Lifestyle: ಥ್ರೆಡಿಂಗ್ ಮಾಡಿಸಿಕೊಂಡರೆ ಎಚ್ಚರ!! ಈ ತಪ್ಪುಗಳನ್ನು ಮಾಡದಿರಿ!!
ಹಲವು ಮಂದಿ ಮಹಿಳೆಯರು ಮುಖದ ಮೇಲಿರುವ ಕೂದಲನ್ನು ನಿಗದಿತ ಸಮಯಕ್ಕೆ ತೆಗೆಸುತ್ತಾರೆ. ಆದರೆ ಹಾಗೆ ಮಾಡಿದ ನಂತರ ಮಹಿಳೆಯರು ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ. ಕನಿಷ್ಠ ಒಂದು ಗಂಟೆಗಳ ಕಾಲ ಈ ತಪ್ಪನ್ನು ಮಾಡಲೇಬಾರದು. ನೀವು ಈ ತಪ್ಪನ್ನು ಮಾಡುತ್ತಿದ್ದೀರಾ!! ತಪ್ಪುಗಳ ಬಗ್ಗೆ ನೋಡೋಣ.
ಇದನ್ನೂ ಓದಿ: New Delhi: ಪತಿ ಸ್ನಾನ ಮಾಡುವುದಿಲ್ಲ, ವಿಚ್ಛೇದನ ಕೊಡಿ ಎಂದ ಮಹಿಳೆ; ಕೋರ್ಟ್ ಕೊಟ್ಟ ವಿಶಿಷ್ಟ ತೀರ್ಪೇನು ಗೊತ್ತೇ?
ಮಾಡ್ರನ್ ಯುವತಿಯರು ಥ್ರೆಡಿಂಗ್ ಮಾಡಿಸಿಕೊಳ್ಳುತ್ತಾರೆ. ತಮ್ಮ ಮುಖದಲ್ಲಿ ಅನಗತ್ಯವಾಗಿ ಬೆಳೆದಿರುವ ಕೂದಲನ್ನು ತೆಗೆಸುವುದರಿಂದ ಹಿಡಿದು ಐಬ್ರೋ ಸಹ ಮಾಡಿಸಿಕೊಳ್ಳುತ್ತಾರೆ. ತಮ್ಮ ಮುಖವು ಆಕರ್ಷಕವಾಗಿ ಕಾಣಲು ಹೀಗೆ ಮಾಡುತ್ತಾರೆ.ಥ್ರೆಡಿಂಗ್ ಹೆಚ್ಚುವರಿ ಕೂದಲನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ನಿಮ್ಮ ಚರ್ಮವು ಬಹು ಸೂಕ್ಷ್ಮವಾಗಿದ್ದರೆ ಥ್ರೆಡಿಂಗ್ ಮಾಡಿಸಿಕೊಂಡ ನಂತರ ಆ ಜಾಗದಲ್ಲಿ ಕೆಂಪು ಬಣ್ಣದ ಗುಳ್ಳೆಗಳು ಅಥವಾ ದದ್ದುಗಳನ್ನು ವೀಕ್ಷಿಸಬಹುದಾಗಿದೆ. ಇಂಥ ಸಂದರ್ಭದಲ್ಲಿ ನಾವು ಕೆಲವೊಂದು ಕಾಳಜಿಯನ್ನು ವಹಿಸಬೇಕು.
ಮತ್ತೆ ಮತ್ತೆ ಮುಟ್ಟಬಾರದು.
ನಿಮ್ಮ ಕೈಯಿಂದ ಥ್ರೆಡಿಂಗ್ ಮಾಡಿಸಿಕೊಂಡಿರುವ ಸ್ಥಳವನ್ನು ಪುನಹ ಪುನಹ ಸ್ಪರ್ಶಿಸುವುದನ್ನು ಕಡಿಮೆ ಮಾಡಿ, ಏಕೆಂದರೆ ಆ ಸಮಯದಲ್ಲಿ ಚರ್ಮವು ಸೂಕ್ಷ್ಮವಾಗಿರುವುದರ ಜೊತೆಗೆ ಸಣ್ಣ ಸಣ್ಣ ರಂಧ್ರಗಳನ್ನು ತೆರೆದಿರುತ್ತದೆ. ನಿಮ್ಮ ಕೈ ಕೊಳಕಾಗಿದ್ದರೆ, ಈ ರೀತಿ ದದ್ದುಗಳಾಗುತ್ತದೆ. ಆದಷ್ಟು ಕಾಸ್ಮೆಟಿಕ್ ಉತ್ಪನ್ನಗಳನ್ನು ಬಳಸುವುದನ್ನು ತಪ್ಪಿಸಲು ಪ್ರಯತ್ನಿಸಿ.
ಬ್ಲೀಚ್ ಉತ್ಪನ್ನಗಳಿಂದ ದೂರವಿರಿ.
ಥ್ರೆಡಿಂಗ್ ಮಾಡಿಸಿದ ತಕ್ಷಣ ನೀವು ಯಾವುದೇ ಬ್ಲೀಚ್ ನಿಂದ ಮಾಡಿದ ಉತ್ಪನ್ನಗಳನ್ನು ಬಳಸಬಾರದು. ಇದರಿಂದ ತುರಿಕೆ ಅನುಭವವನ್ನು ಅನುಭವಿಸುತ್ತೀರಿ.ಥ್ರೆಡಿಂಗ್ ಮತ್ತು ಬ್ಲೀಚಿಂಗ್ ಪ್ರಕ್ರಿಯೆಯ ನಡುವೆ ಕನಿಷ್ಠ ಒಂದು ಗಂಟೆಯ ಅಂತರವನ್ನು ಕಾಪಾಡಿಕೊಳ್ಳಲು ಶಿಫಾರಸು ಮಾಡಲಾಗಿದೆ.
ಬಿಸಿಲಿನಲ್ಲಿ ಹೆಚ್ಚು ಸಮಯ ಕಳೆಯಬೇಡಿ
ಥ್ರೆಡ್ ಮಾಡಿದ ತಕ್ಷಣ ನೀವು ಹೆಚ್ಚಾಗಿ ಬಿಸಿಲಲ್ಲಿ ಹೋದರೆ ಸೂರ್ಯನ ಯುವಿ ಕಿರಣಗಳು ನಿಮ್ಮ ಚರ್ಮದೊಂದಿಗೆ ಪ್ರತಿಕ್ರಿಯೆ ನೀಡುತ್ತವೆ. ನಮ್ಮ ಚರ್ಮದಲ್ಲಿ ಕೆಂಪು ಮತ್ತು ಕಿರಿಕಿರಿಯಂತಹ ಸಮಸ್ಯೆಗಳನ್ನು ಉಂಟುಮಾಡುತ್ತವೆ.
ಥ್ರೆಡ್ ಮಾಡಿದ ತಕ್ಷಣ ಬಿಸಿಯಿಂದ ದೂರವಿರಬೇಕು ಏಕೆಂದರೆ ನಮ್ಮ ಚರ್ಮವು ಬಿರುಕು ಬಿಡುವ ಸಾಧ್ಯತೆ ಇರುತ್ತದೆ.ಥ್ರೆಡ್ ಮಾಡಿದ ನಂತರ ಹೀಟ್ ವೇಪರ್ ಫೇಶಿಯಲ್ ಮಾಡಿಕೊಳ್ಳಲು ನೀವು ಪ್ರಯತ್ನಿಸುತ್ತಿದ್ದರೆ ಒಂದೆರಡು ದಿನ ಸಮಯ ತೆಗೆದು ಕೊಂಡು ಮಾಡಿಕೊಳ್ಳಬಹುದು. ಬಿಸಿ ನೀರಿನ ಸ್ಟ್ರೀಮ್ ತೆಗೆದುಕೊಳ್ಳುವುದನ್ನು ತಡೆಯಿರಿ.
ಪರಿಮಳಯುಕ್ತ ಉತ್ಪನ್ನಗಳನ್ನು ಬಳಸದಿರಿ
ಥ್ರೆಡ್ ಮಾಡಿದ ನಂತರ ಕಣ್ಣಿನ ಸುತ್ತಲೂ ಚರ್ಮ ಒಣಗಿದ ಅನುಭವವಾಗುತ್ತದೆ. ಆಗ ನೀವು ಮಾಸ್ಚರೈಸ್ ಮಾಡಲು ಕ್ರೀಮ್ಗಳನ್ನು ಬಳಸುತ್ತೀರಿ, ಇದರಿಂದ ಮುಖವೆಲ್ಲ ಕೆಂಪಾಗುವ ಸಾಧ್ಯತೆ ಇರುತ್ತದೆ. ಕನಿಷ್ಠ ಒಂದು ದಿನವಾದರೂ ಯಾವುದೇ ಮಾಸ್ಚರೈಸ್ ಕ್ರೀಮ್ ಗಳನ್ನು ಬಳಸಬೇಡಿ. ನಿಮ್ಮ ಆಯ್ಕೆ ಮೇರೆಗೆ ಅಲೋವೆರಾ ಜೆಲ್ ಅನ್ನು ಮಾತ್ರ ಹಚ್ಚಬಹುದು.
ಬಿಸಿ ಬಿಸಿ ನೀರು ಬಳಸಬೇಡಿ
ಥ್ರೆಡಿಂಗ್ ಮಾಡಿದ ನಂತರ, ಬಿಸಿನೀರು ಉಗುರು ಬೆಚ್ಚಗಿನ ನೀರು ಬಿಸಿ ಹಬೆಯಿಂದ 1 ಗಂಟೆ ದೂರವಿರಿ. ಇದರಿಂದ ನಿಮ್ಮ ಮುಖ ಕೆಂಪಾಗುವುದು ತಪ್ಪುದರ ಜೊತೆಗೆ ಮತ್ತಷ್ಟು ಕಾಂತಿಭರಿತವಾಗುತ್ತದೆ.