CM Yogi: ‘ಸಿಎಂ ಯೋಗಿ ಬಂಗಾಳಕ್ಕೆ ಬಂದರೆ…’ ಸಿಟ್ಟಿಗೆದ್ದ ಟಿಎಂಸಿ ನಾಯಕರು, ಬಿಜೆಪಿಗೆ ಎಚ್ಚರಿಕೆ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ನಾಯಕ ಸಿದ್ದಿಕುಲ್ಲಾ ಚೌಧರಿ ಎಚ್ಚರಿಕೆಯೊಂದನ್ನು ನೀಡಿರುವ ಕುರಿತು ವರದಿಯಾಗಿದೆ. ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿರುವ ನೆಲಮಾಳಿಗೆಯಲ್ಲಿ ಹಿಂದೂಗಳಿಗೆ ಪೂಜೆ ಮಾಡಲು ಅವಕಾಶ ನೀಡಿದ ಕೆಲವು ದಿನಗಳ ನಂತರ ಟಿಎಂಸಿ ನಾಯಕನಿಂದ ಎಚ್ಚರಿಕೆಯೊಂದು ಬಂದಿದೆ. ಟಿಎಂಸಿ ನಾಯಕ ಸಿದ್ದಿಕುಲ್ಲಾ ಚೌಧರಿ ಹಿಂದೂಗಳಿಗೆ ಜ್ಞಾನವಾಪಿ ಮಸೀದಿಯನ್ನು ಕೂಡಲೇ ತೆರವುಗೊಳಿಸುವಂತೆ ಹೇಳಿದ್ದಾರೆ.

ಇದನ್ನೂ ಓದಿ: Ecuador: ಕಳಪೆ ರಸ್ತೆಯ ವೀಡಿಯೋ ಚಿತ್ರೀಕರಣ ಮಾಡಿದ 29 ವರ್ಷದ ಮಹಿಳಾ ಕೌನ್ಸಿಲರ್‌; ಹಾಡಹಗಲಿನಲ್ಲೇ ಗುಂಡಿಟ್ಟು ಬರ್ಬರ ಹತ್ಯೆ

ಕೋಲ್ಕತ್ತಾದಲ್ಲಿ ಜಮಿಯತ್‌ ಉಲೇಮಾ-ಎ-ಹಿಂದ್‌ ರ್ಯಾಲಿಯಲ್ಲಿ ಚೌಧರಿ ಭಾಗವಹಿಸಿದ್ದು, ಈ ಸಂದರ್ಭದಲ್ಲಿ ಮಾತನಾಡುತ್ತಾ, ಯೋಗಿ ಆದಿತ್ಯನಾಥ್‌ (yogi Adityanth) ಅವರು ಪಶ್ಚಿಮ ಬಂಗಾಳಕ್ಕೆ ಬಂದರೆ ನಾವು ಅವರನ್ನು ಸುತ್ತುವರಿಯುತ್ತೇವೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಜ್ಞಾನವಾಪಿ ಮಸೀದಿಯಲ್ಲಿ ಹಿಂದೂಗಳು ಪೂಜೆ ಪ್ರಾರಂಭಿಸಿದ್ದು, ತಕ್ಷಣವೇ ಅವರು ಅಲ್ಲಿಂದ ಜಾಗ ಖಾಲಿ ಮಾಡಬೇಕು. ಮುಖ್ಯಮಂತ್ರಿಗಳ ಈ ಕ್ರಮಕ್ಕೆ ಅರ್ಥ ಇದೆಯಾ ಎಂದು ಅವರು ಈ ಸಂದರ್ಭದಲ್ಲಿ ಪ್ರಶ್ನೆ ಮಾಡಿದ್ದು, ಅವರೇನಾದರೂ ಬಂಗಾಳಕ್ಕೆ ಬಂದರೆ ಅವರನ್ನು ಹೊರಗೆ ಹೋಗಲು ನಾವು ಬಿಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

1 Comment
  1. […] ಇದನ್ನೂ ಓದಿ: CM Yogi: ‘ಸಿಎಂ ಯೋಗಿ ಬಂಗಾಳಕ್ಕೆ ಬಂದರೆ…’ … […]

Leave A Reply

Your email address will not be published.