Muslim cleric: ರಾಮನ ಪ್ರಾಣ ಪ್ರತಿಷ್ಠಾಪನೆಯಲ್ಲಿ ಭಾಗವಹಿಸಿದ್ದ ಇಮಾಮ್ ವಿರುದ್ಧ ಸಿಡಿಸಿದೆದ್ದ ಮುಸ್ಲಿಂ ಸಮುದಾಯ – ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ಟ ಧರ್ಮ ಗುರು

Muslim cleric: ಜನವರಿ 22ರಂದು ನಡೆದ ಅಯೋಧ್ಯಾ ರಾಮ ಮಂದಿರ (Ayodhya Ram Mandir) ಪ್ರಾಣ ಪ್ರತಿಷ್ಠಾಪನೆಯಲ್ಲಿ (Pran Pratishtha) ಪಾಲ್ಗೊಂಡ ಮುಸ್ಲಿಮ್ ಧರ್ಮ (Muslim cleric) ಗುರುಗಳಾದ ಡಾ. ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಅವರ ವಿರುದ್ಧ ಇದೀಗ ಮುಸ್ಲಿಂ ಸಮುದಾಯ ತಿರುಗಿಬಿದ್ದಿದ್ದು, ಕಟ್ಟರ್ ಇಸ್ಲಾಮಿಸ್ಟ್‌ಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಬೆದರಿಕೆ ಕರೆಗಳೂ ಬರುತ್ತಿವೆ.

https://x.com/ANI/status/1751966184189370423?t=3MwGAbPMa1idz5CbYQyYUg&s=08

ಇದನ್ನೂ ಓದಿ: Budget Session: ಕೇಂದ್ರ ಬಜೆಟ್‌ 2024 ನಾಳೆ ಮಂಡನೆ; ಮೋದಿ ಸರ್ಕಾರದ ಎರಡನೇ ಅವಧಿಯ ಕೊನೆಯ ಅಧಿವೇಶನ!

ಹೌದು, ರಾಮಲಲ್ಲನ ಪ್ರಾಣ ಪ್ರತಿಷ್ಠೆ ಸಮಾರಂಭದಲ್ಲಿ ಡಾ. ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ (Dr Imam Umer Ahmed Ilyasi) ಅವರಿಗೆ ಫತ್ವಾ ಹೊರಡಿಸಲಾಗಿದೆ. ಈ ವಿಚಾರವನ್ನು ಸ್ವತಃ ಉಮರ್‌ ಅಹ್ಮದ್‌ ಅವರೇ ತಿಳಿಸಿದ್ದು ಮುಖ್ಯ ಇಮಾಮ್ ಆಗಿ ನಾನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದಿಂದ ಆಹ್ವಾನವನ್ನು ಸ್ವೀಕರಿಸಿದ್ದೇನೆ. ಇದಕ್ಕಾಗಿ ನಾನು ಎರಡು ದಿನ ಆಲೋಚಿಸಿ ನಂತರ ದೇಶಕ್ಕಾಗಿ ಸೌಹಾರ್ದತೆಗಾಗಿ ಅಯೋಧ್ಯೆಗೆ (Ayodhya Ram Mandir) ಹೋಗಲು ನಿರ್ಧರಿಸಿದೆ ತಿಳಿಸಿದ್ದಾರೆ. ಅಲ್ಲದೆ ತನ್ನ ವಿರುದ್ಧ ಸಿಡಿದೆದ್ದವರಿಗೆ ಮುಟ್ಟಿನೋಡುವಂತೆ ಉತ್ತರಿಸಿದ್ದಾರೆ.

ದ್ವೇಷಿಗಳು ಪಾಕಿಸ್ತಾನಕ್ಕೆ ಹೋಗಬಹುದು ಎಂದ ಧರ್ಮ ಗುರು:

ತನ್ನ ಮೇಲೆ ಫತ್ವಾ ಹೊರಡಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಆಲ್ ಇಂಡಿಯಾ ಇಮಾಮ್ ಸಂಘಟನೆಯ ಮುಖ್ಯಸ್ಥ ಡಾ. ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ 22 ರ ಸಂಜೆಯಿಂದಲೇ ನನಗೆ ಬೆದರಿಕೆ ಕರೆಗಳು ಬರುತ್ತಿವೆ. ನಾನು ಕೆಲವು ಕರೆಗಳನ್ನು ರೆಕಾರ್ಡ್ ಮಾಡಿದ್ದು, ಅದರಲ್ಲಿ ಕರೆ ಮಾಡಿದವರು ನನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ನನ್ನನ್ನು ಪ್ರೀತಿಸುವವರು ಹಾಗೂ ರಾಷ್ಟ್ರವನ್ನು ಪ್ರೀತಿಸುವವರು ನನ್ನನ್ನು ಬೆಂಬಲಿಸುತ್ತಾರೆ. ಪ್ರಾಣಪ್ರತಿಷ್ಠೆ ಸಮಾರಂಭದಲ್ಲಿ ಭಾಗವಹಿಸಿದ್ದಕ್ಕಾಗಿ ನನ್ನನ್ನು ದ್ವೇಷಿಸುವವರು ಬಹುಶಃ ಪಾಕಿಸ್ತಾನಕ್ಕೆ ಹೋಗಬೇಕು. ನಾನು ಪ್ರೀತಿಯ ಸಂದೇಶವನ್ನು ನೀಡಿದ್ದೇನೆ, ನಾನು ಯಾವುದೇ ಅಪರಾಧ ಮಾಡಿಲ್ಲ. ಈ ಹಿನ್ನೆಲೆ, ನಾನು ಕ್ಷಮೆಯಾಚಿಸುವುದಿಲ್ಲ ಅಥವಾ ರಾಜೀನಾಮೆ ನೀಡುವುದಿಲ್ಲ, ಅವರು ಏನು ಬೇಕಾದರೂ ಮಾಡಲಿ. ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಹೋಗುವ ನಿರ್ಧಾರವು ನನ್ನ ಜೀವನದ ಅತ್ಯಂತ ದೊಡ್ಡ ನಿರ್ಧಾರಗಳಲ್ಲಿ ಒಂದಾಗಿದೆ ಎಂದೂ ಇಮಾದ್ ಹೇಳಿದರು.

Leave A Reply

Your email address will not be published.