Ranjith Sreenivas: ಬಿಜೆಪಿ ನಾಯಕನ ಹತ್ಯೆ; PFI ನ 15 ಸದಸ್ಯರಿಗೆ ಗಲ್ಲು ಶಿಕ್ಷೆ!

RSS activist Ranjith Sreenivasan Murder: ಆರ್‌ಎಸ್‌ಎಸ್ ಮುಖಂಡ ರಂಜಿತ್ ಶ್ರೀನಿವಾಸ್ ಹತ್ಯೆ ಪ್ರಕರಣದಲ್ಲಿ ಕೇರಳದ ಸ್ಥಳೀಯ ನ್ಯಾಯಾಲಯವು 15 ಪಿಎಫ್‌ಐ ಕಾರ್ಯಕರ್ತರಿಗೆ ಮರಣದಂಡನೆ ವಿಧಿಸಿದೆ. ವಕೀಲ ಮತ್ತು ಆರ್‌ಎಸ್‌ಎಸ್ ಮುಖಂಡನ ಹತ್ಯೆಯಲ್ಲಿ ಈ ಎಲ್ಲ ಆರೋಪಿಗಳನ್ನು ನ್ಯಾಯಾಲಯ ತಪ್ಪಿತಸ್ಥರೆಂದು ತೀರ್ಪು ನೀಡಿದೆ. ರಂಜಿತ್ ಅವರನ್ನು ಡಿಸೆಂಬರ್ 19, 2021 ರಂದು ಅಲಪ್ಪುಳದ ಅವರ ಮನೆಯಲ್ಲಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಬಂಧಿತ ಆರೋಪಿಗಳೆಲ್ಲರೂ ನಿಷೇಧಿತ ಸಂಘಟನೆ ಪಿಎಫ್‌ಐ ಸದಸ್ಯರಾಗಿದ್ದರು.‌

ಇದನ್ನೂ ಓದಿ: Maldives : ಭಾರತದೊಂದಿಗೆ ದ್ವೇಷ ಕಟ್ಟಿಕೊಂಡ ಮಾಲ್ಡೀವ್ಸ್’ಗೆ ಮತ್ತೊಂದು ಆಘಾತ!!

Ranjith Sreenivas

ರಂಜೀತ್ ಅವರು ಬಿಜೆಪಿಯ ಒಬಿಸಿ ಮೋರ್ಚಾದೊಂದಿಗೆ ಇದ್ದರು. ಅವರನ್ನು ಡಿಸೆಂಬರ್ 19, 2021 ರಂದು ಅವರ ಮನೆಯಲ್ಲಿ ಅವರ ಪತ್ನಿ ಮತ್ತು ತಾಯಿಯ ಎದುರೇ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ತಪ್ಪಿತಸ್ಥರಿಗೆ ಗರಿಷ್ಠ ಶಿಕ್ಷೆ ನೀಡುವಂತೆ ರಂಜೀತ್ ಕಡೆಯವರು ನ್ಯಾಯಾಲಯವನ್ನು ಕೋರಿದ್ದರು. ಜನವರಿ 20 ರಂದೇ ನ್ಯಾಯಾಲಯದ ಇವರನ್ನೆಲ್ಲ ದೋಷಿ ಎಂದು ತೀರ್ಪು ನೀಡಿದ್ದಾದರೂ, ಶಿಕ್ಷೆ ಪ್ರಮಾಣ ಪ್ರಕಟಿಸಿರಲಿಲ್ಲ. ಈಗ ಎಲ್ಲಾ ಅಪರಾಧಿಗಳಿಗೂ ಗಲ್ಲು ಶಿಕ್ಷೆ ವಿಧಿಸಲಾಗಿದೆ.

ರಂಜಿತ್ ಶ್ರೀನಿವಾಸ್ ಹತ್ಯೆ ಪ್ರಕರಣದ ಎಲ್ಲಾ 15 ಅಪರಾಧಿಗಳಿಗೆ ಮಾವೇಲಿಕ್ಕರ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಮಂಗಳವಾರ ಗಲ್ಲು ಶಿಕ್ಷೆ ವಿಧಿಸಿದೆ. ಕೊಲೆಯಲ್ಲಿ 8 ಮಂದಿ ಆರೋಪಿಗಳು ನೇರವಾಗಿ ಭಾಗಿಯಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. ಉಳಿದವರು ಹಲವು ರೀತಿಯಲ್ಲಿ ಕೊಲೆಗೆ ನೆರವು ನೀಡಿದ್ದರು ಎಂದು ನ್ಯಾಯಾಲಯ ಹೇಳಿದೆ. ಆರೋಪಿಗಳು ತರಬೇತಿ ಪಡೆದ ಹಂತಕರಾಗಿದ್ದು, ತಾಯಿ, ಮಕ್ಕಳು ಮತ್ತು ಪತ್ನಿಯ ಎದುರೇ ರಂಜಿತ್‌ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ತಿಳಿಸಿತ್ತು.

1 Comment
  1. […] ಇದನ್ನೂ ಓದಿ: Ranjith Sreenivas: ಬಿಜೆಪಿ ನಾಯಕನ ಹತ್ಯೆ; PFI ನ 15 ಸದಸ್ಯರ… […]

Leave A Reply

Your email address will not be published.