China News: ಚೀನಾದಲ್ಲಿ ಸಂಚಲನ ಸೃಷ್ಟಿಸಿದ ಕೇಸ್‌; ಮಕ್ಕಳನ್ನು ಮಹಡಿಯಿಂದ ಎಸೆದು ಹತ್ಯೆ ಮಾಡಿದ ಜೋಡಿ; ನ್ಯಾಯಾಲಯದಿಂದ ಜೋಡಿಗೆ ಮರಣದಂಡನೆ!!!!

ತಾನು ಹೆತ್ತು ಹೊತ್ತು ಸಾಕಿದ ಇಬ್ಬರು ಪುಟ್ಟಮಕ್ಕಳನ್ನು ತಂದೆಯೋರ್ವ ಅಪಾರ್ಟ್‌ಮೆಂಟ್‌ನ 15ನೇ ಮಹಡಿಯಿಂದ ಎಸೆದು ಹತ್ಯೆ ಮಾಡಿರುವ ಹೃದಯವಿದ್ರಾವಕ ಘಟನೆಯೊಂದು ನಡೆದಿತ್ತು. ಈ ಕುರಿತು ರಾಷ್ಟ್ರವ್ಯಾಪಿ ಆಕ್ರೋಶ ಹುಟ್ಟು ಹಾಕಿದ್ದ ಪ್ರಕರಣದಲ್ಲಿ ಇದೀಗ ತಂದೆ ಮತ್ತು ಆತನ ಪ್ರೇಯಸಿಗೆ ಅಲ್ಲಿನ ಸರ್ವೋಚ್ಛ ನ್ಯಾಯಾಲಯ ಮರಣದಂಡನೆ ವಿಧಿಸಿ ತೀರ್ಪು ನೀಡಿದೆ.

ಘಟನೆ ವಿವರ:
2020 ರಲ್ಲಿ ನೈಋತ್ಯ ಚೀನಾದ ಚಾಂಗ್‌ಕಿಂಗ್‌ನಲ್ಲಿ ಈ ಘಟನೆ ನಡೆದಿದ್ದು, ಅಪಾರ್ಟ್‌ಮೆಂಟ್‌ನ ಹದಿನೈದನೇ ಮಹಡಿಯಿಂದ ಬಿದ್ದು ಎರಡು ವರ್ಷದ ಬಾಲಕಿ ಮತ್ತು ಒಂದು ವರ್ಷದ ಮಗು ಮೃತ ಹೊಂದಿದ್ದರು. ಮೊದ ಮೊದಲಿಗೆ ಇದು ಆಕಸ್ಮಿಕ ಸಾವು ಎಂದು ಕಂಡು ಬಂದರೂ, ತನಿಖೆಯ ನಂತರ ಇದೊಂದು ವ್ಯವಸ್ಥಿತ ಕೊಲೆ ಪ್ರಕರಣ ಎಂದು ತಿಳಿಯಿತು.

ಇದನ್ನೂ ಓದಿ: C T Ravi: ಇಡೀ ದೇಶದಲ್ಲೇ ಕಾಂಗ್ರೆಸ್ ಗೆಲ್ಲೋ ಲೋಕಸಭಾ ಸ್ಥಾನಗಳು ಇಷ್ಟೆಯಂತೆ !!

ಮಕ್ಕಳ ತಾಯಿ ಚೆನ್‌ ಮೈಲಿನ್‌ ನ್ಯಾಯಾಲಯದಲ್ಲಿ ಪರಿಹಾರವನ್ನು ಕೋರುವುದರ ಜೊತೆಗೆ ತನ್ನ ಮಾಜಿ ಪತಿ ಮತ್ತು ಅವನ ಗೆಳತಿಗೆ ಕಠಿಣ ಶಿಕ್ಷೆ ವಿಧಿಸುವಂತೆ 2021 ರಲ್ಲಿ ಒತ್ತಾಯ ಮಾಡಿದ್ದರು.

ನರಹತ್ಯೆಯು ಉದ್ದೇಶಪೂರ್ವಕವಾಗಿ ನಡೆದಿದ್ದು, 2021 ರ ಡಿ.28 ರಂದು ಚಾಂಗ್‌ಕಿಂಗ್‌ನಲ್ಲಿರುವ ನ್ಯಾಯಾಲಯವು ಜಾಂಗ್‌ ಮತ್ತು ಯೆ ಗೆ ಮರಣದಂಡನೆಯನ್ನು ವಿಧಿಸಿತ್ತು. ಈ ಕುರಿತು ಜಾಂಗ್‌ ಮತ್ತು ಯೆ ಚೆಂಗ್ವೆನ್‌ ಮೇಲ್ಮನವಿ ಕೂಡಾ ಮಾಡಿದ್ದರು.

ಕಳೆದ ವರ್ಷ ಎಪ್ರಿಲ್‌ 6 ರಂದು ನಡೆದ ಎರಡನೇ ವಿಚಾರಣೆಯಲ್ಲಿ ಜಾಂಗ್‌ ತನ್ನ ಮಕ್ಕಳ ಸಾವು ಅಪಘಾತದಿಂದ ಸಂಭವಿಸಿದ ಕುರಿತು ನೀಡಿದ ದೂರನ್ನು ಹಿಂಪಡೆದುಕೊಂಡಿದ್ದು, ನಂತರ ತನಿಖೆಯ ಆಧಾರದ ಮೇಲೆ ಮಕ್ಕಳ ತಂದೆ ಝಾಂಗ್‌ ಬೋ ಹಾಗೂ ಆತನ ಗೆಳತಿ ಯೆ ಚೆಂಗ್ವೆನ್‌ ಪ್ರಕರಣದ ಅಪರಾಧಿಗಳೆಂದು ಚೀನಾದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಪೀಪಲ್ಸ್‌ ಮರಣದಂಡನೆಯನ್ನು ವಿಧಿಸಿದೆ.

2 Comments
  1. […] ಇದನ್ನೂ ಓದಿ: China News: ಚೀನಾದಲ್ಲಿ ಸಂಚಲನ ಸೃಷ್ಟಿಸಿದ ಕೇಸ್‌;… […]

  2. […] ಇದನ್ನೂ ಓದಿ: 15 PFI ಸದಸ್ಯರಿಗೆ ಮರಣದಂಡನೆ ವಿಧಿಸಿದ ಜಡ್ಜ್‌… […]

Leave A Reply

Your email address will not be published.