Puttur: ಪುತ್ತಿಲ ಪರಿವಾರ ಜೊತೆ ಬಿಜೆಪಿ ವಿಲೀನ ದೃಢ; ದಿನ ನಿಗದಿಯೊಂದೇ ಬಾಕಿ

Puttur: ಪುತ್ತಿಲ ಪರಿವಾರವು ಬಿಜೆಪಿಗೆ ನೀಡಿದ್ದ ಮೂರು ದಿನಗಳ ಗಡುವು ಫೆ.8 ರಂದು ಮುಕ್ತಾಯಗೊಂಡಿದೆ. ಈ ಗಡುವು ಮುಕ್ತಾಯಗೊಳ್ಳುವ ಕೆಲಸ ಹೊತ್ತಿನಲ್ಲೇ ಪುತ್ತಿಲ ಪರಿವಾರವನ್ನು ತಮ್ಮ ಪಕ್ಷದ ಜೊತೆ ವಿಲೀನಗೊಳಿಸುವ ಪ್ರಸ್ತಾವಕ್ಕೆ ಬಿಜೆಪಿ ವರಿಷ್ಠರು ಹಸಿರು ನಿಶಾನೆ ತೋರಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Jyothish Shastra: ನೀವೇನಾದರೂ ಕಡಗ, ಲಾಕೆಟ್‌ ಧರಿಸುವವರಾಗಿದ್ದಾರೆ ಈ ವಿಷಯ ತಿಳಿದುಕೊಂಡರೆ ಉತ್ತಮ

ಬಿಜೆಪಿ ವರಿಷ್ಠರು ಅರುಣ್‌ ಪುತ್ತಿಲ ಅವರಿಗೆ ಗೌರವಯುತ ಹುದ್ದೆ ನೀಡಲು ನಿರ್ಧಾರ ಮಾಡಿದ್ದು, ಈ ಸಂಬಂಧ ಮಾಹಿತಿಯನ್ನು ಪುತ್ತಿಲ ಪರಿವಾರಕ್ಕೆ ಮಾಹಿತಿಯನ್ನು ರವಾನಿಸುವ ಮೂಲಕ ಒಂಭತ್ತು ತಿಂಗಳ ವಿರಸಕ್ಕೆ ಮಂಗಳ ಹಾಡಲಿದೆ ಎನ್ನುವ ಕುರಿತು ಮಾಹಿತಿ ಬಂದಿದೆ.

ಅರುಣ್‌ ಪುತ್ತಿಲ ಜೊತೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್‌ ಕೆ.ವಿ. ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಅವರು ಮಾತನಾಡಿ, ಗೌರವಯುತ ಸ್ಥಾನ ನೀಡುವುದಾಗಿ ತಿಳಿಸಿದ್ದಾರೆ. ಇದಕ್ಕೆ ತಮ್ಮ ಸಮ್ಮತಿಯನ್ನು ಅರುಣ್‌ ಪುತ್ತಿಲ ಅವರು ನೀಡಿದ್ದಾರೆ ವರದಿಯಾಗಿದೆ.

ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರನ್ನು ಅರುಣ್‌ ಪುತ್ತಿಲ ಭೇಟಿಯಾಗಲಿದ್ದು, ಪುತ್ತಿಲ ಪರಿವಾರದ ವಿಲೀನ ಮಾತ್ರ ಬಾಕಿ ಇದೆ ಎಂದು ತಿಳಿಸಿದೆ.

1 Comment
  1. […] ಇದನ್ನೂ ಓದಿ: Puttur: ಪುತ್ತಿಲ ಪರಿವಾರ ಜೊತೆ ಬಿಜೆಪಿ ವಿಲೀನ ದ… […]

Leave A Reply

Your email address will not be published.