Arecanut farming: ಈ ಗೊಬ್ಬರ ಹಾಕಿದರೆ, ಅಡಿಕೆ ವೇಗವಾಗಿ ಬೆಳೆಯುತ್ತೆ

ಬಹುತೇಕ ರೈತರಲ್ಲಿ ಒಂದು ಗೊಂದಲವಿದೆ. ಅಡಿಕೆ ಗಿಡಕ್ಕೆ ಹಸಿ ಗೊಬ್ಬರ ಹಾಕಿದರೆ, ಅಡಿಕೆಯು ಅಣಬೆ ರೋಗಕ್ಕೆ ತುತ್ತಾಗುತ್ತದೆ ಎಂಬ ಭಯವಿದೆ. ಅಣಬೆ ರೋಗ ಬರಲು ಕಾರಣ ಹಸಿ ಸಗಣಿ ಅಲ್ಲ. ಅತಿಯಾದ ತೇವಾಂಶ ಭರಿತ ಮಣ್ಣು ಹಾಗೂ ಕೊಳಕು ಪ್ರದೇಶದ ಕಾರಣ. ನಾವು ಈಗ ಹಸಿ ಸಗಣಿಯ ಬಗ್ಗೆ ತಿಳಿಯೋಣ.

ಇದನ್ನೂ ಓದಿ: Red Chilli Powder: ಯಾವುದೇ ಕಾರಣಕ್ಕೂ ಕೆಂಪು ಮೆಣಸಿನ ಪುಡಿಯನ್ನು ಈ ರೀತಿಯಾಗಿ ಅಡುಗೆಗೆ ಬಳಸಬೇಡಿ, ಎಚ್ಚರ!

ಹಸಿ ಸಗಣಿಯನ್ನು ನಾವು ಸಾಮನ್ಯವಾಗಿ ತಿಪ್ಪೆಗೆ ಹಾಕುತ್ತೇವೆ. ಆರೇಳು ತಿಂಗಳ ನಂತರ ಅದನ್ನು ತೋಟಕ್ಕೆ ಹಾಕುತ್ತೇವೆ. ನಾವು ಗೊಬ್ಬರವನ್ನು ಸರಿಯಾಗಿ ಮಾಡುತ್ತಿಲ್ಲ. ಅದರ ಸಾರ ಸಂಪೂರ್ಣವಾಗಿ ಆಳಾದ ಮೇಲೆ ನಾವು ತೋಟಕ್ಕೆ ಹಾಕುತ್ತಿದ್ದೇವೆ. ಗೊಬ್ಬರವನ್ನು ನಾವು ಹಾಕುವ ಹಾಗೆ ಮಣ್ಣಿನಲ್ಲಿ, ಬಿಸಿಲಿನಲ್ಲಿ ಗಾಳಿಯಲ್ಲಿ ತೆರದಿಟ್ಟರೆ, ಅದು ತನ್ನ ಸತ್ವವನ್ನು ಕಳೆದು ಕೇವಲ ಇಪ್ಪೆ ಉಳಿಯುತ್ತದೆ.

ಆ ಗೊಬ್ಬರವನ್ನು ನಾವು ಬಳಸಿ ಪ್ರಯೋಜನವಿಲ್ಲ. ತಿಪ್ಪೆಗೆ ಹಾಕುವ ಸಗಣಿ ಅದರ ಸಾರವು ಅಲ್ಲಿಯೇ ಕರಗಿ ಮಣ್ಣಿಗೆ ಸೇರುತ್ತದೆ. ಅಥವಾ ಮಳೆಗಾಲದಲ್ಲಿ ತಿಪ್ಪೆಯ ನೀರಿನ ಜೊತೆ ಸೇರಿ ಹೊರ ಹೋಗುತ್ತದೆ. ಕೆಲ ರೈತರು ಹೇಳುತ್ತಾರೆ. ನಾನು ವರ್ಷಕ್ಕೆ 3 ಬಾರಿ ಗೊಬ್ಬರ ಹಾಕಿದರು ಏನು ಪ್ರಯೋಜನವಾಗುತ್ತಿಲ್ಲ ಎಂದು. ಅದಕ್ಕೆ ಇದೆ ಕಾರಣ.

ಇನ್ನೂ ಅಡಿಕೆಗೆ ಹಸಿ ಸಗಣಿ ಹಾಕುವುದು ತುಂಬ ಒಳ್ಳೆಯದು. ಹಸಿ ಸಗಣಿ ಅಡಿಕೆ ಗಿಡದ ಬುಡಕ್ಕೆ ಹಾಕಬಾರದು. ಬುಡದಿಂದ 1 ಅಡಿ ಸ್ಥಳವನ್ನು ಬಿಟ್ಟು ಹಾಕುವುದು ಒಳ್ಳೆಯದು. ಇದಕ್ಕೆ ಎರಡು ಕಾರಣಗಳಿವೆ. ಒಂದು ಹಸಿ ಸಗಣಿಯನ್ನು ತುಂಬ ಇಟ್ ಅಥವಾ ಬಿಸಿಯಾಗಿರುತ್ತದೆ. ಅದು ಗಿಡಕ್ಕೆ ಹಾನಿಯುಂಟು ಮಾಡಬಹುದು. ಮತ್ತೊಂದು ಅಡಿಕೆ ಗಿಡಗಳಲ್ಲಿ ಎರಡು ರೀತಿಯ ಬೇರುಗಳಿರುತ್ತವೆ. ಒಂದು ಆಹಾರ ಬೇರೆ ಮತ್ತೊಂದು ಆಧಾರ ಬೇರು. ಆಹಾರ ಬೇರು ಗಿಡದ ಬುಡದಿಂದ 1 ಅಡಿ ದೂರದಲ್ಲಿ ಹರಡಿಕೊಂಡಿರುತ್ತದೆ. ಈ ಕಾರಣಕ್ಕಾಗಿ ನಾವು ಬುಡಕ್ಕೆ ಗೊಬ್ಬರ ನೀಡಿದರೆ ಪ್ರಯೋಜನವಿಲ್ಲ. ಸಾಧ್ಯವಾದಷ್ಟು ದೂರಕ್ಕೆ ಗೊಬ್ಬರ ನೀಡುವುದು ಉತ್ತಮ.

ಹೀಗೆ ಮಾಡುವುದರಿಂದ ಸಗಣಿಯ ಪೂರ್ತಿ ಸಾರಾಂಶ ಅಲ್ಲಿಯೇ ಭೂಮಿ ಸೇರುತ್ತದೆ. ಸಾಧ್ಯವಾದರೆ ಹಸಿ ಸಗಣಿ ಹಾಕಿದ ನಂತರ ಮಣ್ಣಿನಲ್ಲಿ ಮುಚ್ಚಿದರೆ ಬೇಗ ಕೊಳೆತು ಉತ್ತಮ ಗೊಬ್ಬರವಾಗುತ್ತದೆ. ಕೇವಲ 1 ತಿಂಗಳಲ್ಲೇ ಗಿಡದಲ್ಲಿ ಬದಲಾವಣೆಯನ್ನು ಕಾಣಬಹುದಾಗಿದೆ.

Leave A Reply

Your email address will not be published.