Ecuador: ಕಳಪೆ ರಸ್ತೆಯ ವೀಡಿಯೋ ಚಿತ್ರೀಕರಣ ಮಾಡಿದ 29 ವರ್ಷದ ಮಹಿಳಾ ಕೌನ್ಸಿಲರ್‌; ಹಾಡಹಗಲಿನಲ್ಲೇ ಗುಂಡಿಟ್ಟು ಬರ್ಬರ ಹತ್ಯೆ

ಕಳಪೆ ರಸ್ತೆಯ ವೀಡಿಯೋ ಚಿತ್ರೀಕರಣ ಮಾಡುತ್ತಿದ್ದ ಕೌನ್ಸಿಲರನ್ನು ಗುಂಡಿಕ್ಕಿ ಕೊಂದ ಘಟನೆಯೊಂದು ಈಕ್ವೆಡಾರ್‌ನಲ್ಲಿ ನಡೆದಿದೆ. ಮಹತ್ವದ ಸಭೆ ಮುಗಿದ ಬಳಿಕ ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ.

 

ಡಯಾನಾ ಕಾರ್ನೆರೋ (29 ವರ್ಷ) ಎಂಬುವವರೇ ದುಷ್ಕರ್ಮಿಗಳ ಹೊಡೆತಕ್ಕೆ ಸಿಲುಕಿ ಮೃತ ಹೊಂದಿದವರು. ಗುವಾಯಾಸ್‌ ನ ನರನ್‌ ಜಾಲ್‌ ಪ್ರದೇಶದಲ್ಲಿನ ಕಳಪೆ ಕಾಮಗಾರಿ ರಸ್ತೆಯ ವಿಡಿಯೋ ಚಿತ್ರೀಕಣ ಮಾಡುತ್ತಿದಾಗ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಆಕೆಯ ಹಣೆಗೆ ಗುಂಡು ಹೊಡೆದು ಪರಾರಿಯಾಗಿರುವುದಾಗಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

 

ಈ ಘಟನೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ.

1 Comment
  1. […] ಇದನ್ನೂ ಓದಿ: Ecuador: ಕಳಪೆ ರಸ್ತೆಯ ವೀಡಿಯೋ ಚಿತ್ರೀಕರಣ ಮಾಡಿ… […]

Leave A Reply

Your email address will not be published.