ರಾಜಕೀಯ ಪ್ರವೇಶಿಸುವ ಬಗ್ಗೆ ಮಾತಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ನಟಿ ವಾಣಿಬೋಜನ್, ಒಳ್ಳೆಯ ಕೆಲಸ ಮಾಡಬೇಕಾದರೆ ಯಾರು ಬೇಕಾದರೂ ರಾಜಕೀಯ ಸೇರಬಹುದು ಎಂದಿದ್ದಾರೆ.

ನಟ ವಿಜಯ್ ಅವರ ರಾಜಕೀಯಕ್ಕೆ ಬರುತ್ತಿರುವುದನ್ನು ನಾನು ಸ್ವಾಗತಿಸುತ್ತೇನೆ ಎಂದ ನಟಿ ವಾಣಿ ಬೋಜನ್ ಅವರಿಗೂ ಒಂದು ಅವಕಾಶ ಕೊಡೋಣ ನೋಡೋಣ ಎಂದು ತಿಳಿಸಿದ್ದಾರೆ.

ಹೊಸ ಪಕ್ಷ ಕಟ್ಟಿರು ವಿಜಯ್ ರಾಜಕೀಯಕ್ಕೆ ಬಂದು ಏನು ಮಾಡುತ್ತಾರೆ ಎಂದು ನೋಡೋಣ. ನಾನು ವೆಬ್ ಸೀರೀಸ್ ಮಾಡುವಾಗ, ನಾನು ಕೂಡ ರಾಜಕೀಯದಲ್ಲಿ ಇರಬೇಕೆಂದು ಮನಸ್ಸಾಗಿತ್ತು.

ತಮಿಳು ಪಾಲಿಟಿಕ್ಸ್ ಗೆ ಸಿನಿಮಾ ನಟ-ನಟಿಯರ ಎಂಟ್ರಿ ಹೊಸದೇನಲ್ಲ. ನಟ ದಳಪತಿ ವಿಜಯ್ ರವರ ಒಟ್ಟಿಗೆ ನನಗೂ ರಾಜಕೀಯ ಸೇರುವ ಆಸೆ ಇದೆ ಎಂದು ನಟಿ ವಾಣಿಬೋಜನ್ ಹೇಳಿದ್ದಾರೆ.

Leave A Reply

Your email address will not be published.