Cleaning Tips: ಮನೆಯಲ್ಲಿ ಹಲ್ಲಿಗಳ ಕಾಟ ಜಾಸ್ತಿ ಆಗಿದ್ಯಾ? ಡೋನ್ಟ್ ವರಿ, ಈ ಟ್ರಿಕ್ಸ್ ಫಾಲೋ ಮಾಡಿ ಸಾಕು

ಹಲ್ಲಿ ಕಾಟ ಹೆಚ್ಚಾಗ್ತ ಇದ್ಯ? ಡೋ0ಟ್ ವರೀ, ಇಲ್ಲಿದೆ ಟಿಪ್ಸ್.

1) ಈರುಳ್ಳಿ : ನಾವು ಒಂದಲ್ಲ ಒಂದು ಅಡಿಗೆ ಮಾಡಬೇಕು ಅಂದ್ರೆ ಈರುಳ್ಳಿ ಕಡ್ಡಾಯವಾಗಿ ಇರಲೇಬೇಕು.. ಅಡುಗೆಮನೆಯ ಸದಸ್ಯನಾಗಿರುವ ಈರುಳ್ಳಿ, ಹಲವು ಸಮಸ್ಯೆಗಳ ನಿವಾರಕ ಕೂಡ.. ಹಲ್ಲಿಗಳ ಕಾಟದಿಂದ ಮುಕ್ತಿ ಪಡೆಯಲು ಈರುಳ್ಳಿ ಕೂಡ ಸಹಾಯಕವಾಗಿದೆ. ಈರುಳ್ಳಿಯ ಸಣ್ಣ ತುಂಡುಗಳನ್ನು ಕತ್ತರಿಸಿ ಅದನ್ನು ದಾರದಲ್ಲಿ ಕಟ್ಟಿ, ಎಲ್ಲೆಲ್ಲಿ ಹಲ್ಲಿಗಳು ಓಡಾಡುತ್ತವೋ ಆಯಾ ಜಾಗದಲ್ಲಿ ನೇತು ಹಾಕಿದ್ರೆ ಹಲ್ಲಿ ಆ ಕಡೆ ತಲೆ ಕೂಡ ಹಾಕುವುದಿಲ್ಲ..

ಇದನ್ನು ಓದಿ: Poonam pandey: ಆ ಒಂದು ಮ್ಯಾಟರ್ ನಿಂದ ರಾತ್ರೋ ರಾತ್ರಿ ಫೇಮಸ್ ಆಗಿದ್ಲು ಪೂನಂ ಪಾಂಡೆ !!

2) ಬೆಳ್ಳುಳ್ಳಿ : ಈರುಳ್ಳಿಯಂತೆ ಸದಾ ಅಡುಗೆ ಮನೆಯಲ್ಲಿ ಸಿಗುವ ಬೆಳ್ಳುಳ್ಳಿ ಕೂಡ ಹಲ್ಲಿಗಳನ್ನು ಓಡಿಸಲು ಸಹಾಯಕಾರಿಯಾಗಿದೆ. ಬೆಳ್ಳುಳ್ಳಿ ಎಸಳುಗಳನ್ನು ದಾರದಲ್ಲಿ ಕಟ್ಟಿ ಹಲ್ಲಿ ಓಡಾಡುವ ಜಾಗದಲ್ಲಿ ಇರಿಸುವುದರಿಂದ, ಪಲ್ಲಿಗಳ ಕಾಟದಿಂದ ಮುಕ್ತಿ ಪಡೆಯಬಹುದು.

ಕಾಫಿ ಪೌಡರ್ : ಕಾಫಿ ಪೌಡರನ್ನು ಟೊಬಾಕೊ ಪೌಡರ್‌ ಜೊತೆ ಮಿಕ್ಸ್‌ ಮಾಡಿ. ಈ ಮಿಶ್ರಣದ ಸಣ್ಣ ಬಾಲ್‌ಗಳನ್ನು ತಯಾರಿಸಿ. ಟೂಥ್‌ಪಿಕ್‌ ತೆಗೆದುಕೊಂಡು ಆ ಬಾಲ್‌ಗಳನ್ನು ಅದಕ್ಕೆ ಫಿಕ್ಸ್‌ ಮಾಡಿ. ಈ ಟೂಥ್‌ಪಿಕ್‌ಗಳನ್ನು ಹಲ್ಲಿ ಬರುವ ಜಾಗದಲ್ಲಿ ಇಟ್ಟುಬಿಡಿ. ಇದನ್ನು ಸೇವಿಸಿದರೆ ಹಲ್ಲಿಗಳು ಸಾಯುತ್ತದೆ.

4)ಕೋಲ್ಡ್‌ ವಾಟರ್‌ : ಯೆಸ್‌ ಕೋಲ್ಡ್‌ ವಾಟರ್‌ ಮೂಲಕವೂ ನೀವು ಹಲ್ಲಿಯನ್ನು ಓಡಿಸಬಹುದು. ಕೋಲ್ಡ್‌ ನೀರನ್ನು ಹಲ್ಲಿಗಳ ಮೇಲೆ ಸಿಂಪಡಿಸಿ. ಇದರಿಂದ ಅವುಗಳ ಬಾಡಿ ಟೆಂಪ್ರೇಚರ್‌ ಕಡಿಮೆಯಾಗಿ ಅದಕ್ಕೆ ಚಲಿಸಲು ಸಹ ಕಷ್ಟವಾಗುತ್ತದೆ. ಈ ಸಂದರ್ಭದಲ್ಲಿ ಅದನ್ನು ಒಂದು ಬಾಕ್ಸ್‌ನಲ್ಲಿ ಹಾಕಿ ಬಿಸಾಕಿ ಬಿಡಬಹುದು .

ಕೆಂಪು ಮೆಣಸಿನಕಾಯಿ ಮತ್ತು ಕರಿಮೆಣಸು : ಈರುಳ್ಳಿ ಹಾಗೂ ಬೆಳ್ಳುಳ್ಳಿ ಯಂತೆ ಅಡುಗೆ ಮನೆಯಲ್ಲಿ ಸಿಗುವ ಕೆಂಪು ಮೆಣಸಿನಕಾಯಿ ಮತ್ತು ಕರಿಮೆಣಸಿನ ಸಹಾಯದಿಂದ ಸ್ಪ್ರೇ ತಯಾರು ಮಾಡಿಕೊಂಡು ಅದನ್ನ ಬಾಟಲಿಯಲ್ಲಿ ಹಾಕಿ ಕಿಟಕಿ ಬಾಗಿಲು ಸಿರಿ ಸದಾ ಅಲೆಗಳು ಓಡಾಡುವ ಜಾಗದಲ್ಲಿ ಸ್ಪ್ರೇ ಮಾಡುವುದರಿಂದ ಹಲ್ಲಿಗಳು ಮನೆಯಿಂದ ಓಡಿ ಹೋಗಲಿವೆ.

6) ಮೊಟ್ಟೆ ಸಿಪ್ಪೆ : ಹಲ್ಲಿಗಳಿಗೆ ಸೈಕಾಲಜಿಯಾಗಿ ಮೋಸ ಮಾಡಲು ಮೊಟ್ಟೆ ಸಿಪ್ಪೆಗಳು ಸಹಾಯಕವಾಗಿದೆ. ಈ ಮೊಟ್ಟೆ ಸಿಪ್ಪೆಗಳನ್ನು ನೋಡಿ ಅಲ್ಲಿ ಬೇರೆ ಯಾವುದೋ ದೊಡ್ಡ ಜೀವಿ ಇದೆ ಎಂದು ಭಾವಿಸಿ ಹಲ್ಲಿಗಳು ಅಲ್ಲಿಂದ ಬೇರೆಡೆ ಹೋಗುತ್ತದೆ.

Leave A Reply

Your email address will not be published.