BJP MLA: ರಸ್ತೆ ಅಗಲೀಕರಣಕ್ಕೆ ತನ್ನ ಐಶಾರಾಮಿ ಮನೆಯನ್ನೇ ಕೆಡವಿದ ಬಿಜೆಪಿ ಶಾಸಕ!!

 

BJP MLA: ತೆಲಂಗಾಣದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಕೆಸಿಆರ್(KCR) ಪಕ್ಷಗಳ ಮುಖ್ಯಮಂತ್ರಿಗಳಿಗೆ ಭಾರೀ ರುಚಿಮುಟ್ಟಿಸಿ ಗೆದ್ದು ಬೀಗಿದ ಬಿಜೆಪಿ ಶಾಸಕ(BJP MLA) ವೆಂಕಟರಮಣ ರೆಡ್ಡಿ(Venkata ramana reddy) ಇದೀಗ ದೇಶದ ಎಲ್ಲಾ ರಾಜಕೀಯ ನಾಯಕರಿಗೆ ಮಾದರಿಯಾಗುವ ಕೆಲಸ ಮಾಡಿದ್ದಾರೆ.

ಹೌದು, ತೆಲಂಗಾಣದ ಏಕೈಕ ಬಿಜೆಪಿ ಶಾಸಕರಾದ ವೆಂಕಟರಮಣ ರೆಡ್ಡಿ ಇದೀಗ ಮತ್ತೊಮ್ಮೆ ಸುದ್ದಿಯಾಗುತ್ತಿದ್ದು ಕ್ಷೇತ್ರದ ರಸ್ತೆ ವಿಸ್ತರಣೆಗಾಗಿ ತಮ್ಮ ಸ್ವಂತ ಮನೆಯನ್ನು ಕೆಡವಲು ಅನುಮತಿ ನೀಡಿದ್ದಾರೆ. ತಮಗೆ ಅಧಿಕಾರವಿದ್ದರೆ ಎಲ್ಲವನ್ನೂ ಕೊಂಡುಕೊಳ್ಳಬಹುದು ಎಂದು ಭಾವಿಸುವ ಈ ಹೊತ್ತಿನಲ್ಲಿ ರಸ್ತೆ ಅಗಲೀಕರಣಕ್ಕಾಗಿ ತಮ್ಮ ಮನೆಯನ್ನೇ ಕೆಡವಿದ ರಮಣರೆಡ್ಡಿ ಕೆಲಸಕ್ಕೆ ಜನರು ಸಂತಸ ವ್ಯಕ್ತಪಡಿಸಿದ್ದಾರೆ.

ಇಷ್ಟೇ ಅಲ್ಲದೆ ಶಾಸಕರ ಭವನದಿಂದ ಹಳೇ ಬಸ್ ನಿಲ್ದಾಣದವರೆಗಿನ ರಸ್ತೆ ಅಗಲಕ್ಕೆ ಅಡ್ಡಿಯಾಗಿರುವ ಕಟ್ಟಡಗಳಿಗೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ರಸ್ತೆ ಅಗಲೀಕರಣಕ್ಕೆ ಇರುವ ಅಡೆತಡೆಗಳಲ್ಲಿ ಸರ್ಕಾರಿ ಸಲಹೆಗಾರ ಶಬ್ಬೀರ್ ಅಲಿ ಅವರ ನಿವಾಸವೂ ಸೇರಿದೆ. ಎರಡು ಚಿತ್ರಮಂದಿರಗಳೂ ಇವೆ. ಶಾಸಕರೇ ತಮ್ಮ ಮನೆಯನ್ನು ಕೆಡವಲು ಅನುಮತಿ ನೀಡಿರುವುದರಿಂದ ಇದೀಗ ಎಲ್ಲರೂ ಅನುಮತಿ ನೀಡಲೇಬೇಕಿದೆ.

ಅಂದಹಾಗೆ ಈ ವೆಂಕಟರಮಣ ರೆಡ್ಡಿ ಅವರು ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಸಿಎಂ ಅಭ್ಯರ್ಥಿಗಳಾದ ಕೆಸಿಆರ್ ಮತ್ತು ರೇವಂತ್ ರೆಡ್ಡಿ ಅವರನ್ನು ಸೋಲಿಸಿ ಸಂಚಲನ ಮೂಡಿಸಿದ್ದರು. ಇವರು ಕೆಸಿಆರ್‌ ಅವರಿಗಿಂತ 6,741 ಅಧಿಕ ಮತಗಳನ್ನು ಪಡೆಯುವ ಮೂಲಕ ಗೆಲುವಿನ ನಗೆ ಬೀರಿದ್ದರು.

Leave A Reply

Your email address will not be published.