Gicchi Giligili: ಗಿಚ್ಚಿಗಿಲಿಗಿಲಿ ಸೀಸನ್‌ 3ಗೆ ಪ್ರೇಕ್ಷಕರನ್ನು ಮನರಂಜಿಸಲು ಬರಲಿದ್ದಾರೆ ತುಕಾಲಿ ಸಂತೋಷ್‌, ಇಶಾನಿ, ಡ್ರೋಣ್‌ ಪ್ರತಾಪ್‌!!!

Gicchi Giligili: ಬಿಗ್‌ಬಾಸ್‌ ಸೀಸನ್‌ ಮುಗಿದ ಮೇಲೆ ಇದೀಗ ಪ್ರೇಕ್ಷಕರನ್ನು ಮನರಂಜಿಸಲು ಕಲರ್ಸ್‌ ಕನ್ನಡ ಚಾನೆಲ್‌ನಲ್ಲಿ ಗಿಚ್ಚಿಗಿಲಿಗಿಲಿ ಸೀಸನ್‌ 3 ಬರಲಿದ್ದು, ಇದರ ತೀರ್ಪುಗಾರರಾಗಿ ಕೋಮಲ್ ಕುಮಾರ್, ಸಾಧುಕೋಕಿಲ, ಶ್ರುತಿ ಅವರು ಇದ್ದಾರೆ. ಬಿಗ್‌ಬಾಸ್‌ನಿಂದ ಈ ಬಾರಿ ಸ್ಪರ್ಧಿಗಳಾಗಿ ಡ್ರೋನ್ ಪ್ರತಾಪ್, ಇಶಾನಿ, ತುಕಾಲಿ ಸಂತೋಷ್ ಅವರನ್ನು ಗಿಚ್ಚಿಗಿಚ್ಚಿಗಿಲಿ ಸೀಸನ್‌ 3 ರಲ್ಲಿ ಕಾಣಬಹುದು. ಅದರಲ್ಲೂ ಡ್ರೋನ್‌ ಪ್ರತಾಪ್‌ ಅವರು ಯಾವುದೇ ಮನರಂಜನಾ ಕ್ಷೇತ್ರದಿಂದ ಬಂದವರಲ್ಲದಿದ್ದರೂ ಇವರು ಕೂಡಾ ನಿಮ್ಮನ್ನು ರಂಜಿಸಲಿದ್ದಾರೆ.

ಇದನ್ನೂ ಓದಿ: Lakshmana savadi: ಆಪರೇಷನ್ ಕಮಲ – ಲಕ್ಷ್ಮಣ ಸವದಿಗೆ ಬಿಜೆಪಿ ಕೊಡ್ತು ಭರ್ಜರಿ ಆಫರ್!!

ಪ್ರತಿವರ್ಷನೂ ಗಿಚ್ಚಿಗಿಲಿಗಿಲಿ ತಂಡದಲ್ಲಿ ಬಿಗ್‌ಬಾಸ್‌ ಸ್ಪರ್ಧಿಗಳು ತಮ್ಮ ಪ್ರತಿಭೆಯನ್ನು ತೋರುವುದು ಸಾಮಾನ್ಯ. ಈ ಬಾರಿಯೂ ಕೂಡಾ ಬಿಗ್‌ಬಾಸ್‌ ಸೀಸನ್‌ 10ರ ಪ್ರಬಲ ಸ್ಪರ್ಧಿಗಳಾದ ಇಶಾನಿ, ಡ್ರೋನ್‌ ಪ್ರತಾಪ್‌, ತುಕಾಲಿ ಸಂತೋಷ್‌ ಅವರು ಇರಲಿದ್ದು ಜನರಲ್ಲಿ ಕುತೂಹಲ ಹೆಚ್ಚಾಗಿದೆ ಎಂದೇ ಹೇಳಬಹುದು.

Leave A Reply

Your email address will not be published.