Viral News: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಹೀಗೊಂದು ರೀತಿ ಚುನಾವಣೆ ಪ್ರಚಾರ;

Chikkamagaluru: ಮದುವೆ ಆಮಂತ್ರಣದಲ್ಲಿ ಎಲ್ಲರೂ ಆಶೀರ್ವಾದವೇ ಉಡುಗೊರೆ ಹೀಗೆ ಹಲವು ವಿಧದಲ್ಲಿ ಬರೆಯುವುದನ್ನು ನೀವು ಕಂಡಿರಬಹುದು. ಆದರೆ ಇಲ್ಲೊಂದು ಕಡೆ ಆಮಂತ್ರಣ ಪತ್ರಿಕೆಯಲ್ಲಿ 2024ರ ಲೋಕಸಭೆ ಚುನಾವಣೆ ಪ್ರಚಾರ ಮಾಡಿರುವ ಕುರಿತು ವರದಿಯಾಗಿದೆ. ಈ ಘಟನೆ ಕಾಫಿನಾಡಲ್ಲಿ ನಡೆದಿದೆ.

ಇದನ್ನೂ ಓದಿ: Ranjith Sreenivas: ಬಿಜೆಪಿ ನಾಯಕನ ಹತ್ಯೆ; PFI ನ 15 ಸದಸ್ಯರಿಗೆ ಗಲ್ಲು ಶಿಕ್ಷೆ!

ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಶಶಿ ಎಂಬುವವರು ತನ್ನ ತಂಗಿ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ವಧುವರರಿಗೆ ಉಡುಗೊರೆ ಬೇಡ, ಮೋದಿಗೆ ಮತ ನೀಡಿ ಎಂದು ಬರೆಯುವ ಮೂಲಕ ಮನವಿ ಮಾಡಿದ್ದಾರೆ. ಮಕ್ಕಳ ಭವಿಷ್ಯ ಮೋದಿಯಿಂದ ಮಾತ್ರ ಸುಭದ್ರ ಎಂಬುವುದಾಗಿ ಕೂಡಾ ಬರೆದಿದ್ದಾರೆ.

ಅಲ್ಹೂರಿನವರಾದ ಶಶಿ ಅವರು ತಮ್ಮ ತಂಗಿಯ ವಿವಾಹ ಫೆ.5 ರಂದು ಚಿಕ್ಕಮಗಳೂರಿನಲ್ಲಿ ನಡೆಯಲಿದ್ದು, ಈಗ ಸದ್ಯಕ್ಕೆ ಈ ರೀತಿ ಪ್ರಚಾರ ಮಾಡಿದ್ದಾರೆ. ಇದೀಗ ಈ ಆಮಂತ್ರಣ ಕಾರ್ಡ್‌ ಫೋಟೋ ಸಹಿತ ವೈರಲ್‌ ಆಗುತ್ತಿದೆ.

Leave A Reply

Your email address will not be published.