Maldives : ಭಾರತದೊಂದಿಗೆ ದ್ವೇಷ ಕಟ್ಟಿಕೊಂಡ ಮಾಲ್ಡೀವ್ಸ್’ಗೆ ಮತ್ತೊಂದು ಆಘಾತ!!

Maldives : ಪ್ರವಾಸಿ ತಾಣದ ವಿಚಾರವಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿಯ(PM Modi)ವರನ್ನು ನಿಂದಿಸುವ ಮೂಲಕ ಭಾರತದ ದ್ವೇಷ ಕಟ್ಟಿಕೊಂಡಿರುವ ಮಾಲ್ಡೀವ್ಸ್ ಗೆ ಇದೀಗ ಮತ್ತೊಂದು ಆಘಾತ ಎದುರಾಗಿದೆ.

ಇದನ್ನೂ ಓದಿ: Mallikharjuna kharge: ದೇಶದಲ್ಲಿ ಇದೇ ಕೊನೆ ಚುನಾವಣೆ, ಇನ್ಮುಂದೆ ಯಾವ ಎಲೆಕ್ಷನ್ ಇರಲ್ಲ – ಮಲ್ಲಿಕಾರ್ಜುನ ಖರ್ಗೆ !!

ಹೌದು, ಮಾಲ್ಡೀವ್ಸ್ ಸರ್ಕಾರ ತೋರಿದ ಅಹಂಕಾರದ ನಡೆಯಿಂದ ಇದೀಗ ಮಾಲ್ಡೀವ್ಸ್‌ನ(Maldives)ಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಮೊನ್ನೆ ತಾನೆ ಸಂಸತ್ತೊಳಗೆ ನಾಯಕರು ಬಡಿದಾಡಿಕೊಂಡ ವಿಡಿಯೋ ಭಾರೀ ವೈರಲ್ ಆಗಿ ದೇಶದ ಮರ್ಯಾದೆ ಹರಾಜಾಗಿ ಹೋಗಿದೆ. ಈ ನಡುವೆ ಪ್ರವಾಸೋದ್ಯಮ ವಿಚಾರವಾಗಿ ಮಾಲ್ಡೀವ್ಸ್ ಖೆ ಮತ್ತೊಂದು ಶಾಕ್ ಎದುರಾಗಿದೆ.

ಅಂದಹಾಗೆ ಮಾಲ್ಡೀವ್ಸ್ ಸಂಸತು ಇಂಪೀಚ್‌ಮೆಂಟ್ ನಿರ್ಣಯ ಅಂಗೀಕರಿಸಿದ ಬೆನ್ನಲ್ಲೇ ಪ್ರವಾಸೋದ್ಯಮ ಇಲಾಖೆ ಪಟ್ಟಿಯೊಂದನ್ನು ಬಿಡುಗಡೆ ಮಾಡಿದೆ. ಮಾಲ್ಡೀವ್ಸ್ ಪ್ರವಾಸೋದ್ಯಮದಲ್ಲಿ ಭಾರತ 3ನೇ ಗರಿಷ್ಠ ಪ್ರವಾಸಿಗರನ್ನು ನೀಡುತ್ತಿದ್ದ ದೇಶವಾಗಿತ್ತು. ಇದೀಗ 5ನೇ ಸ್ಥಾನಕ್ಕೆ ಇಳಿದಿದೆ. ಅಂದಹಾಗೆ ಜನವರಿ ತಿಂಗಳಲ್ಲಿ ಮಾಲ್ಡೀವ್ಸ್ ಪ್ರವಾಸ ಮಾಡಿದವರ ಒಟ್ಟು ಸಂಖ್ಯೆ 174,400. ಈ ಪೈಕಿ ಭಾರತೀಯರ ಸಂಖ್ಯೆ 13,989. ಶೇಕಡಾ 8 ರಷ್ಟು ಭಾರತೀಯ ಪ್ರವಾಸಿಗರ ಸಂಖ್ಯೆಯಲ್ಲಿ ಕುಸಿತವಾಗಿದೆ.

Leave A Reply

Your email address will not be published.