Schoking news: 8 ವರ್ಷದ ಪ್ರೀತಿಯ ಮದುವೆಗೆ ಕೆಲವೇ ದಿನ ಬಾಕಿ, ಭಾವಿ ಗಂಡ ಹೇಳಿದ್ದನ್ನು ಕೇಳಿ ಕುಸಿದು ಬಿದ್ದ ಮದುಮಗಳು !!

Shocking news: ಮದುವೆ ಎಂದರೆ ಅದೊಂದು ಜೀವನದ ಅವಿಸ್ಮರಣೆಯ ಸಂದರ್ಭ. ಅದರಲ್ಲೂ ಮದುವೆ ಹತ್ತಿರ ಬಂತೆಂದರೆ ಸಾಕು ಮದು-ಮಕ್ಕಳಲ್ಲಿ ಎಲ್ಲಿಲ್ಲದ ಸಂತೋಷ, ಹುರುಪು, ಜೊತೆಗೆ ಏನೋ ಒಂದು ಆತಂಕ. ಈ ಸಂದರ್ಭದಲ್ಲಿ ಮಾತುಕತೆಗಳು ಕೂಡ ಹೆಚ್ಚಾಗಿರುತ್ತವೆ, ಕೆಲವೊಂದು ಪರ್ಸನಲ್ ವಿಚಾರಗಳನ್ನು ಹಂಚಿಕೊಳ್ಳುವುದು, ನಾಚುವುದು, ಭವಿಷ್ಯದ ಚಿಂತನೆ ಹೀಗೆ ಎಲ್ಲವೂ ಮಜವಾಗಿರುತ್ತದೆ. ಆದರೆ ಇಲ್ಲೊಂದೆಡೆ ಮದುವೆಗೆ ಇನ್ನು ಕೆಲವೇ ದಿನಗಳು ಭಾಕಿ ಇರುವಾಗ ಭಾವಿ ಗಂಡ ಹೇಳಿದ್ದನ್ನು ಕೇಳಿ ಮದುಮಗಳು ಕುಸಿದು ಬಿದ್ದಿದ್ದಾಳೆ.

ಇದನ್ನೂ ಓದಿ: Gicchi Giligili: ಗಿಚ್ಚಿಗಿಲಿಗಿಲಿ ಸೀಸನ್‌ 3ಗೆ ಪ್ರೇಕ್ಷಕರನ್ನು ಮನರಂಜಿಸಲು ಬರಲಿದ್ದಾರೆ ತುಕಾಲಿ ಸಂತೋಷ್‌, ಇಶಾನಿ, ಡ್ರೋಣ್‌ ಪ್ರತಾಪ್‌!!!

ಹೌದು, ಮದುವೆಗೆ ಕೆಲವೇ ದಿನಗಳು ಬಾಕಿ ಇರುವಾಗ ನವ ವಧುವಿಗೆ ತನ್ನ ಗಂಡನ ಸ್ಪೋಟಕ ರಹಸ್ಯವೊಂದು ಗೊತ್ತಾಗಿದೆ. ಅದೂ ಕೂಡ ಆಕೆಯ ಭಾವೀ ಪತಿಯೇ ಈ ವಿಚಾರವನ್ನು ಕಕ್ಕಿದ್ದಾನೆ. ಇದರಿಂದ ಇನ್ನೇನು ಕೆಲವೇ ದಿನಗಳಲ್ಲಿ ಮದುವೆಯಾಗುತ್ತೇನೆ, ಗಂಡನೊಂದಿಗೆ ನೆಮ್ಮದಿಯಿಂದ ಇರುತ್ತೇನೆ ಎಂದು ಕನಸು ಕಟ್ಟಿಕೊಂಡ ಮದುಮಗಳಿಗೆ ತಾನು ಮದುವೆಯಾಗಬೇಕೋ, ಬಿಡಬೇಕೋ ಎಂಬ ಚಿಂತೆಯಿಂದ ಇಕ್ಕಟ್ಟಿಗೆ ಸಿಲುಕಿದ್ದಾಳೆ.

ಅಂದಹಾಗೆ ಹೆಸರೇಳಲು ಇಚ್ಛಿಸದೆ ತನ್ನ ವ್ಯಥೆಯನ್ನು ಆಸ್ಟ್ರೇಲಿಯನ್ ಪಾಡ್‌ಕಾಸ್ಟ್ “ಎವೆರಿಬಡಿ ಹ್ಯಾಸ್ ಎ ಸೀಕ್ರೆಟ್”ನಲ್ಲಿ ಹಂಚಿಕೊಂಡಿರುವ ವಧು ಒಬ್ಬಳು ಮದುವೆ ವಿಚಾರವಾಗಿ ತಾನಿರುವ ಇಕ್ಕಟ್ಟಿನ ಪರಿಸ್ಥಿತಿಯನ್ನು ಜನರ ಮುಂದೆ ತೆರೆದಿಟ್ಟಿದ್ದಾಳೆ. ತನ್ನ ಭಾವಿ ಪತಿ, ತನ್ನ ಬಾಳ ಸಂಗಾತಿಯ ಜತೆ ಯಾವುದೇ ಸಮಸ್ಯೆಯು ಇರಲಿಲ್ಲ ಎಂದಿರುವ ವಧು, ಆತನೋರ್ವ ಉಭಯ ಲಿಂಗಿ ಅಥವಾ ದ್ವಿಲಿಂಗಿ (ಮಹಿಳೆ ಮತ್ತು ಪುರುಷ ಇಬ್ಬರ ಜತೆಯು ಲೈಂಗಿಕ ಬಯಕೆ ಹಂಚಿಕೊಳ್ಳುವವರು) ಎಂದು ತಿಳಿದು ಆಘಾತಕ್ಕೆ ಒಳಗಾಗಿದ್ದಾಳೆ.

ವಿಚಿತ್ರ ಅಂದರೆ ಇವರಿಬ್ಬರು ಸುಮಾರು 8 ವರ್ಷಗಳ ಕಾಲ ಜತೆಗಿದ್ದ ಬಳಿಕ ಇನ್ನು ಕೆಲವೇ ವಾರಗಳಲ್ಲಿ ಮದುವೆಯಾಗಲು ಇಬ್ಬರು ಸಕಲ ತಯಾರಿ ಮಾಡಿಕೊಂಡಿದ್ದಾರೆ. ಆದರೆ ಇದರ ನಡುವೆಯೇ ಈ ವಿಚಿತ್ರವಾದ, ಅಚ್ಚರಿಯಾದ ಸಂಗತಿ ಬಯಲಾಗಿಹೋಗಿದೆ.

ವಿಚಾರ ಗೊತ್ತಾದದ್ದು ಹೇಗೆ?

ವಧುವಿನ ಭಾವಿ ಪತಿ ಇತ್ತೀಚೆಗಷ್ಟೇ ತಮ್ಮ ಫ್ರೆಂಡ್ಸ್ ಗ್ರೂಪ್ ನಲ್ಲಿ ಚಾಟ್ ಮಾಡುವಾಗ ವರ್ಷದ ಹಿಂದಷ್ಟೇ ಪುರುಷನ ಜತೆ ಸಲಿಂಗ ಕಾಮದಲ್ಲಿ ತೊಡಗಿ ಮೋಸ ಮಾಡಿದ್ದನ್ನು ಬಹಿರಂಗಪಡಿಸಿದನು. ಪಾರ್ಟಿ ಒಂದರಲ್ಲಿ ಆಲ್ಕೋಹಾಲ್ ಸೇವಿಸಿ, ವ್ಯಕ್ತಿಯೊಬ್ಬನ ಜತೆ ಲೈಂಗಿಕ ಕ್ರಿಯೆ ನಡೆಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಇದರಿಂದ ಮದುವೆ ಹೆಣ್ಣಿನ ಹೃದಯ ಚಿದ್ರವಾಗಿದೆ.

ಇನ್ನು ಸದ್ಯ ವಧು, ಭಾವಿ ಪತಿಯಿಂದ ಕಾಲಾವಕಾಶ ಕೇಳಿ ಅಂತರ ಕಾಯ್ದುಕೊಂಡಿದ್ದು, ಮದುವೆ ಮುಂದುವರಿಸಬೇಕಾ? ಬೇಡ್ವಾ? ಎಂಬ ಚಿಂತೆಯಲ್ಲಿ ಮುಳುಗಿದ್ದಾಳೆ. ನಾನು ಯಾರೊಂದಿಗೂ ಈ ವಿಚಾರವನ್ನು ಹೇಳಿಲ್ಲ, ನನ್ನಲ್ಲಿಯೇ ತುಂಬಾ ನೋವು ಅನುಭವಿಸುತ್ತಿದ್ದೇನೆ ಎಂದು ವಧು ಹೇಳಿದ್ದಾಳೆ.

Leave A Reply

Your email address will not be published.