15 PFI ಸದಸ್ಯರಿಗೆ ಮರಣದಂಡನೆ ವಿಧಿಸಿದ ಜಡ್ಜ್‌ಗೆ ಕೊಲೆ ಬೆದರಿಕೆ!!

PFI ಇಸ್ಲಾಂ ಮೂಲಭೂತವಾದಿ ಸಂಘಟನೆಯನ್ನು UAPA ಕಾಯ್ದೆ ಅಡಿ ಕೇಂದ್ರ ಸರಕಾರ ನಿಷೇಧಿಸಿದೆ. ಇದೀಗ ಕೇರಳದ ಬಿಜೆಪಿ ನಾಯಕ ರಂಜಿತ್‌ ಶ್ರೀನಿವಾಸನ್‌ ಅವರನ್ನು ಕುಟುಂಬ ಸದಸ್ಯರ ಮುಂದೆ ಹತ್ಯೆಗೈದ ಪಿಎಫ್‌ಐ ಸದಸ್ಯರಿಗೆ ಮರಣದಂಡನೆಯನ್ನು ವಿಧಿಸಲಾಗಿದೆ. ಈ ತೀರ್ಪು ನೀಡಿದ ಆಲಫುಝಾ ಜಿಲ್ಲಾ ನ್ಯಾಯಾಲಯ ನ್ಯಾಯಮೂರ್ತಿ ಶ್ರೀದೇವಿ ಅವರಿಗೆ ಕೊಲೆ ಬೆದರಿಕೆ ಹಾಕಲಾಗಿರುವ ಕುರಿತು ವರದಿಯಾಗಿದೆ.

ಸಾಮಾಜಿಕ ಮಾಧ್ಯಮಗಳ ಮೂಲಕ ಜಡ್ಜ್‌ಗೆ ಕೊಲೆ ಬೆದರಿಕೆ ಹಾಕಿರುವುದಾಗಿ ವರದಿಯಾಗಿದೆ. ಈ ಬೆದರಿಕೆ ಬಂದ ಬೆನ್ನಲೇ ಇದೀಗ ಕೇರಳ ಪೊಲೀಸರು ಜಡ್ಜ್‌ ಶ್ರೀದೇವಿ ಅವರ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಮನೆ ಹಾಗೂ ಕೋರ್ಟ್ ಆವರಣದಲ್ಲೂ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

ಇದನ್ನೂ ಓದಿ: China News: ಚೀನಾದಲ್ಲಿ ಸಂಚಲನ ಸೃಷ್ಟಿಸಿದ ಕೇಸ್‌; ಮಕ್ಕಳನ್ನು ಮಹಡಿಯಿಂದ ಎಸೆದು ಹತ್ಯೆ ಮಾಡಿದ ಜೋಡಿ; ನ್ಯಾಯಾಲಯದಿಂದ ಜೋಡಿಗೆ ಮರಣದಂಡನೆ!!!!

ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ(ಪಿಎಫ್‌ಐ) ಮತ್ತು ಎಸ್‌ಡಿಪಿಐ ಸಂಘಟನೆಗಳ 15 ಸದಸ್ಯರು ಡಿ.19, 2021ರಂದು ರಂಜಿತ್‌ ಶ್ರೀನಿವಾಸನ್‌ ಅವರ ಮನೆಗೆ ಮಾರಕಾಸ್ತ್ರಗಳೊಂದಿಗೆ ನುಗ್ಗಿ ಅವರ ಕುಟುಂಬದ ಎದುರಿನಲ್ಲೇ ಬರ್ಬರವಾಗಿ ಹತ್ಯೆಗೈದಿದ್ದರು. ಈ ಕುರಿತು 15 ಮಂದಿಗೆ ಮರಣದಂಡನೆ ವಿಧಿಸಲಾಗಿದೆ ಎಂದು ತೀರ್ಪು ಪ್ರಕಟಿಸಿದ್ದಾರೆ ನ್ಯಾ. ಶ್ರೀದೇವಿ.

Leave A Reply

Your email address will not be published.