Income tax: ಹಳೆಯ ಮತ್ತು ಹೊಸ ತೆರಿಗೆಯಲ್ಲಿ ನೌಕರರಿಗೆ ಯಾವುದು ಲಾಭ?

 

2023 ರ ಬಜೆಟ್ ನಲ್ಲಿ ತೆರಿಗೆಗೆ ಸಂಬಂಧಿಸಿದಂತೆ ಹಳೆಯ ಮತ್ತು ಹೊಸ ತೆರಿಗೆ ಪದ್ಧತಿಯ ಬಗ್ಗೆ ತೆರಿಗೆದಾರರಲ್ಲಿ ಬಹಳಷ್ಟು ಗೊಂದಲಗಳಿವೆ. ಆ ಎರಡು ಆಡಳಿತದ ಬಗ್ಗೆ ತಿಳಿಯುತ್ತ ಹೋಗೋಣ.

ಕಳೆದ ಬಜೆಟ್ ನಲ್ಲಿ ಹೊಸ ಮತ್ತು ಹಳೆಯ ತೆರಿಗೆ ಪದ್ಧತಿಗೆ ಹಲವಾರು ಬದಲಾವಣೆಗಳನ್ನು ಸರ್ಕಾರವು ಘೋಷಣೆ ಮಾಡಿತ್ತು. ಬಹಳಷ್ಟು ಮಂದಿಗೆ ಈ ಎರಡು ಪದ್ಧತಿಗಳ ಬಗ್ಗೆ ಬಹಳಷ್ಟು ಅನುಮಾನಗಳು ಪ್ರಶ್ನೆಗಳು ಇವೆ. ನಾವಿಲ್ಲಿ ಈ ಎರಡು ಬಗೆಗೂ ಹಂತ ಹಂತವಾಗಿ ತಿಳಿಯೋಣ.

ಇದನ್ನೂ ಓದಿ: Gyanavapi mosque: ಮಸೀದಿಯೊಳಗೆ ಪ್ರತಿದಿನ 5 ಬಾರಿ ಹಿಂದೂ ದೇವರ ಪೂಜೆ!!!

ಹೊಸ ಮಾದರಿಯ ತೆರಿಗೆಯ ಪದ್ಧತಿಯನ್ನು 2020 ರ ಬಜೆಟ್ ನಲ್ಲಿ ಪರಿಚಯಿಸಲಾಯಿತು. ಈ ಮೂಲಕ ತೆರಿಗೆಯ ಸ್ಲ್ಯಾಬ್ ಗಳನ್ನು ಬದಲಾಯಿಸಲಾಯಿತು. ತೆರಿಗೆದಾರರಿಗೆ ರಿಯಾಯಿತಿ ದರದಲ್ಲಿ ತೆರಿಗೆಯನ್ನು ಕಟ್ಟಲು ಹೇಳಲಾಯಿತು.

ಆದರೆ ಹೊಸ ತೆರಿಗೆ ಪದ್ಧತಿಯನ್ನು ಆರಿಸಿಕೊಳ್ಳುವ ತೆರಿಗೆದಾರರು HRA, LTA, 80C, 80D ಮತ್ತು ಹೆಚ್ಚಿನವುಗಳಲ್ಲಿ ಹಲವಾರು ವಿನಾಯಿತಿಗಳು ಮತ್ತು ಕಡಿತಗಳನ್ನು ಪಡೆಯಲು ಸಾಧ್ಯವಿಲ್ಲ. ಈ ಮೇಲಿನ ಕ್ರಮದಿಂದಾಗಿ ಕಡಿಮೆ ಸಂಖ್ಯೆಯ ತೆರಿಗೆದಾರರು ಈ ಆಡಳಿತವನ್ನು ಆಯ್ಕೆ ಮಾಡಲು ಮುಖ್ಯ ಕಾರಣ.

ಈ ಕಾರಣದಿಂದ 2023 ರೆ ಬಜೆಟ್ ನಲ್ಲಿ ಹೊಸ ತೆರಿಗೆ ಪದ್ಧತಿಯನ್ನು ಹೆಚ್ಚು ಲಾಭದಾಯಕವಾಗಿಸಲು ಹಾಗೂ ತೆರಿಗೆದಾರರು ಉತ್ತೇಜಿಸಲು ಸರ್ಕಾರವು ಈ ಬದಲಾವಣೆಯನ್ನು ಮಾಡುತ್ತಿದೆ.

ಕಳೆದ ವರ್ಷ ಸರ್ಕಾರ ಪರಿಚಯಿಸಿದ ಬದಲಾವಣೆಗಳು ಹೀಗಿವೆ.

ಹೆಚ್ಚಿನ ತೆರಿಗೆ ರಿಯಾಯಿತಿ ಮಿತಿ: 

ಕಳೆದ ಬಜೆಟ್ ನಲ್ಲಿ 7 ಲಕ್ಷದ ವರೆಗಿನ ಆದಾಯದ ಮೇಲೆ ಸಂಪೂರ್ಣ ತೆರಿಗೆ ರಿಯಾಯಿತಿಯನ್ನು ನೀಡಿತ್ತು.

ಈ ಮೊದಲ ತೆರಿಗೆ ಪದ್ಧತಿಯಲ್ಲಿ ಈ ನಿಯಮವು 5 ಲಕ್ಷಕ್ಕೆ ಇತ್ತು. ಆದರೆ ನಂತರದ ಬದಲಾವಣೆಯಲ್ಲಿ 7 ಲಕ್ಷ ಆದಾಯ ಹೊಂದಿರುವವರು ಹೊಸ ನೀತಿಯ ಪ್ರಕಾರ ಯಾವುದೇ ತೆರಿಗೆ ಪಾವತಿಸುವಂತ್ತಿಲ್ಲ ಎಂದು ಸೂಚನೆ ನೀಡಿತು.

ತೆರಿಗೆ ದರ:  

ಹಣಕಾಸು ವರ್ಷ 23 ಹಾಗೂ 24 ರಿಂದ ಹೊಸ ತೆರಿಗೆ ಪದ್ಧತಿಯ ಮೂಲ ವಿನಾಯಿತಿಯನ್ನು 2.5 ಲಕ್ಷದಿಂದ 3 ಲಕ್ಷಕ್ಕೆ ಏರಿಸಲಾಗಿದೆ. 15 ಲಕ್ಷ ಆದಾಯಕ್ಕಿಂತ ಹೆಚ್ಚಿನ ತೆರಿಗೆಗೆ 30% ವಿಧಿಸಲಾಗಿದೆ.

ಹೊಸ ತೆರಿಗೆ ಸ್ಲ್ಯಾಬ್‌ಗಳು ಈ ಕೆಳಕಂಡಂತಿವೆ.

3,00,000 ವರೆಗೆ – ಶೂನ್ಯ

3,00,001-6,00,000 – 5%

6,00,001-9,00,000 – 10%

9,00,001-12,00,000 – 15%

12,00,001-15,00,000 – 20%

15,00,001 ಕ್ಕಿಂತ ಹೆಚ್ಚು – 30%

ಹಳೆಯ ತೆರಿಗೆ ಪದ್ಧತಿ

ಮೊದಲು ಹಳೆಯ ಪದ್ಧತಿಯೇ ಜಾರಿಯಲ್ಲಿತ್ತು.ಅದರ ಅಡಿಯಲ್ಲಿ HRA ಮತ್ತು LTA ಸೇರಿದಂತೆ 70 ಕ್ಕೂ ಹೆಚ್ಚು ವಿನಾಯಿತಿಗಳು ಮತ್ತು ಕಡಿತಗಳು ಲಭ್ಯವಿದ್ದವು.

ಸೆಕ್ಷನ್ 80 c ಅತ್ಯಂತ ಜನಪ್ರಿಯ ಮತ್ತು ಉದಾರವಾದ ಕಡತವಾಗಿದೆ. ಇದು ಆದಾಯವನ್ನು ಸುಮಾರು 1.5 ಲಕ್ಷಕ್ಕೆ ಇಳಿಸಲು ಅನುಮತಿಸಿದೆ.

ಹಳೆಯ ಮತ್ತು ಹೊಸ ತೆರಿಗೆ.. ಯಾವುದು ಉತ್ತಮ?

ಈ ಎರಡರ ನಡುವಿನ ವ್ಯತ್ಯಾಸವು ವಯಕ್ತಿಕ ಆಯ್ಕೆ ಮತ್ತು ಹಣಕಾಸಿನ ಗುರಿಗಳ ಮೇಲೆ ನಿಂತಿದೆ. ನೀವು ತೆರಿಗೆ ಮತ್ತು ಹೂಡಿಕೆಗಳನ್ನು ಉಳಿಸುವ ವೆಚ್ಚವನ್ನು ಹೊಂದಿದ್ದರೆ ಹಳೆ ಪದ್ಧತಿ ನಿಮಗೆ ಸಹಾಯವಾಗುತ್ತದೆ. ನೀವು ಸರಳತೆಗೆ ಆದ್ಯತೆ ನೀಡಿ ತೆರಿಗೆ ಮತ್ತು ಹೂಡಿಕೆಗಳನ್ನು ಉಳಿಸುವ ವೆಚ್ಚವನ್ನು ಹೊಂದಿಲ್ಲದಿದ್ದರೆ ಹೊಸ ತೆರಿಗೆ ಆಡಳಿತದ ಒಳ್ಳೆಯದು.

ಆದಾಗ್ಯೂ,ಒಮ್ಮೆ ನೀವು ಒಂದು ವರ್ಷದವರೆಗೆ ಹೊಸ ತೆರಿಗೆ ಪದ್ಧತಿಯನ್ನು ಆರಿಸಿಕೊಂಡರೆ, ಹಳೆಯ ತೆರಿಗೆ ಪದ್ಧತಿಯಲ್ಲಿ ಲಭ್ಯವಿರುವ ಯಾವುದೇ ತೆರಿಗೆ ಪ್ರಯೋಜನಗಳನ್ನು ನೀವು ಕ್ಲೈಮ್ ಮಾಡಲಾಗುವುದಿಲ್ಲ.

 

.

Leave A Reply

Your email address will not be published.