LPG Price: ಬಜೆಟ್‌ ಘೋಷಣೆ ಮುನ್ನವೇ ಜನಸಾಮಾನ್ಯರಿಗೆ ಶಾಕಿಂಗ್‌ ನ್ಯೂಸ್‌; ಹೆಚ್ಚಿದೆ ವಾಣಿಜ್ಯ ಸಿಲಿಂಡರ್‌ ಬೆಲೆ!!!

Share the Article

LPG Price: ತಿಂಗಳ ಮೊದಲ ದಿನ ಇಂಧನ ಕಂಪನಿಗಳು ಜನಸಾಮಾನ್ಯರಿಗೆ ಬಿಗ್‌ಶಾಕ್‌ ನೀಡಿದೆ. ಇಂದು LPG ಹೊಸ ದರಗಳು ಪ್ರಕರಣವಾಗಿದ್ದು, ಈ ಬೆಲೆಗಳು ಇಂದಿನಿಂದಲೇ ಜಾರಿಗೆ ಬರಲಿದೆ.

ಗುರುವಾರ ತೈಲಮಾರುಕಟ್ಟೆ ಕಂಪನಿಗಳು (Oil Marketing Companies (OMCs) ಎಲ್‌ಪಿಜಿ ಬೆಲೆ ಪರಿಷ್ಕರಣೆ ಘೋಷಿಸಿದೆ.

ಇಂದು ವಾಣಿಜ್ಯ ಬಳಕೆಯ ಸಿಲಿಂಡರ್‌ ಬೆಲೆಯಲ್ಲಿ ಹೆಚ್ಚಳ ಕಂಡಿದ್ದು, ಗೃಹ ಬಳಕೆಯ ಸಿಲಿಂಡರ್‌ ಬೆಲೆ ಸ್ಥಿರವಾಗಿದೆ. ಇದರಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಇದನ್ನೂ ಓದಿ: Tirumala Tirupati: ತಿರುಪತಿ ತಿಮ್ಮಪ್ಪನ ಬಜೆಟ್‌ ಭರ್ಜರಿ ಏರಿಕೆ; ವಧು-ವರರಿಗೆ ಸಿಹಿ ಸುದ್ದಿ ನೀಡಿದ ಟಿಟಿಡಿ!

19 ಕೆಜಿಯ ವಾಣಿಜ್ಯ ಸಿಲಿಂಡರ್‌ ಬೆಲೆಯಲ್ಲಿ 14 ರೂ. ಗಳಷ್ಟು ಏರಿಕೆ ಕಂಡಿದೆ. ಕೋಲ್ಕತ್ತಾದಲ್ಲಿ 1,887 ರೂ., ಮುಂಬೈ: 1723.50 ರೂ. ಚೆನ್ನೈ: 1,937 ರೂ ಮತ್ತು ಬೆಂಗಳೂರಿನಲ್ಲಿ 1,851.50 ರೂಪಾಯಿ ಇದೆ.

ಗೃಹ ಬಳಕೆಯ ಸಿಲಿಂಡರ್‌ ಬೆಲೆ 14.2 ಕೆಜಿ ಗೆ ದೆಹಲಿಯಲ್ಲಿ 903 ರೂಪಾಯಿ, ಕೋಲ್ಕತ್ತಾದಲ್ಲಿ 929 ರೂ., ಚೆನ್ನೈ: 918.50 ರೂ. ಮತ್ತು ಬೆಂಗಳೂರಿನಲ್ಲಿ 905 ರೂಪಾಯಿ ಇದೆ.

Leave A Reply