ದೇಹದ ಈ ಭಾಗದಲ್ಲಿ ಕೂದಲು ಬೆಳೆದರೆ ಅದು ಅದೃಷ್ಟದ ಸಂಕೇತ!!

Hair On Body Astrology: ಹಿಂದೂ ಧರ್ಮದಲ್ಲಿ ವಿವಿಧ ಗ್ರಂಥಗಳಿವೆ. ಅವುಗಳಲ್ಲಿ ಒಂದು ಹಸ್ತಸಾಮುದ್ರಿಕ ಶಾಸ್ತ್ರ. ಈ ಗ್ರಂಥವು ದೇಹದ ಎಲ್ಲಾ ಭಾಗದಲ್ಲಿ ಕೂದಲು ಬೆಳೆಯುವ ಬಗೆಗೆ ಮತ್ತು ಅದರ ವಿಶೇಷತೆ ಬಗ್ಗೆ ತಿಳಿಸಿದೆ . ಈ ಬಗ್ಗೆ ತಿಳಿಯೋಣ ಬನ್ನಿ.

 

ಕಾಲಿನಲ್ಲಿ ಕೂದಲು

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಮಹಿಳೆಯ ಕಾಲಿನಲ್ಲಿ ಕೂದಲು ದಪ್ಪವಾಗಿದ್ದರೆ, ಅದು ಅವಳ ಸಂಗಾತಿಗೆ ಅದೃಷ್ಟವನ್ನು ತಂದುಕೊಡುತ್ತದೆ. ಇದರ ಜೊತೆಗೆ ಪ್ರತಿ ಕೆಲಸದಲ್ಲಿಯೂ ಯಶಸ್ಸು ಸಿಗುತ್ತದೆ ಎಂದು ಹೇಳುತ್ತದೆ.

 

ಕೈಯಲ್ಲಿ ಕೂದಲು

ಕೈಯಲ್ಲಿ ಕೂದಲು ಹೊಂದಿರುವ ಮಹಿಳೆಯರು ತುಂಬ ಅದೃಷ್ಟವನ್ನು ಹೊಂದಿರುತ್ತಾರೆ.ಅಷ್ಟೇ ಅಲ್ಲದೆ, ಸಮಯಕ್ಕೆ ಸರಿಯಾಗಿ ತಮ್ಮ ಕೆಲಸವನ್ನು ಮಾಡುವುದರಲ್ಲಿ ಪರಿಣಿತರಾಗಿರುತ್ತಾರೆ.

 

ತೋಳುಗಳ ಮೇಲೆ ಕೂದಲು

ತೋಳುಗಳ ಮೇಲೆ ಕೂದಲು ಹೊಂದಿರುವ ಜನರಿಗೆ ಸದಾ ಅದೃಷ್ಟ ಇರುತ್ತದೆ. ಇವರು ತುಂಬ ಬುದ್ಧಿವಂತರಾಗಿರುತ್ತಾರೆ. ಜೊತೆಗೆ ಪ್ರತಿ ನಿರ್ಧಾರವನ್ನು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳುತ್ತಾರೆ.

 

ಎದೆಯ ಮೇಲೆ ಕೂದಲು

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಯಾವುದೇ ಪುರುಷ ಅಥವಾ ಮಹಿಳೆಯ ಎದೆಯ ಮೇಲೆ ಕೂದಲು ಇದ್ದರೆ ಅದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇವರ ಸ್ವಭಾವವು ತೃಪ್ತಿಯನ್ನು ನೀಡುತ್ತದೆ. ಇವರು ಹಣವನ್ನು ಸರಿಯಾಗಿ ಉಳಿಕೆ ಮಾಡುತ್ತಾರೆ.

 

ಕಿವಿಯ ಮೇಲೆ ಕೂದಲು

ಗಂಡಾಗಲಿ ಹೆಣ್ಣಾಗಲಿ, ಕಿವಿಯಲ್ಲಿ ಕೂದಲು ಇರುವವರನ್ನು ನಂಬಿಕೆಗೆ ಹತ್ತಿರವಾಗಿರುತ್ತಾರೆ. ಅಂತಹ ಜನರು ತುಂಬಾ ವಿಶ್ವಾಸಾರ್ಹರು ಮತ್ತು ಇತರರ ಭಾವನೆಗಳನ್ನು ತುಂಬ ಗೌರವದಿಂದ ಕಾಣುತ್ತಾರೆ.

 

ಬೆನ್ನಿನ ಮೇಲೆ ಕೂದಲು

ಬೆನ್ನಿನ ಮೇಲೆ ಕೂದಲು ಇರುವವರು ಬಹಳ ಧೈರ್ಯವಂತರು. ಸಮಸ್ಯೆಯನ್ನು ಧೈರ್ಯದಿಂದ ಎದುರಿಸುತ್ತಾರೆ.

Leave A Reply

Your email address will not be published.