Gyanavapi mosque: ಮಸೀದಿಯೊಳಗೆ ಪ್ರತಿದಿನ 5 ಬಾರಿ ಹಿಂದೂ ದೇವರ ಪೂಜೆ!!!

 

ವಾರಣಾಸಿ: ಐತಿಹಾಸಿಕವಾಗಿ 31 ವರ್ಷಗಳ ತರುವಾಯ ಜ್ಞಾನವ್ಯಾಪಿ ಮಸೀದಿಯ ಒಳಗಡೆ ಇರುವ ಹಿಂದೂ ದೇವರ ಮೂರ್ತಿಗೆ ಪೂಜೆ ಸಲ್ಲಿಸಲು ನ್ಯಾಯಾಲಯವು ಅವಕಾಶವನ್ನು ಕಲ್ಪಿಸಿದೆ ಕೊಟ್ಟಿದೆ. ಪೂಜೆಯು ನಡೆದಿದ್ದು ದಿನಕ್ಕೆ 5 ಬಾರಿ ಪೂಜೆ ನಡೆಯುವುದು ವಿಶೇಷವಾದುದು. ಆರತಿ ಬೆಳಗಿ, ಗಂಟೆ ಶಬ್ದ, ಶಂಖನಾದದ ಮೂಲಕ ಪೂಜೆ ನೆರವೇರಿಸಲಾಗುತ್ತದೆ. ಹಾಗಾದರೆ ಪ್ರತಿ ದಿನ ಯಾವ ಯಾವ ಸಮಯದಲ್ಲಿ ಪೂಜೆಯನ್ನು ನಡೆಸಲಾಗುತ್ತದೆ ಎಂದು ತಿಳಿಯುತ್ತ ಹೋಗೋಣ.

ಇದನ್ನೂ ಓದಿ: CBSE 9 ನೇ ತರಗತಿಯ ಪಠ್ಯದಲ್ಲಿ ಡೇಟಿಂಗ್ ಪಾಠ!!!

ಕಾಶಿ ವಿಶ್ವನಾಥನ ಪಕ್ಕದಲ್ಲಿರುವ ಜ್ಞಾನವ್ಯಾಪಿ ಮಸೀದಿಯಲ್ಲಿ ದೇವರ ಪೂಜಾ ಕಾರ್ಯಕ್ರಮ ಆರಂಭವಾಗಿದೆ. ಮೂರು ದಶಕಗಳ ನಂತರ ಮಸೀದಿಯ ನೆಲಮಹಡಿಯಲ್ಲಿರುವ ‘ವ್ಯಾಸ್‌ ಕೆ ಠಿಖಾನಾ’ದಲ್ಲಿನ ಶೃಂಗಾರ ಗೌರಿ ವಿಗ್ರಹಗಳಿಗೆ ಪೂಜೆಯನ್ನು ಮಾಡುಲಾಗುತ್ತಿದೆ . ಇಂದು ಕಾಶಿ ವಿಶ್ವನಾಥ ಟ್ರಸ್ಟ್ ಹಾಗೂ ಇದರ ಜೊತೆಗೆ ಕೆಳ ಕುಟುಂಬಗಳು ಇಂದು ಪೂಜೆಯನ್ನು ಸಲ್ಲಿಸಿದರು. ಮುಖ್ಯ ಆಕರ್ಷಣೆ ಎಂದರೇ ಪ್ರತಿ ದಿನ 5 ಬಾರಿ ಪೂಜೆ ನಡೆಸಲಾಗುತ್ತದೆ.

ಈ ಬಗ್ಗೆ ಹಿಂದೂ ಪರ ವಕೀಲ ವಿಷ್ಣುಶಂಕರ್ ಜೈನ್ ಕೆಲ ಆಸಕ್ತಿಕರವಾದ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಜ್ಞಾನ ವ್ಯಾಪಿ ಮಸೀದಿಯಲ್ಲಿ ಹಿಂದುಗಳು ಪೂಜೆ ಮಾಡುವಂತೆ ನ್ಯಾಯಾಲಯ ಅನುಮತಿ ನೀಡಿದೆ. ಶಸ್ತ್ರೋಪ್ತವಾಗಿ ದಿನಕ್ಕೆ ಇದು ಬಾರಿ ಪೂಜೆ ನಡೆಯುತ್ತಿದ್ದು, ಮುಂಜಾನೆ 3.30 ಕ್ಕೆ ಮಂಗಳಾರತಿ, ಮಧ್ಯಾಹ್ನ 12 ಗಂಟೆಗೆ ಭೋಗ ಆರತಿ,ಸಂಜೆ 4 ಗಂಟೆಗೆ ಅಪರಾಹ್ನ ಆರತಿ, ಸಂಜೆ 7 ಗಂಟೆಗೆ ಸಾಂಯಕಾಲ ಆರತಿ ಹಾಗೂ ರಾತ್ರಿ 10.30ಕ್ಕೆ ಶಯನ ಆರತಿ ಯನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ಹಿಂದೂ ಪೂಜಾ ಪದ್ಧತಿಯಲ್ಲಿ ಗಂಟೆ ತುಂಬ ಮುಖ್ಯ.. ಈ ಅದು ಜ್ಞಾನ ವ್ಯಾಪಿ ಮಸೀದಿಯಲ್ಲಿ ಮೊಳಗುತ್ತದೆ . ಅಲ್ಲಿನ ದೇವರುಗಳಿಗೆ ಪೂಜೆಸಲ್ಲಿಸುತ್ತಿರುವ ವ್ಯಾಸ ಕುಟಂಬದ ಅರ್ಚಕ ಜಿತೇಂದ್ರ ನಾಥ ವ್ಯಾಸ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. ನ್ಯಾಯಾಲಯ ನೀಡಿದ ಅನುಮತಿಯಿಂದ ಮಹದೇವನನ್ನು ಪೂಜಿಸುವ ಅವಕಾಶ ದೊರೆತಿದೆ ಎಂದು ದೇವಸ್ತಾನದ ಅರ್ಚಕ ಜಿತೇಂದ್ರ ನಾಥ ವ್ಯಾಸ ಹೇಳುತ್ತಾರೆ.

ವಾರಣಾಸಿಯ ನ್ಯಾಯಾಲಯ ಪೂಜೆಯ ಅನುಮತಿ ಕೊಟ್ಟಿದ್ದರಿಂದ ಮಸೀದಿಯ ಅಂಜುಮ್‌ ಇನ್ತೆಜಾಮಿಯಾ ಮಸೀದಿ ಸಮಿತಿಯ ಕೆರಳಿ ಕೆಂಡವಾಗಿತ್ತು. ಕೂಡಲೇ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿಯನ್ನು ಸಲ್ಲಿಸಿ ಹಿಂದುಗಳು ಪೂಜೆ ಸಲ್ಲಿಸುವುದನ್ನು ನಿಲ್ಲಿಸಬೇಕು. ಈ ಇಂದೆ ಇದಂತೆ ಇರಬೇಕು ಎಂದು ಅರ್ಜಿ ಸಲ್ಲಿಸಿತ್ತು. ಆದರೆ ಇದೀಗ ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿ ಹೈ ಕೋರ್ಟ್ ಗೆ ಹೋಗುವಂತೆ ಹೇಳಿದೆ.

Leave A Reply

Your email address will not be published.