West bengal: ಜೈಲಿನಲ್ಲಿರೋ ಮಹಿಳಾ ಕೈದಿಗಳು ಪ್ರೆಗ್ನೆಂಟ್- ಜೈಲಿಗೆ ಪುರುಷರ ಪ್ರವೇಶ ನಿಷೇದಿಸಿದ ಹೈಕೋರ್ಟ್ !!

Share the Article

West bengal: ಜೈಲಿನಲ್ಲಿರೋ ಮಹಿಳಾ ಕೈದಿಗಳು ಗರ್ಭಿಣಿಯಾರಾಗುತ್ತಿದ್ದು ಇದರಿಂದ ಆತಂಕಗೊಂಡಿರೋ ಹೈಕೋರ್ಟ್ ಜೈಲ್ ಒಳಗಡೆ ಪುರುಷರ ಪ್ರವೇಶವನ್ನು ನಿಷೇದಿಸಿ ಆದೇಶ ಹೊರಡಿಸಿದೆ.

ಇದನ್ನೂ ಓದಿ: Puttur: ಪುತ್ತಿಲ ಪರಿವಾರ ಜೊತೆ ಬಿಜೆಪಿ ವಿಲೀನ ದೃಢ; ದಿನ ನಿಗದಿಯೊಂದೇ ಬಾಕಿ

ಹೌದು, ಪಶ್ಚಿಮ ಬಂಗಾಳದ(West bengal) ವಿವಿಧ ಜೈಲುಗಳಲ್ಲಿ ಒಟ್ಟು 15 ಮಂದಿ ಗರ್ಭಿಣಿಯಾಗಿದ್ದು ಸುಮಾರು 196 ಮಕ್ಕಳನ್ನು ಹೆರಲಾಗಿದೆ ಎಂದು ವರದಿಯಾಗಿದೆ. ಹೀಗಾಗಿ ಮಹಿಳಾ ಕೈದಿಗಳು ಇರುವ ಆವರಣಗಳಿಗೆ ಪುರುಷ ಉದ್ಯೋಗಿಗಳು ಪ್ರವೇಶಿಸುವುದನ್ನು ನಿಷೇಧಿಸಬೇಕು ಎಂದು ಅಮಿಕಸ್ ಕ್ಯೂರಿ ಕೋಲ್ಕತ್ತಾ ಹೈಕೋರ್ಟ್ ಎದುರು ಪ್ರಸ್ತಾಪಿಸಿದ್ದಾರೆ.

ಅಂದಹಾಗೆ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಶಿವಜ್ಞಾನಂ ಮತ್ತು ನ್ಯಾಯಮೂರ್ತಿ ಸುಪ್ರತಿಮ್ ಭಟ್ಟಾಚಾರ್ಯ ಅವರ ವಿಭಾಗೀಯ ಪೀಠವು ಈ ಕುರಿತ ಅರ್ಜಿ ಸಲ್ಲಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಮುಂದಿನ ಸೋಮವಾರ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ವಿಭಾಗೀಯ ಪೀಠದ ಮುಂದೆ ಈ ವಿಷಯವನ್ನು ಮಂಡಿಸಲಾಗುವುದು ಎಂದು ಹೇಳಿದೆ.

Leave A Reply