Poonam pandey: ಆ ಒಂದು ಮ್ಯಾಟರ್ ನಿಂದ ರಾತ್ರೋ ರಾತ್ರಿ ಫೇಮಸ್ ಆಗಿದ್ಲು ಪೂನಂ ಪಾಂಡೆ !!

Poonam pandey: ಇಂದು ಬಾಲಿವುಡ್ ಲೋಕಕ್ಕೊ ದೊಡ್ಡ ಆಘಾತ ಎದುರಾಗಿದ್ದು, ನಟಿ ಪೂನಂ ಪಾಂಡೆ (Poonam Pandey) ವಿಧಿವಶರಾಗಿದ್ದಾರೆ. ಗರ್ಭಕಂಠ ಕ್ಯಾನ್ಸರ್‌ನಿಂದಾಗಿ ಪೂನಂ 32ನೇ ವಯಸ್ಸಿಗೆ ನಿಧನರಾಗಿದ್ದು, ಅಭಿಮಾನಿಗಳಿಗೆ ಶಾಕ್‌ ಕೊಟ್ಟಿದೆ. ಈ ಬೆನ್ನಲ್ಲೇ ಪೂನಂ ಕುರಿತು ಕೆಲವು ವಿಚಾರಗಳು ಕೂಡ ಹೊರಬರುತ್ತಿದ್ದು, ಆಕೆ ದೇಶಕ್ಕೆ ಪರಿಚಿತವಾದದ್ದೇ ಒಂದು ವಿಚಿತ್ರ ಸನ್ನಿವೇಶದಿಂದ.

ಇದನ್ನೂ ಓದಿ: Ayodhya rama mandir: ಬರೀ 11 ದಿನದಲ್ಲಿ ಅಯೋಧ್ಯೆ ರಾಮ ಮಂದಿರದಲ್ಲಿ ಸಂಗ್ರವಹಾದ ಕಾಣಿಕೆ ಎಷ್ಟು ಗೊತ್ತಾ?! ಇದನ್ನು ನೀವು ನಂಬಲೂ ಸಾಧ್ಯವಿಲ್ಲ

ಹೌದು, 2012ರ ಮೊದಲು ಈ ಪೂನಂ ಪಾಂಡೆ ಎಂದರೆ ಯಾರಿಗೂ ಗೊತ್ತಿರಲಿಲ್ಲ. ಆದರೆ 2012ರಲ್ಲಿ ಆ ಒಂದು ಕಾರಣಕ್ಕೆ ಪೂನಂ ಇಡೀ ಭಾರತಕ್ಕೆ ಮಾತ್ರಲವ್ಲ, ಇಡೀ ವಿಶ್ವಕ್ಕೆ ಪರಿಚಯವಾಗಿದ್ದಳು. ಅದೂ ಕೂಡ ಒಂದೇ ಒಂದು ಚಾಲೆಂಜ್ ನಿಂದ ಒಂದೇ ರಾತ್ರಿಯಲ್ಲಿ ಫೇಮಸ್ ಆಗಿದ್ದಳು.

 

ಏನದು ಚಾಲೆಂಜ್?

ವಿಶ್ವಕಪ್ ಕ್ರಿಕೆಟ್(world cup)ನಲ್ಲಿ ಭಾರತ ಗೆದ್ದರೆ ಇಡೀ ಕ್ರೀಡಾಂಗಣದ ಮುಂದೆ ತಾನು ಬಟ್ಟೆ ಬರೆ ಇಲ್ಲದೆ ಬೆತ್ತಲೆ ಓಡಾಡುತ್ತೇನೆ ಎಂದು ಚಾಲೆಂಜ್ ಹಾಕಿದ್ದರು. 2012 ರಲ್ಲಿ ಅವರು ಭಾರತ ಗೆದ್ದರೆ ಬೆತ್ತಲೆ ಆಗ್ತೀನಿ ಎಂದಿದ್ದು, ಅವರ ರಾತ್ರೋರಾತ್ರಿ ಫೇಮಸ್ ಆಗಿದ್ದರು. ಇದರ ನಂತರವೇ ಪೂನಂಪಾಂಡೆ ಖ್ಯಾತಿ ಗಳಿಸಿದ್ದರು. ಸಿನಿಮಾಗಳಲ್ಲಿ ಅಂತಹ ಯಶಸ್ಸು ಸಿಗದೇ ಇದ್ದರೂ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫೋಟೋಗಳ ಮೂಲಕ ಹಲ್ ಚಲ್ ಎಬ್ಬಿಸಿದ್ದ ಈಕೆ ಕೆಲವು ವಿವಾದಗಳ ಮೂಲಕ ಕಿಚ್ಚು ಹಚ್ಚಿದ್ದಳು.

 

ಇನ್ನು ಪೂನಂ ಪಾಂಡೆ 2013 ರ ‘ನಶಾ’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ‘ಲವ್ ಈಸ್ ಪಾಯಿಸನ್’ ಹೆಸರಿನ ಕನ್ನಡ ಸಿನಿಮಾದಲ್ಲಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದರು. ಅಷ್ಟು ಮಾತ್ರವಲ್ಲದೆ ತೆಲುಗು, ಬೋಜ್ಪುರಿ ಚಿತ್ರಗಳಲ್ಲೂ ಪೂನಂ ನಟಿಸಿದ್ದಾರೆ. ಅವರು ಕೊನೆಯ ಬಾರಿಗೆ ‘ಲಾಕ್ ಅಪ್’ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡರು.

Leave A Reply

Your email address will not be published.