Udupi: ವಿದ್ಯಾರ್ಥಿಗಳ ನಡುವೆ ಗಲಾಟೆ; ಚೂರಿ ಇರಿತ, ಪ್ರಕರಣ ದಾಖಲು!!

Udupi: ಬ್ರಹ್ಮಾವರ ಕಾಲೇಜೊಂದರ ಪಿಯುಸಿ ವಿದ್ಯಾರ್ಥಿಗಳಿಂದ ಬೈಕ್‌ ವಿಚಾರಕ್ಕೆ ನಡೆದ ಜಗಳವೊಂದು ಉಲ್ಭಣಿಸಿ ಕೊಲೆಯತ್ನ ನಡೆದಿರುವ ಬಗ್ಗೆ ದೂರು ದಾಖಲಾಗಿದೆ.

ಪ್ರತೀಕ್‌, ಸುಹಾಸ್‌ ಒಂದೇ ಕಾಲೇಜಿನ ವಿದ್ಯಾರ್ಥಿಗಳು. ಸೆಕೆಂಡ್‌ಹ್ಯಾಂಡ್‌ ಬೈಕ್‌ ಖರೀದಿ ಮಾಡಿರುವುದನ್ನು ಕಂಡ ಆರೋಪಿ ಸುಹಾಸ್‌ ಇದು ಕದ್ದ ಬೈಕ್‌ ಎಂದು ಆರೋಪ ಮಾಡಿದ್ದಾನೆ.

ಇದನ್ನೂ ಓದಿ: Jharkhand: ಶಿಕ್ಷಕಿಯೊಂದಿಗೆ ಇಬ್ಬರು ಶಿಕ್ಷಕರ ಲವ್‌!! ತ್ರಿಕೋನ ಪ್ರೇಮ ಕಥೆಗೆ ದುರಂತ ಅಂತ್ಯ!!!

ಜ.28 ರಂದು ಸುಹಾಸ್‌ಗೆ ಪ್ರತೀಕ್‌ ಕರೆ ಮಾಡಿದ್ದು, ಈ ಸಂದರ್ಭ ಸುಹಾಸ್‌ ಜೊತೆಗಿದ್ದ ತರುಣ್‌ ಬೈದಿದ್ದಾಗಿ ವರದಿಯಾಗಿದೆ. ಜ.29 ರಂದು ಪ್ರತೀಕ್‌, ಸುಹಾಸ್‌ಗೆ ಎಂಜಿಎಂ ಮೈದಾನದ ಹತ್ತಿರ ಬರಲು ತಿಳಿಸಿದ್ದು, ಈ ಸಂದರ್ಭದಲ್ಲಿ ಆರೋಪಿಗಳು ನಿಂದನೆ ಮಾಡಿ ಹೊಡೆದಿದ್ದಾರೆ.

ಆರೋಪಿ ತರುಣ್‌ ಪ್ರತೀಕ್‌ಗೆ ಚಾಕುವಿನಿಂದ ಹೊಟ್ಟೆ, ತೊಡೆಗೆ ಇರಿದಿದ್ದು, ಜೀವ ಬೆದರಿಕೆ ಕೂಡಾ ಹಾಕಿರುವುದಾಗಿ ಉಡುಪಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.