Arecanut: ಅಡಿಕೆಯ ತಾಯಿ ಮರವನ್ನು ಆಯ್ಕೆ ಮಾಡುವುದು ತುಂಬ ಸುಲಭ!!

ಅಡಿಕೆ ಒಂದು ವಾಣಿಜ್ಯ ಬೆಳೆಯಾಗಿದೆ ನಮ್ಮ ಕರ್ನಾಟಕದ ಅನೇಕ ಸ್ಥಳಗಳು ಅಡಿಕೆ ಬೆಳೆಗೆ ಹೆಸರುವಾಸಿಯಾಗಿದೆ . ಒಂದು ಸಸ್ಯ ಸದೃಢವಾಗಿ ಉತ್ತಮವಾಗಿ ಇಳುವರಿ ನೀಡುವಂತೆ ಬೆಳೆಯಬೇಕಾದರೆ ಉತ್ತಮ ಬೀಜವನ್ನು ಆಯ್ಕೆ ಮಾಡಿರಬೇಕು. ಹಾಗೆ ಅಡಿಕೆಯ ಬಿತ್ತನೆ ಗೋಟುಗಳು ಅಥವಾ ಬೀಜದ ಗೋಟುಗಳ ಆಯ್ಕೆ ಬಹಳ ಮುಖ್ಯವಾದದ್ದು. ಬಹಳ ಎಚ್ಚರವಹಿಸಿ ಬೀಜದ ಗೋಟುಗಳನ್ನು ಆರಿಸಿಕೊಳ್ಳಬೇಕಾಗುತ್ತದೆ. ಹೇಗೆ ಮಾಡುವುದು ಎಂಬುದನ್ನು ನೋಡೋಣ.

ಕೆಲ ಗಿಡಗಳು ಫಸಲಿಗೆ ಬರುವಷ್ಟರಲ್ಲಿ ಇದ್ದಕ್ಕಿದ್ದಂತೆ ಒಣಗಿ ಹೋಗುತ್ತವೆ. ಕೆಲವು ಬೆಳವಣಿಗೆಯಾಗದೆ ಕುಂಠಿತಗೊಂಡಿರುತ್ತವೆ . ಎರಡು ಸಮಸ್ಯೆ ಬಾರದಿದ್ದರೆ ಗಿಡಗಳು ಉದ್ದವಾಗಿ ಬೆಳೆಯುತ್ತಾ ಫಸಲು ಬಿಡದೇ ನಿಂತುಕೊಳ್ಳುತ್ತವೆ. ಈ ಎಲ್ಲಾ ಸಮಸ್ಯೆಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಶೇಕಡ ತೊಂಬತ್ತರಷ್ಟು ಇದಕ್ಕೆ ಕಾರಣ ಬೀಜದ ಗೋಟುಗಳ ಆಯ್ಕೆಯ ಸಮಸ್ಯೆಯಿಂದ ಈ ರೀತಿ ಉಂಟಾಗುತ್ತದೆ.

ಸಾಮಾನ್ಯವಾಗಿ ಒಂದು ಅಡಿಕೆ ಗಿಡದ ಆರ್ಥಿಕ ವಯಸ್ಸು ಮೂವತ್ತು ವರ್ಷಗಳು. ನಾವು ಬೀಜದ ಗೋಟುಗಳನ್ನು ಆಯ್ಕೆ ಮಾಡುವಾಗ ಅಡಿಕೆ ಗಿಡಕ್ಕೆ ಕನಿಷ್ಠ ಅರ್ಧದಷ್ಟು ಎಂದರೆ 25 ವರ್ಷ ಮೇಲ್ಪಟ್ಟ ಗಿಡಗಳಲ್ಲಿ ಬೀಜದ ಗೋಟುಗಳನ್ನು ಆಯ್ಕೆ ಮಾಡಬೇಕಾಗುತ್ತದೆ.. 25 ವರ್ಷ ಮೇಲ್ಪಟ್ಟ ಮರಗಳಲ್ಲೇ ಗೋಟುಗಳನ್ನು ಆಯ್ಕೆ ಮಾಡಬೇಕು ಏಕೆ ? ಏಕೆಂದರೆ ಅಡಿಕೆಗೆ ಸಂತಾನ ಅಭಿವೃದ್ಧಿಗೆ ಯೋಗ್ಯವಾದ ಹಂತ ಬರುವುದು ಕನಿಷ್ಠ 20 ವರ್ಷದ ಮೇಲೆ ಈ ಕಾರಣದಿಂದ ಈ ಹಂತದಲ್ಲಿ ಬೀಜಗಳನ್ನು ಆಯ್ಕೆ ಮಾಡುವುದು ಸೂಕ್ತ. ಒಂದು ವೇಳೆ ಕಡಿಮೆ ವಯಸ್ಸಿನ ಗಿಡಗಳಲ್ಲಿ ಬೀಜದ ಗೋಟುಗಳನ್ನು ಹಾರಿಸಿದರೆ, ಅದರ ಮುಂದಿನ ಪೀಳಿಗೆ ಮಧ್ಯಮ ವಯಸ್ಸಿನಲ್ಲಿ ನಾಶವಾಗುತ್ತದೆ.

25 ವರ್ಷ ಮೇಲ್ಪಟ್ಟ ಗಿಡಗಳಲ್ಲಿ ಅಡಿಕೆಯ ಒಂದು ಗೋನೆ ಅಥವಾ ಕಂಕ್ಕಿಯಲ್ಲಿ ಕನಿಷ್ಠ 250ರಿಂದ 300 ಅಡಿಕೆ ಕಾಯಿಗಳು ಇರುವಂತಹ ಮರಗಳು ಬೀಜದ ಗೋಟಿಗೆ ಯೋಗ್ಯವಾಗಿರುತ್ತವೆ . ಜೊತೆಗೆ ಕಂಕ್ಕಿಯಲ್ಲಿ ಕಡಿಮೆ ನಾರಿನ ಗೊಂಚಲು, ಮತ್ತು ಕಂಕ್ಕಿಗಳು ಉದ್ದವಾಗಿ ದೀರ್ಘವಾಗಿ ಚಾಚಿಕೊಂಡಿರಬೇಕು . ಕಂಕ್ಕಿಯ ಬುಡದಿಂದ ತುದಿಯವರೆಗೂ ಅಡಿಕೆ ಕಾಯಿ ಕಚ್ಚಿರಬೇಕು. ಇಂಥಹ ಮರಗಳನ್ನು ಆಯ್ಕೆ ಮಾಡಬೇಕಾಗುತ್ತದೆ.

ನವೆಂಬರ್-ಡಿಸೆಂಬರ್ ತಿಂಗಳಿಗೆ ನಮಗೆ ಬೀಜದ ಗೋಟುಗಳು ದೊರೆಯುತ್ತವೆ. ಅಡಿಕೆ ಮರದ ಮೊದಲ ಕಂಕ್ಕಿಯಿಂದ ಮತ್ತು ಕೊನೆಯ ಕಂಕ್ಕಿ ಇಂದ ಬೀಜದ ಗೋಟುಗಳನ್ನು ತೆಗೆದು ಕೊಳ್ಳಬಾರದು. ಉಳಿದ ಕಂಕ್ಕಿಗಳಿಂದ ಗೋಟುಗಳನ್ನು ಆರಿಸುವುದು ಸೂಕ್ತ, ಏಕೆಂದರೆ ಮೊದಲ ಮತ್ತು ಕೊನೆಯ ಕಂಕ್ಕಿಯಲ್ಲಿ ಕೂಳೆ ಕಾಯಿಗಳು ಅಥವಾ ನಾಟಿಗೆ ಯೋಗ್ಯವಲ್ಲದ ಕಾಯಿಗಳು ಇರುವುದರಿಂದ ಇವು ಸೂಕ್ತವಲ್ಲ. ಇಲ್ಲಿ ಮುಖ್ಯವಾಗಿ ನೆನಪಿಡಬೇಕಾದ ಅಂಶ ವೆಂದರೆ, ಬೀಜದ ಗೋಟು ಗಳನ್ನು ಕೇಳುವ ಮುನ್ನ ಗೋಟುಗಳು ಗಾಡ ಹಳದಿ ಬಣ್ಣದಿಂದ ಕೂಡಿದ್ದು, ಮರದಿಂದ ಉದುರುತ್ತಿರುವ ಬೇಕು. ಆಗ ಅವು ಬಿತ್ತನೆಗೆ ತಯಾರಿದೆ ಎಂದು ಅರ್ಥ. ಬೀಜದ ಗೋಟಿನ ಕಟಾವಿನ ನಂತರ ಅವುಗಳನ್ನು ಬೇರ್ಪಡಿಸಬೇಕಾಗುತ್ತದೆ. ಒಂದು ಅಡಿಕೆ ಗಿಡ ದಲ್ಲಿ ಮೂರರಿಂದ 4 ತರಹದ ಅಡಿಕೆ ಕಾಯಿಗಳ ದೊರೆಯುತ್ತದೆ. ಗುಂಡಗಿರುವ ಕಾಯಿ, ಕೋಲು ಕಾಯಿ, ಮಾಣ ಗಾಯಿ, ಕಾಯಿ ಗಳಿರುತ್ತವೆ. ಇದರಲ್ಲಿ ಗುಂಡಗಿನ , ಸಿಪ್ಪೆ ತೆಳುವಿರುವ, ಸಾಮಾನ್ಯ ಗಾತ್ರದ ಅಡಿಕೆಯನ್ನು ಬೀಜದ ಗೋಟನ್ನಾಗಿ ಆರಿಸಿಕೊಳ್ಳಬೇಕಾಗುತ್ತದೆ.

ಕನಿಷ್ಟ ಒಂದು ಮರದಿಂದ ಒಟ್ಟಾರೆ 400 ರಿಂದ 500 ಬೀಜದ ಗೋಟುಗಳು ದೊರೆಯುತ್ತವೆ. ಈ ರೀತಿ ಆರಿಸಿಕೊಂಡ ಗೋಟುಗಳನ್ನು ಎರಡರಿಂದ ಮೂರು ದಿನ ನೆರಳಿನಲ್ಲಿ ನೆಲದ ಮೇಲೆ ಒಣಗಿಸಬೇಕು. ನಂತರ ಬೀಜದ ಅಡಿಕೆ ಗೋಟುಗಳು ನಾಟಿ ಮಾಡಲು ಯೋಗ್ಯವಾಗಿರುತ್ತದೆ.

Leave A Reply

Your email address will not be published.