Madhyapradesh: ಮದುವೆಗೆ 1 ದಿನ ಇರುವಾಗಲೇ ಮಧುಮಗಳ ಮೇಲೆ ಅತ್ಯಾಚಾರ – ಗಂಡಿನ ಕುಟುಂಬದವರು ಮಾಡಿದ್ದೇನು?

Share the Article

Madhyapradesh: ಮದುವೆಗೆ ಒಂದು ದಿನ ಬಾಕಿ ಇರುವಾಗಲೇ ಮಧುಮಗಳ ಮೇಲೆ ಅತ್ಯಾಚಾರವಾಗಿದ್ದು ಇದನ್ನು ತಿಳಿದವರನ್ನು ಕುಟುಂಬದವರು ಮದುವೆಯನ್ನು ರದ್ದು ಮಾಡಿ ಹೋಗಿದ್ದಾರೆ.

ಇದನ್ನೂ ಓದಿ: Jayadeva hospital director: ಜಯದೇವ ಆಸ್ಪತ್ರೆಯ ನಿರ್ದೇಶಕರಾಗಿ ಡಾ.ರವೀಂದ್ರನಾಥ್ ನೇಮಕ !!

ಹೌದು, ಮಧ್ಯಪ್ರದೇಶದ(Madhyapradesh) ರೇವಾ ಜಿಲ್ಲೆಯಲ್ಲಿ ಮನಮಿಡಿಯುವ ಘಟನೆಯೊಂದು ನಡೆದಿದ್ದು, ಮರುದಿನ ಮದುವೆಯಾಗಲಿರುವ ಹುಡುಗಿಯ ಮೇಲೆಯೇ ಅತ್ಯಾಚಾರ ನಡೆದಿದೆ. ಕಳೆದ ವರ್ಷ ಡಿಸೆಂಬರ್ 3 ರಂದು 23ರ ಯುವತಿಯ ಮದುವೆ ನಿಗದಿಯಾಗಿದ್ದು, ಹಿಂದಿನ ದಿನ, ಅಂದರೆ 22ರಂದು ಕೆಲ ವಸ್ತುಗಳನ್ನು ಕೊಳ್ಳಲು ಯುವತಿ ಪಟ್ಟಣಕ್ಕೆ ತೆರಳಿದ್ದು, ಯುವತಿ ಮರಳಿ ಬರುವಾಗ ಸಂಜೆಯಾಗಿದೆ. ಆದರೆ ಮರಳಿ ಬರವು ದಾರಿಯಲ್ಲಿ ಯುವತಿಗೆ ಪರಿಚಯಸ್ಥ ವ್ಯಕ್ತಿ ಸಿಕ್ಕದ್ದು, ಮಾತನಾಡುತ್ತಾ ಬಂದ ಈತ ನಿರ್ಜನ ಪ್ರದೇಶ ತಲುಪುತ್ತಿದ್ದಂತೆ ಯುವತಿಯನ್ನು ಎಳೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರದ ಬಳಿಕ ಈ ವಿಚಾರ ಯಾರಿಗಾದರೂ ಬಾಯ್ಬಿಟ್ಟರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಆಗಾತಕ್ಕೊಳಗಾದ ಆ ಹೆಣ್ಣು ಮಗಳು ಆರೋಪಿಯ ಬೆದರಿಕೆ, ತನ್ನ ಭವಿಷ್ಯ, ಪೋಷಕರ ಆಸೆ ಆಕಾಂಕ್ಷೆ ಎಲ್ಲವನ್ನೂ ನೆನೆಪಿಸಿಕೊಂಡು ಯಾರಿಗೂ ಏನನ್ನು ಹೇಳದೆ ಮರುದಿನದ ಮದುವೆಗೆ ಅಣಿಯಾಗಿದ್ದಾಳೆ. ಬಳಿಕ ಮದುವೆಯಾಗಿ ಒಂದು ತಿಂಗಳು ಸಂಸಾರ ಕೂಡ ಮಾಡೆದ್ದಾಳೆ. ಆದರೆ ಮನಸ್ಸು ಕೇಳದ ಕಾರಣ ಜನವರಿ 23ರಂದು ತನ್ನ ಪೋಷಕರಿಗೆ ನಡೆದ ಘಟನೆಯನ್ನು ಹೇಳಿದ್ದಾಳೆ.

ಮಗಳಿಗೆ ಸಮಾಧಾನ ಹೇಳಿದ ಪೋಷಕರು ಪೋಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ವಿಚಾರ ಹೇಗೋ ಗಂಡನ ಮನೆಯವರಿಗೆ ತಿಳಿದಿದ್ದು, ಅತ್ಯಾಚಾರ ಆದ ಯುವತಿಯೊಂದಿಗೆ ಸಂಬಂಧವೇ ಬೇಡ ಎಂದು ರಂಪಾಟ ಮಾಡಿ ಸಂಬಂಧವನ್ನೇ ಕಡಿದುಕೊಂಡಿದ್ದಾರೆ. ಎರಡೆರಡು ಆಘಾತದಿಂದ ಯುವತಿ ಹಾಗೂ ಆಕೆಯ ಕುಟುಂಬದವರು ಕಂಗಾಲಾಗಿದ್ದಾರೆ.

Leave A Reply