Murder Case: ಮದುವೆ ಮಾಡಿಲ್ಲ ಎಂದು ಕುಡಿತದ ನಶೆಯಲ್ಲಿ ಕಟ್ಟಿಗೆಯಿಂದ ಹೊಡೆದು ತಾಯಿಯ ಕೊಂದ ಪುತ್ರ!

Son Kills Mother: ತನಗೆ ಮದುವೆ ಮಾಡಿಸುತ್ತಿಲ್ಲ ಎಂಬ ಕಾರಣಕ್ಕೆ ತನ್ನ ಹೆತ್ತ ತಾಯಿಯನ್ನೇ ಕೊಂದ ಘಟನೆಯೊಂದು ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಪೂಚಾವರಂಬಲ್ಲಿ ನಡೆದಿದೆ.

ಅನಿಲ್‌ (25) ತನ್ನ ತಾಯಿಯನ್ನು ಕೊಂದಾತ. ತಾಯಿ ಶೋಭಾ (45) ಕೊಲೆಯಾದವರು. ಘಟನಾ ಸ್ಥಳಕ್ಕೆ ಕುಂಚಾವರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಲ್ಲದೆ, ಕೊಲೆ ಮಾಡಿದ ಅನಿಲ್‌ನನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: Karnataka government : ರಾಮ ಮಂದಿರಕ್ಕೆ ಸಿದ್ದರಾಮಯ್ಯ ಸರ್ಕಾರದಿಂದ 100 ಕೋಟಿ ಅನುದಾನ ?!

ಅನಿಲ್‌ ಕುಡಿತದ ದಾಸನಾಗಿದ್ದು, ಜೊತೆಗೆ ಸರಿಯಾಗಿ ಕೆಲಸ ಮಾಡದೆ ತಾಯಿಯ ಕೈಯಿಂದಲೇ ಹಣವನ್ನು ಕಿತ್ತುಕೊಂಡು ಹೋಗಿ ಸರಾಯಿ ಕುರಿಯುತ್ತಿದ್ದ. ಇದರ ನಡುವೆ ತನಗೆ ಮದುವೆ ಮಾಡು ಎಂದ ದಂಬಾಳು ಬಿದ್ದಿದ್ದ. ಈ ವಿಚಾರಕ್ಕೆ ಭಾನುವಾರ ತಾಯಿ ಮತ್ತು ಮಗನ ನಡುವೆ ಜಗಳವಾಗಿದೆ. ಸಿಟ್ಟಿನ ಭರದಲ್ಲಿ ಮಗ ಕುಡಿದ ನಶೆಯಲ್ಲಿ ತಾಯಿಗೆ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ.

Leave A Reply

Your email address will not be published.