Mangaluru: ಧಾರಾವಾಹಿಯಲ್ಲಿ ದೈವಾರಾಧನೆ ಪ್ರದರ್ಶನ; ದೈವಾರಾಧಕರಿಂದ ಪೊಲೀಸ್ ಕಂಪ್ಲೇಟ್‌ ‌

Mangaluru Daivaaradhane: ಧಾರಾವಾಹಿಯಲ್ಲಿ ದೈವಾರಾಧನೆಯ ಪ್ರದರ್ಶನ ಮಾಡಿದ ಕಾರಣ ಇದೀಗ ದೈವಾರಾಧಕರು ಧಾರಾವಾಹಿ ತಂಡದ ವಿರುದ್ಧ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ದೈವಾರಾಧನೆ ಸಂರಕ್ಷಣಾ ಸಂಸ್ಥೆಯಿಂದ ಪೊಲೀಸ್‌ ದೂರು ನೀಡಲಾಗಿದೆ. ಖಾಸಗಿ ಚಾನೆಲ್‌ ನಲ್ಲಿ ಪ್ರಸಾರವಾದ ಧಾರಾವಾಹಿಗೆ ಇದೀಗ ಸಂಕಷ್ಟ ಎದುರಾಗಿದೆ.

ಇದನ್ನೂ ಓದಿ: CM Yogi: ‘ಸಿಎಂ ಯೋಗಿ ಬಂಗಾಳಕ್ಕೆ ಬಂದರೆ…’ ಸಿಟ್ಟಿಗೆದ್ದ ಟಿಎಂಸಿ ನಾಯಕರು, ಬಿಜೆಪಿಗೆ ಎಚ್ಚರಿಕೆ

ದೈವದ ಪಾತ್ರ ಮಾಡಿದ ಪ್ರಶಾಂತ್‌ ಸಿಕೆ ವಿರುದ್ಧ ಪ್ರಕರಣ ದಾಖಲಿಸಲು ದೂರು ನೀಡಲಾಗಿದೆ. ಈ ಕುರಿತು ಚಿತ್ರೀಕರಣ ಮಾಡಿದ ದೈವಾರಾಧನೆಯನ್ನು ಪ್ರಸಾರ ಮಾಡದಂತೆ ಮಂಗಳೂರು ನಗರ ಪೊಲೀಸ್‌ ಕಮೀಷನರ್‌ ಮತ್ತು ಪಾಂಡೇಶ್ವರ ಠಾಣೆಗೆ ದೂರು ನೀಡಲಾಗಿದೆ.

ಛದ್ಮವೇಷದಂತೆ ದೈವದ ವೇಷ ತೊಟ್ಟು, ದೈವದ ವೇಷಭೂಷಣಕ್ಕೆ ದೈವಾರಾಧನೆಗೆ ಅಪಮಾನ ಮಾಡಲಾಗಿದೆ ಎಂದು ಆರೋಪ ಮಾಡಲಾಗಿದೆ. ಕಾಂತಾರ ಸಿನಿಮಾ ಬಂದ ನಂತರ ದೈವಾರಾಧನೆಯನ್ನು ಹೆಚ್ಚು ಜನರು ಇಮಿಟೇಟ್‌ ಮಾಡುವುದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ.

Leave A Reply

Your email address will not be published.