Murder News: ಕಾಂಗ್ರೆಸ್‌ ಕಚೇರಿ ಎದುರೇ ಯುವಕನ ಭೀಕರ ಹತ್ಯೆ:

Hubballi: ಕಾಂಗ್ರೆಸ್‌ ಕಚೇರಿಯ ಎದುರೇ ಯುವಕನೋರ್ವನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆಯೊಂದು ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿರುವ ಕಾಂಗ್ರೆಸ್‌ ಕಚೇರಿ ಎದುರಲ್ಲೇ ಈ ಭೀಕರ ಘಟನೆ ನಡೆದಿದೆ.

Murder News

28 ವರ್ಷದ ಯುವಕನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಕಲ್ಲು ಎತ್ತಿಹಾಕಿ, ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಲಾಗಿದೆ.

ಸ್ನೇಹಿತರೆಲ್ಲ ಸೇರಿ ರಾತ್ರಿ ಪಾರ್ಟಿ ಮಾಡಿದ್ದು, ನಂತರ ಯುವಕನನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ ಎಂದು ಹೇಳಲಾಗಿದೆ. ಈ ಘಟನೆ ಕುರಿತು ಹುಬ್ಬಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Leave A Reply

Your email address will not be published.