Poonam Pandey: ಪೂನಂ‌ ಪಾಂಡೆ ಫ್ಯಾಮಿಲಿ ನಾಪತ್ತೆ: ಪ್ರಚಾರಕ್ಕಾಗಿ ಸಾವಿನ ನಾಟಕವಾಡಿದ್ರಾ ನಟಿ!?

Poonam Pandey: ಪೂನಂ ಪಾಂಡೆ ಸಾವಿನ ಸತ್ಯಾಸತ್ಯತೆ ತಿಳಿಯೋ ಕುತೂಹಲ ಈಗ ಎಲ್ಲೆಡೆ ನಡಿತಿದೆ. ಕೆಲವರು ಇದೊಂದು ಪ್ರಚಾರದ ಗಿಮಿಕ್ ಎಂದು ಹೇಳುತ್ತಿದ್ದಾರೆ. ಆದರೆ ಪೂನಂ ಪಾಂಡೆ ಸಾವಿನ ಬಗ್ಗೆ ಆಕೆಯ ಕುಟುಂಬದವರಿಂದ ಅಧಿಕೃತ ಮಾಹಿತಿ ಸಿಕ್ಕಿಲ್ಲ.

ಇದನ್ನೂ ಓದಿ: Zodiac Sign: ಈ ರಾಶಿಯವರಿಗೆ ಈ ವರ್ಷ ಸರ್ಕಾರಿ ನೌಕರಿ ಸಿಗುವ ಸಾಧ್ಯತೆ ಯಿದೆ! ಯಾರಿಗಪ್ಪ ಈ ಲಕ್?

ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಗರ್ಭಕಂಠದ ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈ ಬಗ್ಗೆ ಪೂನಂ ಕುಟುಂಬದಿಂದ ಯಾವುದೇ ಹೇಳಿಕೆ ಬಂದಿಲ್ಲ.

 

ಚಲನಚಿತ್ರ ವಿಮರ್ಶಕ ಉಮೈರ್ ಸಂಧು ತಮ್ಮ ಟ್ವೀಟ್ ಮೂಲಕ, ಪೂನಂ ಬದುಕಿದ್ದಾಳೆ ಮತ್ತು ಆಕೆಯ ಸಾವಿನ ಸುದ್ದಿಯನ್ನು ಆಕೆಯೇ ಆನಂದಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಪೂನಂ ಪಾಂಡೆ ಅವರ ಸೋದರ ಸಂಬಂಧಿ ಜೊತೆ ನಾನು ಮಾತನಾಡಿದ್ದೇನೆ. ಇದು ಪೂನಂ ಅವರ ಪಬ್ಲಿಸಿಟಿ ಸ್ಟಂಟ್. ಆಕೆ ಸತ್ತಿಲ್ಲ ಎಂದು ಉಮೈರ್ ತಮ್ಮ ಟ್ವೀಟ್‌ನಲ್ಲಿ ಹೇಳಿದ್ದಾರೆ.

Leave A Reply

Your email address will not be published.