Soil Fertility: ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಇಲ್ಲಿದೆ ಸುಲಭ ಮಾರ್ಗ; 200 ರೂ. ಖರ್ಚು ಮಾಡಿದರೆ ಸಾಕು!

ರೈತನ ಆಧಾರವೇ ಕೃಷಿ. ಕೃಷಿ ಇಲ್ಲದೆ ಅವನ ಬದುಕು ಸಾಗುವುದಿಲ್ಲ. ಯಾವುದೇ ಬೇಸಾಯಕ್ಕೆ ನೀರು, ಉತ್ತಮ ಹವಾಗುಣ, ಮಣ್ಣು ,ಈ ಮೂರು ಅಂಶಗಳು ಬಹಳ ಮುಖ್ಯವಾದವು.ಮಣ್ಣಿನ ಗುಣಧರ್ಮ ಬಹಳ ಮುಖ್ಯವಾಗಿದೆ. ಮಣ್ಣಿನ ಗುಣಧರ್ಮ ಎಂದರೆ ಅದರ ಸಾರ, ಸತ್ವ ,ಪೋಷಕಾಂಶ ,ಪ್ರೋಟೀನ್, ಜೈವಿಕ ವರ್ಧಕಗಳು, ಎನ್ನಬಹುದು. ಹಲವು ರೈತರ ಪ್ರಶ್ನೆಯೇನೆಂದರೆ. ಈ ಅಂಶಗಳು ನಮ್ಮ ಮಣ್ಣಿನಲ್ಲಿ ಇದೆಯೇ? ಅಥವಾ ಇವುಗಳನ್ನು ಹೆಚ್ಚು ಮಾಡುವುದು ಹೇಗೆ ? ಎಂಬ ಪ್ರಶ್ನೆಗಳು ಸ್ಥಳೀಯ ರೈತರಲ್ಲಿ ಸಹಜವಾಗಿ ಮೂಡುತ್ತದೆ.

ಇದನ್ನೂ ಓದಿ: Poonam Pandey: ಪೂನಂ‌ ಪಾಂಡೆ ಫ್ಯಾಮಿಲಿ ನಾಪತ್ತೆ: ಪ್ರಚಾರಕ್ಕಾಗಿ ಸಾವಿನ ನಾಟಕವಾಡಿದ್ರಾ ನಟಿ!?

ನಮ್ಮ ರೈತ ಬಾಂಧವರಲ್ಲಿ ಒಂದು ತಪ್ಪು ಕಲ್ಪನೆ ಬೇರೂರಿಬಿಟ್ಟಿದೆ. ಏನೆಂದರೆ ಗೊಬ್ಬರವನ್ನು ಸಸ್ಯಕ್ಕೆ ಕೊಡುತ್ತಿದ್ದೇವೆ ಎನ್ನುವುದು. ತಿಳಿಯಬೇಕಾದ ವಿಷಯ ಏನೆಂದರೆ ನಾವು ನೀಡಿದ ಯಾವುದೇ ಗೊಬ್ಬರವನ್ನು ಸಸ್ಯ ನೇರವಾಗಿ ಹೀರಿಕೊಳ್ಳುವುದಿಲ್ಲ. ಬದಲಾಗಿ ಮೊದಲು ಅದನ್ನು ಮಣ್ಣು ಹೀರಿಕೊಂಡು ನಂತರ ಮಣ್ಣಿನ ಮುಖಾಂತರ ಅದರ ಸತ್ವವನ್ನು ಸಸ್ಯಗಳು ಬಯಸುತ್ತವೆ. ಈ ಕಾರಣದಿಂದ ನಾವು ಮಣ್ಣಿಗೆ ಮೊದಲು ಆಹಾರ ನೀಡಬೇಕು. ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವುದು. ಮಣ್ಣನ್ನು ಮೃದುತ್ವ ಮಾಡುವುದು. ಇವೆಲ್ಲ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಇದಕ್ಕೆ ಸೂಕ್ತವಾಗಿ ಸಾವಯವ ಪದ್ಧತಿಯ ಮೂಲಕ ಜೀವಮೃತ ಎಂಬ ಒಂದು ಸಾವಯವ ದ್ರವ್ಯ ಬಳಸಿ ಎಲ್ಲಾ ಸಮಸ್ಯೆಗೆ ಪರಿಹಾರ. ಕಂಡುಕೊಳ್ಳಬಹುದು.

ಜೀವಮೃತ ತಯಾರಿಸುವುದು ಹೇಗೆ? ಎಂಬುದನ್ನು ನೋಡೋಣ.

ಜೀವಮೃತ ಸಾವಯವ ಕೃಷಿ ಪದ್ಧತಿಯ ಮೂಲಕ ತಯಾರಿಸಬಹುದಾದ ಒಂದು ಪೋಷಕಾಂಶಗಳ ದ್ರವ್ಯ. ಇದನ್ನು ತಯಾರಿಸಲು ಮೊದಲಿಗೆ 200 ಲೀಟರ್ ನೀರಿನ ಸಂಗ್ರಹ ಸಾಮರ್ಥ್ಯವನ್ನು ಹೊಂದಿರುವ ಪ್ಲಾಸ್ಟಿಕ್ ಬ್ಯಾರೆಲ್ ಅಥವಾ ನೀರಿನ ತಟ್ಟಿಯಾದರು ಆಗಬಹುದು. ನಂತರ 10 ಕೆಜಿ ನಾಟಿ ಹಸುವಿನ ಸಗಣಿಯನ್ನು ಬ್ಯಾರೆಲ್ ನಲ್ಲಿ ನೀರಿನೊಂದಿಗೆ ಚೆನ್ನಾಗಿ ಕಲಕಬೇಕು. ರೈತರಲ್ಲಿ ಒಂದು ಪ್ರಶ್ನೆ ಮೂಡಬಹುದು ಯಾಕೆ ? ನಾಟಿಯ ಹಸುವಿನ ಸಗಣಿಯನ್ನೆ ಬಳಸಬೇಕು?

ನಿಮ್ಮ ಪ್ರಶ್ನೆಗೆ ಉತ್ತರ, ನಮ್ಮಲ್ಲಿ ಎರಡು ರೀತಿಯ ಹಸುವಿನ ತಳಿಗಳಿವೆ. ಒಂದು ಬಸ್ತಾರ್ಸ್ ಮತ್ತು ಬಾಸ್ ಇಂಡಿಕಾಸ್ (ಜಬೂ ತಳಿ) ಜಬೂ ತಳಿಯ ಹಸು ಭಾರತವನ್ನು ಒಳಗೊಂಡು ಏಷ್ಯಾದ ಕೆಲವು ಭಾಗಗಳಲ್ಲಿ ವಾಸಿಸುತ್ತದೆ. ಸಾಮಾನ್ಯವಾಗಿ ಈ ಬಗೆಯ ಹಸುಗಳಿಗೆ ಭುಜ, ಗದ್ದ ವಟ್ಟಿಗೆ ,ಕೊಂಬು ,ಜೊತೆಗೆ ಸೂರ್ಯನಾಡಿ ಎಂಬ ಇದರ ಬೆನ್ನಲ್ಲಿ ಇರುತ್ತದೆ. ಈ ನರವು ಸೂರ್ಯನ ಬೆಳಕಿಗೆ ರಾಸಾಯನಿಕವನ್ನು ಉತ್ಪಾದಿಸಿ ಹಾಲು ಮತ್ತು ಗಂಜಲದ ಮೂಲಕ ಹೊರಹಾಕುತ್ತದೆ.

ಇದರಲ್ಲಿ ಔಷಧೀಯ ಗುಣ ಹೊಂದಿರುವುದರಿಂದ ಇದು ಸೂಕ್ತವೆನಿಸಿದೆ. ನಂತರ 20 ಲೀಟರ್ ಗಂಜಲವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ತದನಂತರ 2ಕೆಜಿ ಕರಿ ಬೆಲ್ಲವನ್ನು ಚೆನ್ನಾಗಿ ಪುಡಿಮಾಡಿ ಬಳಸುವುದು ಸೂಕ್ತ. ಕರಿ ಬೆಲ್ಲದಲ್ಲಿ ಯಾವುದೇ ರಾಸಾಯನಿಕಗಳ ಮಿಶ್ರಣ ಇಲ್ಲದಿರುವುದರಿಂದ ಇದು ಸೂಕ್ತವಾಗಿರುತ್ತದೆ. 2ಕೆಜಿ ಕಡಲೆ ಹಿಟ್ಟನ್ನು ನೀರಿನಲ್ಲಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಜೊತೆಗೆ ಒಂದು ಬೊಗಸೆ ನಮ್ಮ ಭೂಮಿಯ ಮಣ್ಣನ್ನು ಅದರಲ್ಲಿ ಸೇರಿಸಬೇಕು. ದ್ವಿದಳ ಧಾನ್ಯದ ಪುಡಿ ಅಂದರೆ ಸೋಯಾಬಿನ್ ಮತ್ತು ಶೇಂಗಾ ಎರಡರಲ್ಲಿ ಎಣ್ಣೆ ಅಂಶ ಹೊಂದಿರುವುದರಿಂದ ಇವೆರಡನ್ನು ಹೊರತುಪಡಿಸಿ ಮಿಕ್ಕೆಲ್ಲ ದ್ವಿದಳ ಧಾನ್ಯಗಳ ಪುಡಿಯನ್ನು ಬಳಸಬಹುದು.

 

ಮಿಶ್ರಣ ಮಾಡುವಾಗ ಎಡದಿಂದ ಬಲಕ್ಕೆ ಮರದ ಕೋಲಿನಿಂದ ತಿರುಗಿಸಬೇಕು. ಕಾರಣ ಅದರಲ್ಲಿರುವ ಸೂಕ್ಷ್ಮಜೀವಿಗಳಿಗೆ ತೊಂದರೆ ಆಗದಿರಲಿ ಎಂಬ ಕಾರಣಕ್ಕಾಗಿ. ದಿನಕ್ಕೆ 3 ಬಾರಿ ಮಿಶ್ರಣ ಮಾಡಬೇಕು. ನಂತರ ಗೋಣಿಚೀಲ ಬಳಸಿ ಮುಚ್ಚಳವನ್ನು ಮುಚ್ಚಬೇಕು.ಮೂರರಿಂದ ನಾಲ್ಕು ದಿನಗಳಲ್ಲಿ ಜೀವಮೃತ ತಯಾರಾಗುತ್ತದೆ. 7 ದಿನಗಳವರೆಗೆ ಇದರ ಬಳಕೆ ಮಾಡಬಹುದು. ಇದರಲ್ಲಿ ಇರುವಂತಹ ಸೂಕ್ಷ್ಮಣು ಜೀವಿಗಳು ಮತ್ತು ಜೈವಿಕ ವರ್ಧಕಗಳ ಸಂಖ್ಯೆ ದ್ವಿಗುಣಗೊಳ್ಳುತ್ತದೆ.

 

ಇದರಿಂದ ಮಣ್ಣಿನ ಪಿಎಚ್ ಮೌಲ್ಯ ಅಧಿಕವಾಗಲು ಸಹಾಯವಾಗುತ್ತದೆ. ಪಿಎಚ್ ಮೌಲ್ಯ ಅಧಿಕವಾದರೆ ಮಣ್ಣು ನಿರರ್ಗಳವಾಗಿ ತನ್ನಲ್ಲಿ ಎಲ್ಲಾ ಅಂಶಗಳನ್ನು ಹೀರಿಕೊಳ್ಳುತ್ತದೆ. ಸಸ್ಯವು ಮಣ್ಣಿಂದ ಪೋಷಕಾಂಶಗಳನ್ನು ಇರುತ್ತಾ ಸದೃಢವಾಗಿ ಬೆಳೆಯಲು ಸಹಾಯವಾಗುತ್ತದೆ. ಇದನ್ನು ತಿಂಗಳಿಗೊಮ್ಮೆ ಬಳಸುವುದು ಸೂಕ್ತ. 15 ದಿನಗಳಿಗೊಮ್ಮೆ ಬಳಸುವುದು ಇನ್ನು ಸೂಕ್ತ. ಸುಮಾರು ಒಂದು ನಾಟಿ ಹಸುವಿನಿಂದ 30 ಎಕರೆ ಜಮೀನಿಗೆ ಜೀವಾಮೃತವನ್ನು ನೀಡಬಹುದು.

 

ಈ ವಿಧಾನವು ಬಹಳ ಯಶಸ್ವಿಯಾಗಿ ಇರುವಂತಹದ್ದು. ಮತ್ತು ನಮ್ಮ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವಲ್ಲಿ ಸಹಾಯಕವಾಗುತ್ತದೆ ಇದನ್ನು ಬಳಸುವುದರಿಂದ ಯಾವುದೇ ರಾಸಾಯನಿಕ ಗೊಬ್ಬರಗಳನ್ನು ಬಳಸುವಂತಿಲ್ಲ. ಕಡಿಮೆ ಕರ್ಚು ಇದ್ದರೆ ಸಾಕು ಈ ವಿಧಾನವನ್ನು ಬಳಸಬಹುದು. ಎಲ್ಲಾ ಬೆಳೆಗಳಿಗೂ ಬಳಸಬಹುದು. ರೈತರು ಇದರ ಬಗ್ಗೆ ಸ್ವಲ್ಪ ಯೋಚಿಸುವುದು ಸೂಕ್ತ.

Leave A Reply

Your email address will not be published.