Karnataka government : ರಾಮ ಮಂದಿರಕ್ಕೆ ಸಿದ್ದರಾಮಯ್ಯ ಸರ್ಕಾರದಿಂದ 100 ಕೋಟಿ ಅನುದಾನ ?!

Karnataka government: ರಾಜ್ಯದಲ್ಲಿನ ರಾಮ ಮಂದಿರಗಳ ಅಭಿವೃದ್ಧಿಗೆ ಬಜೆಟ್ನಲ್ಲಿ ನೂರು ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿರುವುದು ನಿಜ ಎಂದು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ(Ramalinga reddy) ಹೇಳಿದ್ದಾರೆ.

ಇದನ್ನೂ ಓದಿ: Dr K Sudhakar : ಚಿಕ್ಕಬಳ್ಳಾಪುರ ಲೋಕಸಭೆಯಿಂದ ಡಾ. ಸುಧಾಕರ್ ಕಣಕ್ಕಿಳಿಯೋದು ಫಿಕ್ಸ್- ಆದ್ರೆ ಸ್ಪರ್ಧೆ ಬಿಜೆಪಿಯಿಂದಲ್ಲ !!

ಹೌದು, ಧಾರ್ಮಿಕ ದತ್ತಿ ಇಲಾಖೆಯು, ರಾಜ್ಯದ 100 ರಾಮ ಮಂದಿರಗಳ ಜೀರ್ಣೋದ್ಧಾರಕ್ಕೆ ರಾಜ್ಯ ಬಜೆಟ್ನಲ್ಲಿ ಹಣಕ್ಕಾಗಿ ಪ್ರಸ್ತಾವನೆ ಸಲ್ಲಿಸಿದೆ. ರಾಜ್ಯದಲ್ಲಿನ 100 ಹಳೆಯ, ಪ್ರಸಿದ್ಧ ರಾಮ ಮಂದಿರಗಳ ಜೀರ್ಣೋದ್ಧಾರದ ಮೂಲಕ ಬಿಜೆಪಿಗೆ ತಿರುಗೇಟು ನೀಡಲು ಬಜೆಟ್ನಲ್ಲಿ ಹಣ ನೀಡುವಂತೆ ಧಾರ್ಮಿಕ ದತ್ತಿ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ. ಇದು 2024-25ನೇ ಸಾಲಿನ ರಾಜ್ಯದ ಬಜೆಟ್‌ನಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ. ಧಾರ್ಮಿಕ ದತ್ತಿ ಇಲಾಖೆಯ ಯೋಜನೆಗಳಲ್ಲಿ ಈ ಯೋಜನೆಯನ್ನು ಸೇರಿಸಲು ಚರ್ಚೆ ನಡೆಯುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ರಮಾಲಿಂಗರೆಡ್ಡಿಯವರು ರಾಮ ಎಲ್ಲರಿಗೂ ಸಲ್ಲುವ ದೇವರು, ಒಂದು ಪಕ್ಷದ ದೇವರಲ್ಲ. ರಾಮನ ದೇವಸ್ಥಾನವನ್ನೂ ನಿರ್ಮಾಣ ಮಾಡ್ತಿವಿ, ಈಶ್ವರನ ದೇವಸ್ಥಾನವನ್ನೂ ನಿರ್ಮಾಣ ಮಾಡ್ತೀವಿ. ಶ್ರೀರಾಮನನ್ನು ದೇಶದಲ್ಲಿ ಎಲ್ರೂ ಪೂಜಿಸುತ್ತಾರೆ. ರಾಮ ಬಿಜೆಪಿ ಅವ್ರಿಗೆ ಮಾತ್ರ ದೇವರಲ್ಲ ಎಲ್ಲರಿಗೂ ದೇವರು ಎಂದು ಹೇಳಿದ್ದಾರೆ.

Leave A Reply

Your email address will not be published.